Udayavni Special

ಪ್ರೇಮಿಗಳ ದಿನಕ್ಕೆ “ಡೆಮೊ ಪೀಸ್‌’ ತೆರೆಗೆ


Team Udayavani, Jan 28, 2020, 7:01 AM IST

demo

ಈಗಾಗಲೇ ತನ್ನ ಫ‌ಸ್ಟ್‌ಲುಕ್‌, ಟೀಸರ್‌, ಟ್ರೇಲರ್‌ ಮೂಲಕ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ “ಡೆಮೊ ಪೀಸ್‌’ ಚಿತ್ರ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಸದ್ಯ ಭರದಿಂದ ಚಿತ್ರದ ಪ್ರಮೋಶನ್‌ ಕೆಲಸಗಳಲ್ಲಿ ನಿರತವಾಗಿರುವ “ಡೆಮೊ ಪೀಸ್‌’ ಚಿತ್ರತಂಡ, ಇದೇ ಫೆಬ್ರವರಿ 14ರ “ಪ್ರೇಮಿಗಳ ದಿನ’ದಂದು ಚಿತ್ರವನ್ನು ತೆರೆಗೆ ತರಲು ಅಣಿಯಾಗಿದೆ. ಕಿರುತೆರೆಯ “ಬ್ರಹ್ಮ ಗಂಟು’ ಧಾರಾವಾಹಿಯ ಖ್ಯಾತಿಯ ನಟ ಭರತ್‌ ಭೂಪಣ್ಣ “ಡೆಮೊ ಪೀಸ್‌’ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ.

“ಪಂಚತಂತ್ರ’ ಖ್ಯಾತಿಯ ಸೋನಾಲ್‌ ಮಂತೆರೋ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸ್ಪರ್ಶ ರೇಖಾ, ಚಕ್ರವರ್ತಿ ಚಂದ್ರ ಚೂಡ್‌, ರೂಪೇಶ್‌, ಲೋಹಿತ್‌, ರಾಕ್‌ಲೈನ್‌ ಸುಧಾಕರ್‌ ಮೊದಲಾದವರು “ಡೆಮೊ ಪೀಸ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ವಿವೇಕ್‌. ಎ “ಡೆಮೊ ಪೀಸ್‌’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ “ಡೆಮೊ ಪೀಸ್‌’ ಚಿತ್ರದ ಟ್ರೇಲರ್‌ಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸುಮಾರು 1.30 ಲಕ್ಷ ಜನರು ಟ್ರೇಲರ್‌ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಇದೇ ಖುಷಿಯಲ್ಲಿರುವ ಚಿತ್ರ ತಂಡ, ಈಗ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದೆ. ಸದ್ಯ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳ ಬಗ್ಗೆ ಮಾತನಾಡುವ ನಿರ್ದೇಶಕ ವಿವೇಕ್‌. ಎ, “ಇದೊಂದು ಪಕ್ಕಾ ಎಂಟರ್‌ಟೈನ್ಮೆಂಟ್‌ ಸಿನಿಮಾ. ಇಂದಿನ ಆಡಿಯನ್ಸ್‌ ಏನೇನು ನಿರೀಕ್ಷಿಸುತ್ತಾರೋ ಅದೆಲ್ಲವೂ ಸಿನಿಮಾದಲ್ಲಿದೆ.

ಅದರ ಜೊತೆಗೆ ಒಂದು ಗಂಭೀರ ವಿಷಯವನ್ನೂ ಇದರಲ್ಲಿ ಹೇಳುತ್ತಿದ್ದೇವೆ. ಲವ್‌, ಕಾಮಿಡಿ, ಕಾಲೇಜ್‌ ಲೈಫ್, ಇಂದಿನ ಹುಡುಗರ ಲೈಫ್ ಸ್ಟೈಲ್‌, ಪೋಷಕರ ಕನಸು, ನಮ್ಮ ಶಿಕ್ಷಣ ವ್ಯವ್ಯಸ್ಥೆ, ಹೀಗೆ ಹಲವು ವಿಷಯಗಳ ಸುತ್ತ ಸಿನಿಮಾ ಸಾಗುತ್ತದೆ. ಎಲ್ಲಾ ಥರದ ಆಡಿಯನ್ಸ್‌ಗೂ ಕನೆಕ್ಟ್ ಆಗುವಂಥ ಕಥೆ ಚಿತ್ರದಲ್ಲಿದೆ. ಈಗಾಗಲೇ ಸಿನಿಮಾಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದ್ದು, ಫೆ. 14ಕ್ಕೆ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎನ್ನುತ್ತಾರೆ. ಇನ್ನು “ಡೆಮೊ ಪೀಸ್‌’ ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅರ್ಜುನ್‌ ರಾಮು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ.

ಚಂದನ್‌ ಶೆಟ್ಟಿ, ಸಂಚಿತ್‌ ಹೆಗ್ಡೆ, ರಾಜೇಶ್‌ ಕೃಷ್ಣನ್‌ ಹಾಡುಗಳಿಗೆ ಧ್ವನಿಯಾಗಿದ್ದಾರೆ. ನಾಗಾರ್ಜುನ ಶರ್ಮ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಚಿತ್ರಕ್ಕೆ ಪ್ರಸಾದ್‌ ಬಾಬು ಛಾಯಾಗ್ರಹಣ, ವೆಂಕಿ ಯುಡಿವಿ ಸಂಕಲನ, ವಿಕ್ರಂ ಮೋರ್‌ ಸಾಹಸವಿದೆ. ಬೆಂಗಳೂರು, ತುಮಕೂರು, ದಾಂಡೇಲಿ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. “ರೇಖಾ ಮೂವೀಸ್‌’ ಬ್ಯಾನರ್‌ನಲ್ಲಿ ನಟಿ ಸ್ಪರ್ಶ ರೇಖಾ ಮತ್ತು ವಿವೇಕ್‌. ಎ ಜಂಟಿಯಾಗಿ “ಡೆಮೊ ಪೀಸ್‌’ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ “ಡೆಮೊ ಪೀಸ್‌’ ತೆರೆಮೇಲೆ ಪ್ರೇಕ್ಷಕ ಪ್ರಭುಗಳಿಗೆ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಫೆಬ್ರವರಿ ಎರಡನೇ ವಾರ ಗೊತ್ತಾಗಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದವರ ಮೇಲೆ ಕೇಸ್!

ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಹೊರಗಡೆ ಓಡಾಡುತ್ತಿದ್ದವರ ಮೇಲೆ ಕೇಸ್!

ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಇನ್ಫಿನಿಕ್ಸ್‌ ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ಗಳು

ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಇನ್ಫಿನಿಕ್ಸ್‌ ಹಾಟ್‌ 9 ಪ್ರೋ ಸ್ಮಾರ್ಟ್‌ಫೋನ್‌ಗಳು

covid19-india

ದೇಶದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 1.9 ಲಕ್ಷಕ್ಕೆ ಏರಿಕೆ: ಸಹಜ ಸ್ಥಿತಿಗೆ ಮರಳಿದ ಜನಜೀವನ

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಡೋಕ್ಲಾಮ್‌ ಮುಖಭಂಗದ ಬಳಿಕ ಚೀನ ತಣ್ಣಗೆ ಕುಳಿತಿಲ್ಲ!

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಕ್ಷೀಣಿಸುತ್ತಿರುವ ಕೋವಿಡ್-19 , ಲಸಿಕೆ ತಜ್ಞರಿಗೆ ತಲೆನೋವು

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಸಡಿಲವಾಗುತ್ತಿದೆ ನಿರ್ಬಂಧದ ಸರಪಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

amar rishabh

ಭೂಗತ ಲೋಕದ ಕಥೆಯಲ್ಲಿ ರಿಷಭ್!

push mantra

ಪುಷ್ಕರ್‌ ಮಲ್ಲಿಕಾರ್ಜುನಯ್ಯ ಕೃಷಿ ಮಂತ್ರ!

chitra hosa

ಹೊಸಚಿತ್ರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿರುವ ನಿರ್ದೇಶಕ ನಾಗಶೇಖರ್

jaggi twwee

ಜಗ್ಗೇಶ್ ಹೇಳಿದ ಮೇಕಪ್ ಹಿಂದಿನ ಕಥೆ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಅತಹತ್ಯೆ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಆತ್ಮಹತ್ಯೆ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

5ರಿಂದ ಜೂನ್‌ ತಿಂಗಳ ಪಡಿತರ ವಿತರಣೆ

5ರಿಂದ ಜೂನ್‌ ತಿಂಗಳ ಪಡಿತರ ವಿತರಣೆ

ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ವೃದ್ಧಿ: ಮಹೇಶ್ವರ ರಾವ್‌

ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ ವೃದ್ಧಿ: ಮಹೇಶ್ವರ ರಾವ್‌

ಸಿದ್ದರಾಮಯ್ಯರದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ

ಸಿದ್ದರಾಮಯ್ಯರದ್ದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

ಪೊಲೀಸ್ ಠಾಣೆಯಿಂದ ಪಾಯಿಂಟ್ 303 ರೈಫಲ್ಸ್‌ನ 50 ಬುಲೆಟ್ ಗಳು ನಾಪತ್ತೆ!

ಸಂಪ್ರದಾಯ ಸ್ಪರ್ಶದ ಚಟ್ನಿಪುಡಿ-ಮಸಾಲೆ ಕುಟ್ಟುವ ಯಂತ್ರ

ಸಂಪ್ರದಾಯ ಸ್ಪರ್ಶದ ಚಟ್ನಿಪುಡಿ-ಮಸಾಲೆ ಕುಟ್ಟುವ ಯಂತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.