ಫೆ.11ರಿಂದ ಗಣೇಶ್ ಆರೆಂಜ್ ಶುರು
Team Udayavani, Jan 28, 2018, 10:19 AM IST
ಗಣೇಶ್ “ಆರೆಂಜ್’ ಚಿತ್ರ ಒಪ್ಪಿಕೊಂಡಿರುವುದು ಗೊತ್ತೇ ಇದೆ. ಆ ಚಿತ್ರ ಯಾವಾಗ ಶುರುವಾಗುತ್ತೆ ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ನಿರ್ದೇಶಕ ಪ್ರಶಾಂತ್ರಾಜ್ ಅದಕ್ಕೀಗ ಉತ್ತರಿಸಿದ್ದಾರೆ. ಫೆಬ್ರವರಿ 11 ರಂದು ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಅಂದಿನ ವಿಶೇಷವೆಂದರೆ, ಗಣೇಶ್ ಅವರ 10 ನೇ ವಿವಾಹ ವಾರ್ಷಿಕೋತ್ಸವ. ಅಂದು ಚಿತ್ರಕ್ಕೆ ಚಾಲನೆ ನೀಡಲು ನಿರ್ಧರಿಸಿದೆ ಚಿತ್ರತಂಡ.
“ಜೂಮ್’ ಬಳಿಕ ಗಣೇಶ್ ಮತ್ತು ಪ್ರಶಾಂತ್ರಾಜ್ ಒಟ್ಟಿಗೆ ಸೇರಿ ಮಾಡುತ್ತಿರುವ ಚಿತ್ರವಿದು. ಈಗ ವರ್ಕಿಂಗ್ ಪೋಸ್ಟರ್ ಡಿಸೈನ್ ಬಿಡುಗಡೆ ಮಾಡಿರುವ ಚಿತ್ರತಂಡ, ಫೆ.11 ರಿಂದ ಎರಡು ಹಂತದಲ್ಲಿ ಚಿತ್ರೀಕರಣ ನಡೆಸಲಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಬಹದ್ದೂರ್ ಚೇತನ್, ನಟರಾಜ್ ಸಂಭಾಷಣೆ ಬರೆಯುತ್ತಿದ್ದಾರೆ. ರವಿವರ್ಮ ಸಾಹಸವಿದೆ.
ನಾಯಕಿ ಮತ್ತು ಸಂಗೀತ ನಿರ್ದೇಶಕರ ಆಯ್ಕೆ ಬಾಕಿ ಇದೆ. ಈ ಹಿಂದೆ ಜೂಮ್ ಚಿತ್ರದಲ್ಲಿ ಗಣೇಶ್ ಅವರ ಹೇರ್ಸ್ಟೈಲ್ ಬದಲಾಗಿತ್ತು. ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಈಗ “ಆರೆಂಜ್’ ಚಿತ್ರದಲ್ಲೂ ಗಣೇಶ್ ಹೊಸ ಗೆಟಪ್ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. “ಆರೆಂಜ್’ ಚಿತ್ರದಲ್ಲೂ ಗಣೇಶ್ ಅವರ ಪಾತ್ರ ಕಲರ್ಫುಲ್ ಆಗಿದ್ದು, ಅದಕ್ಕೆ ತಕ್ಕಂತೆ ಅವರ ಗೆಟಪ್ ಕೂಡಾ ಇರಲಿದೆ.
ಸದ್ಯ ಗಣೇಶ್ ನಾಯಕರಾಗಿರುವ ಸುನಿ ನಿರ್ದೇಶನದ “ಚಮಕ್’ ಚಿತ್ರ 30 ದಿನಗಳನ್ನು ದಾಟಿ ಮುನ್ನುಗ್ಗುತ್ತಿದೆ. ಈ ಚಿತ್ರದಲ್ಲಿ ಗಣೇಶ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಗಣೇಶ್ ಡಾಕ್ಟರ್ ಪಾತ್ರ ಮಾಡಿದ್ದಾರೆ. ಚಿತ್ರವನ್ನು ಟಿ.ಆರ್.ಚಂದ್ರಶೇಖರ್ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು