
“ಚಾರ್ಲಿ’ ಶಿವ ಇನ್ನಿಲ್ಲ
Team Udayavani, Mar 3, 2018, 4:53 PM IST

ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಶಿವ (34) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನ ಹೊಂದಿದ್ದಾರೆ. “ಚಾರ್ಲಿ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಎಂಟ್ರಿಕೊಟ್ಟ ಶಿವ, “ಮಾಲ್ಗುಡಿ ಸ್ಪೆಷನ್’ ಎಂಬ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದರು.
ಜೊತೆಗೆ ಇನ್ನೊಂದು ಹೊಸ ಸಿನಿಮಾದ ಕೆಲಸದಲ್ಲೂ ತೊಡಗಿದ್ದರು. ಬೆಳಗಾವಿ ಮೂಲದ ಶಿವ ಸಿನಿಮಾ ಆಸೆಯಿಂದ ಬೆಂಗಳೂರಿಗೆ ಬಂದು ನಿರ್ದೇಶಕರಾದ ಸೂರಿ ಹಾಗೂ ಯೋಗರಾಜ್ ಭಟ್ ತಂಡ ಸೇರಿಕೊಂಡಿದ್ದರು. ಸೂರಿಯವರ “ಜಾಕಿ’, “ಅಣ್ಣಾಬಾಂಡ್’ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಶಿವ ಅವರು ಸ್ವತಂತ್ರ ನಿರ್ದೇಶಕರಾಗಿ “ಚಾರ್ಲಿ’ ಚಿತ್ರ ಮಾಡಿದ್ದರು. ಈ ಚಿತ್ರದಲ್ಲಿ “ಮದರಂಗಿ’ ಕೃಷ್ಣ ನಾಯಕರಾಗಿದ್ದರು.
ಎರಡು ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ಶಿವ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಇವರ ಅಂತ್ಯಕ್ರಿಯೆ ಬೆಳಗಾವಿಯ ಹುಟ್ಟೂರಿನಲ್ಲಿ ನಡೆಯಿತು. ಇವರು ಪತ್ನಿ ಹಾಗೂ ಕುಟುಂಬ ವರ್ಗವನ್ನು ಅಗಲಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
