ಹುಡುಗರ ಭರವಸೆಯ ಪ್ರೀತಿ

Team Udayavani, May 15, 2019, 3:00 AM IST

ಜಗತ್ತಿನಲ್ಲಿ ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸದ ಮೇಲೆ, ತಮ್ಮನ್ನು ನಂಬಿದವರ ಮೇಲೆ “ಭರವಸೆ’ ಇರುತ್ತದೆ. ಅಂಥದ್ದೇ “ಭರವಸೆ’ಯನ್ನು ತನ್ನ ಪ್ರೀತಿಯ ಮೇಲೆ ಇಟ್ಟುಕೊಂಡಿರುವ ಹುಡುಗನೊಬ್ಬನಿಗೆ ತನ್ನ ಪ್ರೀತಿ, ಪ್ರೀತಿಸಿದವಳು ಸಿಗುತ್ತಾಳಾ?

ಇಲ್ಲವಾ? ಎಂಬ ಅಂಶವನ್ನು ಇಟ್ಟುಕೊಂಡು, ಇದೀಗ “ಭರವಸೆ’ ಎಂಬ ಹೆಸರಿನಲ್ಲೇ ಚಿತ್ರವೊಂದು ತಯಾರಾಗುತ್ತಿದೆ. ತೆರೆಮುಂದೆ ಮಿಂಚಬೇಕು ಎಂದು ಚಿತ್ರರಂಗಕ್ಕೆ ಕಾಲಿಟ್ಟು, ಬಳಿಕ ತೆರೆ ಹಿಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದ ಮುತ್ತು ಎ.ಎನ್‌ “ಭರವಸೆ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

ವಿನಯ ರಾಜ್‌, ಅಹಲ್ಯಾ ಸುರೇಶ್‌, ಅಮೃತಾ, ನಾಗರಾಜು, ಶ್ಯಾಮ್‌ ಯು. ಪೈ, ಸಂತೋಷ್‌, ಶೋಭರಾಜ್‌, ಹೊನ್ನವಳ್ಳಿ ಕೃಷ್ಣ, ಕಿಲ್ಲರ್‌ ವೆಂಕಟೇಶ್‌, ಕೆಂಪೇಗೌಡ ಮುಂತಾದವರು “ಭರವಸೆ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಶಿವಮೊಗ್ಗ, ಬೆಂಗಳೂರು, ಸಕಲೇಶಪುರ ಸುತ್ತಮುತ್ತ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿದಿದೆ.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, “ಆರ್‌.ಆರ್‌. ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಾಗರಾಜು ಬಿ.ಸಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ವೀನಸ್‌ ಮೂರ್ತಿ ಛಾಯಾಗ್ರಹಣ, ಕುಮಾರ್‌ ಸಿ.ಹೆಚ್‌. ಸಂಕಲನವಿದೆ. ಚಿತ್ರದ ಹಾಡುಗಳಿಗೆ ಹರ್ಷ ಕೋಗೋಡು ಸಂಗೀತ ಸಂಯೋಜನೆಯಿದೆ. ಚಿತ್ರತಂಡದ ಪ್ಲಾನ್‌ ಪ್ರಕಾರ ಆಗಸ್ಟ್‌ ವೇಳೆಗೆ “ಭರವಸೆ’ ಚಿತ್ರ ತೆರೆಗೆ ಬರಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ