ಪ್ರಜ್ವಲ್ ಗೆ ಹುಟ್ಟುಹಬ್ಬದ ಸಂಭ್ರಮ; ಜಂಟಲ್ ಮೆನ್ ಸಿನಿಮಾದ ಹೊಸ ಟೀಸರ್ ರಿಲೀಸ್
Team Udayavani, Jul 4, 2019, 1:42 PM IST
ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ಪ್ರಜ್ವಲ್ ದೇವರಾಜ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಗುರುದೇಶಪಾಂಡೆಯ ಜಿ ಸಿನೇಮಾಸ್ ಪ್ರೊಡಕ್ಷನ್ ನಲ್ಲಿ ನಿರ್ಮಾಣಗೊಂಡಿರುವ “ಜಂಟಲ್ ಮ್ಯಾನ್” ಸಿನಿಮಾದ ಹೊಸ ಟೀಸರ್ ಅನ್ನು ರಿಲೀಸ್ ಮಾಡುವ ಮೂಲಕ ಪ್ರಜ್ವಲ್ ಗೆ ಶುಭ ಹಾರೈಸಿದೆ.
ಜಡೇಶ್ ಕುಮಾರ್ ಹಂಪೆ ನಿರ್ದೇಶನದ “ ಜಂಟಲ್ ಮ್ಯಾನ್” ಕನ್ನಡ ಸಿನಿಮಾದಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ಚಿತ್ರೀಕರಣ ಪೂರ್ಣಗೊಂಡ ಜಂಟಲ್ ಮ್ಯಾನ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ.