6 ಮಿಲಿಯನ್ ದಾಟಿದ ‘ಏಕ್ ಲವ್ ಯಾ’ ಚಿತ್ರದ ಎಣ್ಣೆ ಸಾಂಗ್
Team Udayavani, Nov 29, 2021, 11:16 AM IST
ಪ್ರೇಮ್ ನಿರ್ದೇಶನದ “ಏಕ್ ಲವ್ ಯಾ’ ಚಿತ್ರದ “ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕ್ ಇಟ್ಟೆ ಭಗವಂತ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿತ್ತು. ಗಾಯಕಿ ಮಂಗ್ಲಿ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಈಗ ಭರ್ಜರಿ ಮೆಚ್ಚಿಗೆ ವ್ಯಕ್ತವಾಗಿದೆ. ಬರೋಬ್ಬರಿ 6 ಮಿಲಿಯನ್ ಗೂ ಹೆಚ್ಚಿನ ವೀವ್ಸ್ನೊಂದಿಗೆ ಈ ಹಾಡು ಮುನ್ನುಗ್ಗುತ್ತಿದೆ.
ಅರ್ಜುನ್ ಜನ್ಯಾ ಸಂಗೀತದಲ್ಲಿ ಈ ಹಾಡು ಮೂಡಿಬಂದಿದೆ, ಪ್ರೇಮ್ ಸಾಹಿತ್ಯವಿದೆ. ಇತ್ತೀಚೆಗೆ ಚಿತ್ರತಂಡ ಈ ಖುಷಿಯನ್ನು ಸಂಭ್ರಮಿಸಿದೆ. ಗಂಡು ಮಕ್ಕಳು ಲವ್ ಫೇಲ್ಯೂರ್ ಆದರೆ, ಬಾರ್ ಹೋಗಿ ಕುಡಿಯುತ್ತಾರೆ ಎಂಬ ಕಾನ್ಸೆಪ್ಟ್ನೊಂದಿಗೆ ಸಿನಿಮಾಗಳಲ್ಲಿ ಗಂಡು ಮಕ್ಕಳಿಗಾಗಿ ಸಾಕಷ್ಟು ಬ್ರೇಕಪ್ ಸಾಂಗ್ಗಳು ಬಂದಿವೆ. ಆದರೆ, ಬ್ರೇಕಪ್ ಹೆಣ್ಣುಮಕ್ಕಳಿಗೂ ಆಗುತ್ತದೆ. ಹಾಗಾದರೆ ಅವರಿಗೆ ಯಾಕೆ ಒಂದು ಬ್ರೇಕಪ್ ಸಾಂಗ್ ಇಡಬಾರದು ಎಂದು ಯೋಚಿಸಿದ “ಏಕ್ ಲವ್ ಯಾ’ ಚಿತ್ರತಂಡ ಹೆಣ್ಣುಮಕ್ಕಳಿಗಾಗಿ ಬ್ರೇಕಪ್ ಸಾಂಗ್ವೊಂದನ್ನು ಸಿದ್ಧಪಡಿಸಿ ಬಿಡುಗಡೆ ಮಾಡಿದ ಈ ಹಾಡು ಈಗ ಹಿಟ್ಲಿಸ್ಟ್ ಸೇರಿದೆ.
ಇದನ್ನೂ ಓದಿ:ತಿಂಗಳಾದ್ರೂ ಕರಗದ ಅಪ್ಪು ಅಭಿಮಾನಿಗಳ ಸಾಲು…
“ಏಕ್ ಲವ್ಯ ಯಾ’ ಚಿತ್ರ ಜ.21ಕ್ಕೆ ಬಿಡುಗಡೆಯಾಗುತ್ತಿದ್ದು, ಚಿತ್ರವನ್ನು ರಕ್ಷಿತಾ ಫಿಲಂ ಫ್ಯಾಕ್ಟರಿನಡಿ ರಕ್ಷಿತಾ ನಿರ್ಮಿಸಿದ್ದಾರೆ. ಚಿತ್ರದಲ್ಲಿ ರಾಣಾ ನಾಯಕರಾಗಿ ನಟಿಸಿದ್ದು, ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ರೀಷಾ ನಾಣಯ್ಯ ಈ ಚಿತ್ರದ ನಾಯಕಿ.