ತೆರೆಮೇಲೆ ಬರಲಿದೆ ‘ಸೈನೈಡ್ ಮಲ್ಲಿಕಾ’ ಕ್ರೈಂ ಸ್ಟೋರಿ
Team Udayavani, Feb 11, 2021, 9:55 AM IST
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಪ್ರಥಮ ಮಹಿಳಾ ಸೈನೈಡ್ ಕಿಲ್ಲರ್ ಮಲ್ಲಿಕಾ ಬಗ್ಗೆ ಅನೇಕರಿಗೆ ಗೊತ್ತಿರಬಹುದು. ಈಗ ಇದೇ ಸೈನಡ್ ಮಲ್ಲಿಕಾ ಕ್ರೈಂ ಕಹಾನಿ “ಸೈನೈಡ್ ಮಲ್ಲಿಕಾ’ ಎಂಬ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ತೆರೆಮೇಲೆ ಬರುತ್ತಿದೆ.
ಸೈನೈಡ್ ಕಿಲ್ಲರ್ ಮಲ್ಲಿಕಾ ಮತ್ತು ಸೈನೈಡ್ ಕಿಲ್ಲರ್ ಮೋಹನ್ ಇವರಿಬ್ಬರ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ ನಿರ್ಮಾಪಕ ಕಂ ನಿರ್ದೇಶಕ ಗುರು. “ಸೈನೈಡ್ ಮಲ್ಲಿಕಾ’ ಚಿತ್ರದಲ್ಲಿ ನಟಿ ಸಂಜನಾ ಪ್ರಕಾಶ್ “ಸೈನೈಡ್ ಮಲ್ಲಿಕಾ’ ಪಾತ್ರದಲ್ಲಿ, ನಟ, ನಿರ್ದೇಶಕ ಗುರು “ಸೈನೈಡ್ ಮೋಹನ್’ ಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:ಅಭಿಷೇಕ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಚಿತ್ರಕ್ಕೆ ಇಬ್ಬರು ಹಿರೋಯಿನ್ಸ್
ಇನ್ನೊಂದು ವಿಷಯವೆಂದರೆ, ರಿಯಲ್ ಲೈಫ್ನಲ್ಲಿ ಈ ಇಬ್ಬರೂ ಸೈನೈಡ್ ಕಿಲ್ಲರ್ ಒಮ್ಮೆಯೂ ಸಂದಿಸಿರುವುದಿಲ್ಲ. ಆದರೆ ರೀಲ್ನಲ್ಲಿ ಇಬ್ಬರು ಚಾಣಾಕ್ಷ ಕೊಲೆಗಾರರು ಭೇಟಿಯಾದಾಗ ಏನಾಗುತ್ತದೆ ಎಂಬುದನ್ನು ಕಾಲ್ಪನಿಕ ಸನ್ನಿವೇಶಗಳಲ್ಲಿ ತೆರೆಮೇಲೆ ಹೇಳಲಾಗಿದೆ. ಅದಕ್ಕಾಗಿ “ಸೈನೈಡ್ ಮಲ್ಲಿಕಾ’ ಚಿತ್ರಕ್ಕೆ “ಮೀಟ್ಸ್ ಸೈನೈಡ್ ಮೋಹನ್’ ಎಂಬ ಟ್ಯಾಗ್ಲೈನ್ ಇಟ್ಟಿದ್ದೇವೆ ಎನ್ನುವುದು ಚಿತ್ರತಂಡದ ಮಾತು.