ಎದ್ದೇಳು “ಜಂಟಲ್‌ಮನ್‌’!

ಫೆಬ್ರವರಿ 07 ಬಿಡುಗಡೆ

Team Udayavani, Jan 28, 2020, 7:02 AM IST

ಪ್ರಜ್ವಲ್‌ ದೇವರಾಜ್‌ ನಾಯಕರಾಗಿರುವ “ಜಂಟಲ್‌ಮನ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಫೆಬ್ರವರಿ 07 ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಟ್ರೇಲರ್‌, ಟೀಸರ್‌, ಹಾಡು ಸಿನಿಮಾದ ನಿರೀಕ್ಷೆ ಹೆಚ್ಚಿಸಿವೆ. ಈಗ ಚಿತ್ರದ ಮತ್ತೂಂದು ಹಾಡು ಬಿಡುಗಡೆಯಾಗಿದೆ. “ಎದ್ದೇಳು ಭಾರತೀಯ’ ಎಂಬ ಹಾಡಿನ ಟೀಸರ್‌ ಅನ್ನು ಬಿಡುಗಡೆಗೊಳಿಸಿದೆ. ಯೋಗರಾಜ್‌ ಭಟ್‌ ಈ ಹಾಡು ರಚಿಸಿದ್ದಾರೆ.

ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ದಿನದ 18 ಗಂಟೆ ನಿದ್ದೆ ಮಾಡುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದು, ಪ್ರಜ್ವಲ್‌ ದೇವರಾಜ್‌ ನಿರ್ವಹಿಸಿದ ಈ ಪಾತ್ರವನ್ನು ಎಚ್ಚರಗೊಳಿಸಲು ಭಟ್ಟರು ಈ ಹಾಡು ಬರೆದಿದ್ದಾರೆ. “ಟಗರು’ ಚಿತ್ರದ “ಟಗರು ಬಂತು ಟಗರು’ ಹಾಡಿನ ಮೂಲಕ ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ಗಾಯಕ ರೆನಿಸಿಕೊಂಡ ಅಂಥೋನಿ ದಾಸ್‌ ಈ ಹಾಡನ್ನು ಹಾಡಿ ದ್ದಾರೆ.ಈ ಚಿತ್ರವನ್ನು ಜಡೇಶ್‌ ಕುಮಾರ್‌ ನಿರ್ದೇಶಿಸಿದ್ದಾರೆ.

“ಜಂಟಲ್‌ಮನ್‌’ ಚಿತ್ರದಲ್ಲಿ ನಾಯಕ ಪ್ರಜ್ವಲ್‌ ದೇವರಾಜ್‌ “ಸ್ಲಿಪಿಂಗ್‌ ಸಿಂಡ್ರೋಮ್‌’ ಅಥವಾ ಹೈಪರ್‌ ಸೋಮ್ನಿಯಾ ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ದಿನಕ್ಕೆ 18 ಗಂಟೆ ಮಾಡುವ ನಿದ್ರೆ ಮಾಡುವ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಪ್ರಜ್ವಲ್‌ ದೇವರಾಜ್‌ ಅವರಿಗೆ ಹೊಸ ಬಗೆಯ ಸಿನಿಮಾ. ಅದೇ ಕಾರಣದಿಂದ ಪ್ರಜ್ವಲ್‌ ಕೂಡಾ ನಿರೀಕ್ಷೆ ಕಂಗಳೊಂದಿಗೆ ಎದುರು ನೋಡುತ್ತಿದ್ದಾರೆ.

ಪ್ರಜ್ವಲ್‌ ದೇವರಾಜ್‌ಗೆ ನಾಯಕಿಯಾಗಿ ನಿಶ್ವಿ‌ಕಾ ನಾಯ್ಡು ಜೋಡಿಯಾಗಿದ್ದಾರೆ. ಉಳಿದಂತೆ ಸಂಚಾರಿ ವಿಜಯ್‌, ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ