Udayavni Special

ರಾಬರ್ಟ್‌ ಮೇಲೆ ಗೆಲುವಿನ ಆಶಾವಾದ

ಆಶಾ ಭಟ್‌ ಜತೆ ಮಾತುಕತೆ

Team Udayavani, Mar 3, 2021, 12:14 PM IST

ರಾಬರ್ಟ್‌ ಮೇಲೆ ಗೆಲುವಿನ ಆಶಾವಾದ

ಮೊದಲ ಸಿನಿಮಾದಲ್ಲೇ, ಸ್ಟಾರ್‌ ಹೀರೋಗಳ ಜೊತೆ ಪಾಪ್‌ ಕಾರ್ನರ್‌ ಹೀರೋಯಿನ್‌ ಆಗಿ ಅಭಿನಯಿಸುವ ಚಾನ್ಸ್‌ ಗಿಟ್ಟಿಸಿಕೊಂಡ ನಟಿಯರು ಸಹಜವಾಗಿಯೇ ಸಿನಿಪ್ರಿಯರ ಗಮನ ಸೆಳೆಯುತ್ತಾರೆ. ಈ ಬಾರಿ ಹಾಗೆ ಗಮನ ಸೆಳೆಯುತ್ತಿರುವವರು ಆಶಾ ಭಟ್‌. ಸದ್ಯ ಬಿಡುಗಡೆಗೆ ಸಿದ್ಧವಾಗಿರುವ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ರಾಬರ್ಟ್‌’ ಚಿತ್ರದ ಮೂಲಕ ಆಶಾ ಭಟ್‌

ಹೀರೋಯಿನ್‌ ಆಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. ಈಗಾಗಲೇ ರಿಲೀಸ್‌ ಆಗಿರುವ “ರಾಬರ್ಟ್‌’ ಹಾಡುಗಳಲ್ಲಿ ಆಶಾ ಭಟ್‌ ಗ್ಲಾಮರಸ್‌ ಲುಕ್‌, ಗೆಟಪ್‌ಗೆ ಚಾಲೆಂಜಿಂಗ್‌ ಸ್ಟಾರ್‌ ಫ್ಯಾನ್ಸ್‌ ಕೂಡ ಫಿದಾ ಆಗಿದ್ದಾರೆ. ಇದೇ ವೇಳೆ “ಉದಯವಾಣಿ’ ಜೊತೆಗೆ ಚಿಟ್‌-ಚಾಟ್‌ ನಡೆಸಿದ ಆಶಾ ಭಟ್‌, ತಮ್ಮ “ರಾಬರ್ಟ್‌’ ಚಿತ್ರ ಮತ್ತದರ ಅನುಭವಗಳ ಬಗ್ಗೆ ಒಂದಷ್ಟು ಮಾತನಾಡಿದ್ದಾರೆ.

ಇದನ್ನೂ ಓದಿ : ನೋಡುಗರ ಗಮನ ಸೆಳೆದ ಪ್ರೇಮನ್‌

ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ… :

ನಾನು ಅಪ್ಪಟ ಕನ್ನಡದ ಹುಡುಗಿ. ನಮ್ಮ ಅಪ್ಪ-ಅಮ್ಮನಿಗೆ ನಾನು ಎರಡನೇ ಮಗಳು. ಹುಟ್ಟಿದ್ದು, ಬೆಳೆದಿದ್ದು ಎಲ್ಲವೂ ಭದ್ರಾವತಿಯಲ್ಲಿ. ಪ್ರೈಮರಿ ಶಿಕ್ಷಣ ಭದ್ರಾವತಿಯಲ್ಲೇ ಆಯ್ತು. ಆನಂತರ ಮೂಡುಬಿದರೆಯಲ್ಲಿ ಪಿಯು, ಬೆಂಗಳೂರಿನಲ್ಲಿ ಇಂಜಿನಿಯರಿಂಗ್‌ ಶಿಕ್ಷಣ ಮುಗಿಸಿದೆ.

ಮಾಡೆಲಿಂಗ್‌ ಕಡೆಗೆ ಒಲವು ಶುರು ಯಾವಾಗ? :  ಕಾಲೇಜು ದಿನಗಳಲ್ಲೇ ಮಾಡೆಲಿಂಗ್‌ ಕಡೆಗೆ ಆಸಕ್ತಿ ಬೆಳೆಯಿತು. ಅವಕಾಶಸಿಕ್ಕಾಗ ಸ್ಟೇಜ್‌ ಪರ್ಫಾರ್ಮೆನ್ಸ್‌ ಕೂಡಮಾಡಿದ್ದೇನೆ. ಕಾಲೇಜ್‌ ಮುಗಿಯುತ್ತಿದ್ದಂತೆ, “ಮಿಸ್‌ ಸುಪ್ರ ಇಂಟರ್‌ನ್ಯಾಶನಲ್‌’ ಸ್ಪರ್ಧೆಯಲಿ ಭಾಗವಹಿಸಿ ಸೆಲೆಕ್ಟ್ ಆದೆ. ಅಲ್ಲಿಂದಮಾಡೆಲಿಂಗ್‌ ಕೆರಿಯರ್‌ ಶುರುವಾಯ್ತು. ಅದಾದ ಬಳಿಕ ಅನೇಕ ಕಂಟೆಸ್ಟ್‌ಗಳಲ್ಲಿ ಬಾಗವಹಿಸಿದೆ. ಆಮೇಲೆ ಅದೇ ಪ್ರೊಫೆಷನ್‌ಆಯ್ತು. ಮಾಡೆಲಿಂಗ್‌, ಆ್ಯಡ್‌ ಅಂಥ ಒಂದಷ್ಟು ಬಿಝಿಯಾದೆ.

ಸಿನಿಮಾ ಕಡೆಗೆ ಬಂದಿದ್ದು ಹೇಗೆ?  :

ನಾನು ಮಾಡೆಲಿಂಗ್‌ನ ಪ್ರೊಫೆಷನ್‌ ಆಗಿ ತೆಗೆದುಕೊಂಡ ಮೇಲೆ ಮುಂಬೈನಲ್ಲೇ ಸೆಟಲ್‌ ಆದೆ. ಮಾಡೆಲಿಂಗ್‌ ಜೊತೆಗೆ ಒಂದಷ್ಟು ಆ್ಯಡ್‌ ಫಿಲಂಗಳನ್ನೂ ಮಾಡಿದೆ. ಆ ವೇಳೆ ಅಲ್ಲಿ ಬಾಲಿವುಡ್‌ನಿಂದ ಒಂದಷ್ಟು ಸಿನಿಮಾಗಳ ಆಫ‌ರ್ ಬರೋದಕ್ಕೆ ಶುರುವಾಯ್ತು. 2017ರಲ್ಲಿ ಹಿಂದಿಯಲ್ಲಿ ಮೊದಲ ಬಾರಿಗೆ ವಿದ್ಯುತ್‌ ಜಮ್ವಾಲ್‌ ಜೊತೆ “ಜಂಗ್ಲಿ’ ಸಿನಿಮಾ ಮಾಡಿದೆ. ಅಲ್ಲಿಂದ ಸಿನಿಮಾ ಜರ್ನಿ ಕೂಡ ಶುರುವಾಯ್ತು.

“ರಾಬರ್ಟ್‌ಗೆ ಚಾನ್ಸ್‌ ಸಿಕ್ಕಿದ್ದು ಹೇಗೆ? :

ಬಾಲಿವುಡ್‌ನ‌ಲ್ಲಿ ನನ್ನ “ಜಂಗ್ಲಿ’ ಸಿನಿಮಾ ನೋಡಿದ ಡೈರೆಕ್ಟರ್‌ ತರುಣ್‌ ಸುಧೀರ್‌, “ರಾಬರ್ಟ್‌’ ಸಿನಿಮಾದ ಹೀರೋಯಿನ್‌ ಆಗಿ ನನಗೆ ಆಫ‌ರ್‌ ಮಾಡಿದರು. ಸಿನಿಮಾದ ಸಬ್ಜೆಕ್ಟ್, ಕ್ಯಾರೆಕ್ಟರ್‌, ಟೀಮ್‌ ಎಲ್ಲವೂಚೆನ್ನಾಗಿತ್ತು. ಹಾಗಾಗಿ ಕಣ್ಮುಚ್ಚಿಕೊಂಡು “ರಾಬರ್ಟ್‌’ ಸಿನಿಮಾ ಒಪ್ಪಿಕೊಂಡೆ

ಇದರಲ್ಲಿ ನಿಮ್ಮ ಕ್ಯಾರೆಕ್ಟರ್‌? :

ಅದೊಂದು ಪ್ರಶ್ನೆಯನ್ನು ಈಗಲೇ ಕೇಳಬೇಡಿ ಪ್ಲೀಸ್‌… ಡೈರೆಕ್ಟರ್‌ ತರುಣ್‌ ಸುಧೀರ್‌, ನನ್ನ ಕ್ಯಾರೆಕ್ಟರ್‌ನ ಎಲ್ಲೂ ರಿವೀಲ್‌ ಮಾಡುವಂತಿಲ್ಲ ಅಂದಿದ್ದಾರೆ. ನನ್ನ ಕ್ಯಾರೆಕ್ಟರ್‌ ಬಗ್ಗೆ ಸ್ವಲ್ಪ ಹೇಳಿದ್ರೂ, ಅದರ ಸಸ್ಪೆನ್ಸ್‌ ಹೋಗುವ ಚಾನ್ಸ್‌ ಇದೆ. ಹಾಗಾಗಿ ಈಗಲೇ ನನ್ನ ಕ್ಯಾರೆಕ್ಟರ್‌ ಬಗ್ಗೆ  ಹೆಚ್ಚೇನು ಹೇಳಲಾರೆ. ಆದ್ರೆ, ಆಡಿಯನ್ಸ್‌ ನಿರೀಕ್ಷಿಸಿರುವುದಕ್ಕಿಂತ ಬೇರೆ ತರವಾಗಿದೆ ಅಂತ ಮಾತ್ರ ಹೇಳಬಲ್ಲೆ.

ನಿಮ್ಮ ಪಾತ್ರಕ್ಕಾಗಿ ಏನಾದ್ರೂ ವಿಶೇಷ ತಯಾರಿ ಬೇಕಾಗಿತ್ತಾ? :

ಯಾವುದೇ ಕ್ಯಾರೆಕ್ಟರ್‌ ಆದ್ರೂ ಅದಕ್ಕೆ ಒಂದಷ್ಟು ಹೋಮ್‌ ವರ್ಕ್‌, ಪ್ರಿಪರೇಷನ್‌ ಇದ್ದೆ ಇರುತ್ತದೆ. “ರಾಬರ್ಟ್‌’ ಸಿನಿಮಾದಲ್ಲೂ ಅಷ್ಟೇ, ನನ್ನ ಕ್ಯಾರೆಕ್ಟರ್‌ಗಾಗಿ ಒಂದಷ್ಟು ಪ್ರಿಪರೇಷನ್‌ ಮಾಡಿಕೊಂಡಿದ್ದೆ. ಎಲ್ಲದಕ್ಕಿಂತ ಹೆಚ್ಚಾಗಿಕ್ಯಾರೆಕ್ಟರ್‌ ವಿಷಯದಲ್ಲಿ ಡೈರೆಕ್ಟರ್‌ ತರುಣ್‌ ಸುಧೀರ್‌ ನನಗೆ ಕಂಪ್ಲೀಟ್‌ ಫ್ರೀಡಂಕೊಟ್ಟಿದ್ದರು. ಹಾಗಾಗಿಯೇ ತುಂಬ ಕಂಫ‌ರ್ಟ್‌ ಆಗಿ ಅಭಿನಯಿಸಲು ಸಾಧ್ಯವಾಯ್ತು.

ಮೊದಲ ಬಾರಿ ದರ್ಶನ್‌ ಜೊತೆಗೆ ಅಭಿನಯಿಸಿ¨ ಅನುಭವ ಹೇಗಿತ್ತು? :

ಸೂಪರ್‌… “ರಾಬರ್ಟ್‌’ ಶೂಟಿಂಗ್‌ನಲ್ಲಿ ಮೊದಲ ದಿನವೇ ನನಗೆ, ದರ್ಶನ್‌ ಸರ್‌ ಜೊತೆಗೆ ಸೀನ್‌ ಇತ್ತು. ಫ‌ಸ್ಟ್‌ ಟೈಮ್‌, ಬಿಗ್‌ ಸ್ಟಾರ್‌ ಜೊತೆಗೆ ಆ್ಯಕ್ಟ್ ಮಾಡ್ತೀದ್ದೀನಿ, ಹೇಗೋ – ಏನೋ ಅನ್ನೋ ಭಯವಂತೂ ಇದ್ದೇ ಇತ್ತು. ಆದ್ರೆ ದರ್ಶನ್‌ ಸರ್‌ಸೆಟ್‌ಗೆ ಬಂದವರೆ, ತುಂಬ ಕಾನ್ಫಿಡೆನ್ಸ್‌ ತುಂಬಿದ್ರು. ಸಪೋರ್ಟ್‌ ಮಾಡಿದ್ರು. ಆ ನಂತರ ಅವರ ಜೊತೆ ಶೂಟಿಂಗ್‌ಮುಗಿಸಿದ್ದೇ ಗೊತ್ತಾಗಲಿಲ್ಲ. ಅಷ್ಟೊಂದು ಸುಲಭವಾಗಿ ಎಲ್ಲ ನಡೆದುಕೊಂಡು ಹೋಯ್ತು.

“ರಾಬರ್ಟ್‌’ ಮೇಲೆ ಆಡಿಯನ್ಸ್‌, ನಿಮ್ಮ ಫ್ಯಾಮಿಲಿ, ಫ್ರೆಂಡ್ಸ್‌ ಕಡೆಯಿಂದ ನಿರೀಕ್ಷೆ ಹೇಗಿದೆ‌? :

ತುಂಬ ಚೆನ್ನಾಗಿದೆ. ಈಗಾಗಲೇ ಹೈದರಾಬಾದ್‌ ಹೈದರಾಬಾದ್‌, ಹುಬ್ಬಳ್ಳಿ ಎರಡೂ ಕಡೆ ಪ್ರೀ-ರಿಲೀಸ್‌ ಇವೆಂಟ್‌ ಮಾಡಿದ್ದೇವೆ. ಎಲ್ಲ ಕಡೆಗಳಲ್ಲೂ ಬಿಗ್‌ ಸಪೋರ್ಟ್‌ ಸಿಗ್ತಿದೆ. ಟ್ರೇಲರ್‌, ಸಾಂಗ್ಸ್‌ ಎಲ್ಲವೂ ಸೂಪರ್‌ ಹಿಟ್‌ ಆಗಿದೆ. ಆಡಿಯನ್ಸ್‌ ಕಡೆಯಿಂದ  ರೆಸ್ಪಾನ್ಸ್‌ ಸಿಗ್ತಿದೆ. ನನ್ನ ಫ್ಯಾಮಿಲಿ – ಫ್ರೆಂಡ್ಸ್‌ ಕೂಡ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ನೋಡೋದಕ್ಕೆ ಕಾಯ್ತಿದ್ದಾರೆ.

ಕನ್ನಡದಲ್ಲಿ ನಿಮ್ಮ ಮೊದಲ ಸಿನಿಮಾ ರಿಲೀಸ್‌ ಆಗ್ತಿರೋದಕ್ಕೆ ಎಕ್ಸೈಟ್‌ಮೆಂಟ್‌ ಹೇಗಿದೆ? :

ನಿಜವಾಗ್ಲೂ ತುಂಬ ಎಕ್ಸೈಟ್‌ ಆಗಿದ್ದೇನೆ. ತುಂಬ ಖುಷಿಯಾಗ್ತಿದೆ. ಜೊತೆಗೆ ಒಂಥರಾ ಮಿಕ್ಸ್ಡ್ ಎಮೋಶನ್ಸ್‌ ಕೂಡ ಇದೆ. ಎಲ್ಲರೂ ಸೇರಿ ಕೋವಿಡ್‌ನ‌ಂತ ಟೈಮ್‌ನಲ್ಲೂ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. “ರಾಬರ್ಟ್‌’ ಸಿನಿಮಾ,ನನ್ನ ಕ್ಯಾರೆಕ್ಟರ್‌ ಎರಡೂ ಆಡಿಯನ್ಸ್‌ಗೆಇಷ್ಟವಾಗುತ್ತದೆ ಅನ್ನೋ ಕಾನ್ಫಿಡೆನ್ಸ್‌ ಇದೆ.ಆದ್ರೂ, ಕನ್ನಡ ಆಡಿಯನ್ಸ್‌ ಹೇಗೆ ಸ್ವೀಕರಿಸುತ್ತಾರೋ, ಹೇಗೋ ಅನ್ನೋ ಭಯ ಕೂಡ ಮೂಲೆಯಲ್ಲಿದೆ.

“ರಾಬರ್ಟ್‌’ ಶೂಟಿಂಗ್‌ನಲ್ಲಿ ಕಲಿತಿರುವುದು ಏನಾದ್ರೂ ಇದೆಯಾ? :

ಕಲಿತಿರುವುದು ತುಂಬ ಇದೆ. ದರ್ಶನ್‌ ಸರ್‌ ಅವರ ಸರಳತೆ, ಸ್ಟಾರ್‌ ಸ್ಟೇಟಸ್‌ ಇದ್ರೂ ಇಡೀ ಟೀಮ್‌ನಲ್ಲಿಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅವರ ಗುಣ. ಡೈರೆಕ್ಟರ್‌ ತರುಣ್‌ ಅವರ ಪ್ಯಾಷನ್‌, ನಿರ್ಮಾಪಕಉಮಾಪತಿ ಅವರ ಕಮಿಟ್‌ಮೆಂಟ್‌, ಮೇಕಿಂಗ್‌, ಪ್ಲಾನಿಂಗ್‌… ಹೀಗೆ ಅನೇಕ ವಿಷಯಗಳನ್ನು “ರಾಬರ್ಟ್‌’ ಸಿನಿಮಾದಲ್ಲಿ ಕಲಿತಿದ್ದೇನೆ.

ಇದನ್ನೂ ಓದಿ : ಭಕ್ತಿ ಪ್ರಧಾನ ಧಾರಾವಾಹಿ ನಿರ್ಮಾಣದತ್ತ ಪುನೀತ್‌

-ಜಿ. ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Didi Demoralised As BJP Much Ahead After 5 Phases Of Polls: Amit Shah

ಐದು ಹಂತಗಳ ಚುನಾವಣೆಯಲ್ಲಿ 122 ಸ್ಥಾನಗಳು ಬಿಜೆಪಿಗೆ ಖಚಿತ : ಅಮಿತ್ ಶಾ

ಲಕಜುಹಯಗತ್ರದೆಸ

ಮಹಾರಾಷ್ಟ್ರದ ನಂದುರ್ಬಾರ್ ಗೆ 94 ಕೋವಿಡ್ ಕೇರ್ ಬೋಗಿಗಳನ್ನು ನೀಡಿದ ಕೇಂದ್ರ ರೈಲ್ವೆ!

18-8

ವಿಶ್ವ ಪುಸ್ತಕ ದಿನಾಚರಣೆ : ಅಮೇಜಾನ್ ಕಿಂಡಲ್ ನೀಡುತ್ತಿದೆ ವಿಶೇಷ ಕೊಡುಗೆ..!

nhfh

ಆಕ್ಸಿಜನ್ ಕೊರತೆಯಿಂದ 6 ಜನ ಕೋವಿಡ್ ಸೋಂಕಿತರ ದುರ್ಮರಣ

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

ಲಕಜಹಗ್ರೆಡ

ನಾಳೆ ಬೆಂಗಳೂರಿಗೆ ಪ್ರತ್ಯೇಕ ಕಠಿಣ ನಿಯಮ ಜಾರಿ: ಆರ್ ಅಶೋಕ್

COVID-19 crisis: Kapil Sibal asks PM Narendra Modi to declare National Health Emergency

ಕೋವಿಡ್ 19 : ರಾಷ್ಟ್ರೀಯ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿ : ಕಪಿಲ್ ಸಿಬಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dr.rajkumar

ಅಣ್ಣಾವ್ರ ಚಿತ್ರಗಳಲ್ಲಿ ಕನ್ನಡ ಸಾಹಿತ್ಯದ ಕಂಪು

ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

ಮತ್ತೊಂದು ಪ್ರತಿಷ್ಠಿತ ಕಂಪೆನಿಗೆ ರಶ್ಮಿಕಾ ಮಂದಣ್ಣ ರಾಯಭಾರಿ

ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

ಕ್ಯೂಟ್‌ ಜೋಡಿ ಬೈ ಟು ಲವ್‌: ಗಮನ ಸೆಳೆಯುತ್ತಿದೆ ಫ‌ಸ್ಟ್‌ ಲುಕ್‌ ಪೋಸ್ಟರ್

ಬದಲಾಗಲಿದೆ ಶಿವಪ್ಪ ಟೈಟಲ್‌

ಬದಲಾಗಲಿದೆ ಶಿವಪ್ಪ ಟೈಟಲ್‌

ಸಾಹಸ ದೃಶ್ಯಗಳ ಹಿಂದೆ ಅಣ್ಣಾವ್ರ ಶ್ರಮ

ಸಾಹಸ ದೃಶ್ಯಗಳ ಹಿಂದೆ ಅಣ್ಣಾವ್ರ ಶ್ರಮ

MUST WATCH

udayavani youtube

ಕಡಿಮೆ ಭೂಮಿಯಲ್ಲಿ ಲಾಭದಾಯಕ ಕೈತೋಟ

udayavani youtube

ಕುಂಭಮೇಳ ಈಗ ಸಾಂಕೇತಿಕವಾಗಿರಲಿ: ಪ್ರಧಾನಿ ಮೋದಿ

udayavani youtube

COVID 2ನೇ ಅಲೆ ಎಚ್ಚರ ತಪ್ಪಬೇಡಿ

udayavani youtube

ಮನೆಯಂಗಳದಲ್ಲಿ ವೀಳ್ಯದೆಲೆ ಬೆಳೆದು ಯಶಸ್ಸು ಕಂಡ ನಿವೃತ ಅಧ್ಯಾಪಕ

udayavani youtube

ಕುದ್ರೋಳಿ ಗಣೇಶ್ ವಿಸ್ಮಯ ಜಾದೂ

ಹೊಸ ಸೇರ್ಪಡೆ

Didi Demoralised As BJP Much Ahead After 5 Phases Of Polls: Amit Shah

ಐದು ಹಂತಗಳ ಚುನಾವಣೆಯಲ್ಲಿ 122 ಸ್ಥಾನಗಳು ಬಿಜೆಪಿಗೆ ಖಚಿತ : ಅಮಿತ್ ಶಾ

Complete ban on fairs and festivals in the district

ಜಿಲ್ಲೆಯಲ್ಲಿ ಜಾತ್ರೆ, ಉತ್ಸವಗಳಿಗೆ ಸಂಪೂರ್ಣ ನಿರ್ಬಂಧ

ಲಕಜುಹಯಗತ್ರದೆಸ

ಮಹಾರಾಷ್ಟ್ರದ ನಂದುರ್ಬಾರ್ ಗೆ 94 ಕೋವಿಡ್ ಕೇರ್ ಬೋಗಿಗಳನ್ನು ನೀಡಿದ ಕೇಂದ್ರ ರೈಲ್ವೆ!

DYSP, SI Infection

ಡಿವೈಎಸ್ಪಿ, ಎಸ್‌ಐಗೆ ಸೋಂಕು: 90 ಸಿಬ್ಬಂದಿಗೂ ಟೆಸ್ಟ್‌

Get tested for fever

ಜ್ವರ ಬಂದರೆ ಪರೀಕ್ಷೆಗೊಳಗಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.