ಖಾಕಿ ತೊಟ್ಟು ರಾಕ್ಷಸನಾಗಲು ಹೊರಟ ಡಾಲಿ: “ಹೊಯ್ಸಳ” ರಿಲೀಸ್ ಡೇಟ್ ಅನೌನ್ಸ್
Team Udayavani, Sep 7, 2022, 3:36 PM IST
ಬೆಂಗಳೂರು: ಡಾಲಿ ಧನಂಜಯ ಅಭಿನಯನದ 25 ನೇ ಸಿನಿಮಾ “ಹೊಯ್ಸಳ” ಸಟ್ಟೇರಿದ ಬಗ್ಗೆ ಸುದ್ದಿಯಿರುವಾಗಲೇ ಚಿತ್ರ ತಂಡ ಸಿನಿಮಾದ ಬಗ್ಗೆ ಮತ್ತೊಂದು ದೊಡ್ಡ ಅಪ್ ಡೇಟ್ ಕೊಟ್ಟಿದೆ.
ವಿಜಯ್ ಎನ್ ನಿರ್ದೇಶನದ “ಹೊಯ್ಸಳ” ದಲ್ಲಿ ಡಾಲಿ ಧನಂಜಯ ಪೊಲೀಸ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಪೋಸ್ಟರ್ ಗಳು ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. ಈಗ ಚಿತ್ರ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.
ಕೆಆರ್ ಜಿ ಸ್ಟುಡಿಯೋಸ್ ಮೂಲಕ ಕಾರ್ತಿಕ್ – ಯೋಗಿ ಜಿ ರಾಜ್ ಸಿನಿಮಾವನ್ನು ನಿರ್ಮಾಣ ಮಾಡಲಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಸಿನಿಮಾ ಮಾರ್ಚ್ 30, 2023 ರಲ್ಲಿ ರಿಲೀಸ್ ಆಗಲಿದೆ. ಪೋಸ್ಟರ್ ನಲ್ಲಿ ನಟ ರಾಕ್ಷಸ ಧನಂಜಯ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. “ಆರಕ್ಷಕ ರಾಕ್ಷಸನಾದಾ” ಎಂದು ಪೋಸ್ಟರ್ ನಲ್ಲಿ ಬರೆದಿದ್ದು, ಕುತೂಹಲ ಹೆಚ್ಚಿಸಿದೆ.
ಅಮೃತ ಅಯ್ಯಂಗಾರ್ ʼಗಂಗಾʼ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಾಲಿ ಗುರುದೇವ್ ಎನ್ನುವ ಪೊಲೀಸ್ ಆಫೀಸರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಪೋಸ್ಟರ್ ಹಂಚಿಕೊಂಡಿವ ನಟ ಡಾಲಿ ಧನಂಜಯ 30th ಮಾರ್ಚ್ 2023’ರಿಂದ ಹೊಯ್ಸಳನ ಉತ್ಸವ ಶುರು ಎಂದು ಬರೆದುಕೊಂಡಿದ್ದಾರೆ.
ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಆಗಿರುವ ಧನಂಜಯ ಅವರ ʼಮಾನ್ಸೂನ್ ರಾಗʼ ಚಿತ್ರ ಇದೇ ಸೆ.16 ರಂದು ರಿಲೀಸ್ ಆಗಲಿದೆ. ಆ ಬಳಿಕ ʼತೋತಾಪುರಿʼ ಸಿನಿಮಾ ಸೆ.30 ರಂದು ರಿಲೀಸ್ ಆಗಲಿದೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…