ಜಾಕ್ಪಾಟ್ ನಿರೀಕ್ಷೆಯಲ್ಲಿ ಚಂದು
Team Udayavani, Dec 6, 2020, 1:40 PM IST
“ಜಾಕ್ಪಾಟ್’ – ಹೀಗೊಂದು ಸಿನಿಮಾ ಸದ್ದಿಲ್ಲದೇ ಸೆಟ್ಟೇರಿ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದೆ. ಕೆಲವು ವರ್ಷಗಳ ಹಿಂದೆಕನ್ನಡದಲ್ಲಿ ಜಾಕ್ಪಾಟ್ ಎಂಬ ಸಿನಿಮಾವೊಂದು ಬಂದಿತ್ತು. ಈಗ ಅದೇ ಹೆಸರಿನಲ್ಲಿ ಹೊಸ ಸಿನಿಮಾವೊಂದು ಬರುತ್ತಿದೆ. ಈ ಚಿತ್ರನ್ನು ಅಮರ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಎಟಿಎಂ’ ಸಿನಿಮಾ ನಿರ್ದೇಶಿಸಿದ್ದ ಅಮರ್ ಈಗ “ಜಾಕ್ಪಾಟ್’ ಮಾಡುತ್ತಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಪೊಲೀಸ್ ಹಾಗೂ ವ್ಯಕ್ತಿಯೋರ್ವನ ನಡುವೆ ನಡೆಯುತ್ತದೆ. ದುಬಾರಿ ಬೆಲೆಯ ಡ್ರಗ್ವೊಂದನ್ನು ಮಾರಿ, ದುಡ್ಡು ಮಾಡಬೇಕೆಂದು ಹೊರಟ ಯುವಕನ ಬೆನ್ನ ಹಿಂದೆ ಪೊಲೀಸರು ಬಿದ್ದಿರುತ್ತಾರೆ. ಈ “ಥ್ರಿಲ್ಲರ್’ ಓಟದಲ್ಲಿ ಮುಂದೇನಾಗುತ್ತದೆ ಎಂಬುದುಕುತೂಹಲದ ಅಂಶ ಎನ್ನುವುದು ಚಿತ್ರತಂಡದ ಮಾತು. ನವೀನ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಕಿರುತೆರೆಯಲ್ಲಿ ಹೆಸರು ಮಾಡಿರುವ ಚಂದು ಹಾಗೂ ಶೋಭಿತಾ ನಾಯಕ-ನಾಯಕಿಯರಾಗಿ ನಟಿಸಿದ್ದಾರೆ.
ಚಿತ್ರದ ಬಗ್ಗೆ ಮಾತನಾಡುವ ಚಂದು, ಚಿತ್ರದಲ್ಲಿ ನಾನು ಪೊಲೀಸ್ ಆಫೀಸರ್ ಆಗಿ ನಟಿಸಿದ್ದೇನೆ. ಪಾತ್ರ ಭಿನ್ನವಾಗಿದೆ. ನಿರ್ದೇಶಕರು ಕಲಾವಿದರಿಂದ ಚೆನ್ನಾಗಿ ಕೆಲಸ ತೆಗೆಸಿದ್ದಾರೆ ಎನ್ನುತ್ತಾರೆ. ಶೋಭಿತಾ ಅವರಿಗೂ ಒಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ.ಚಿತ್ರದಲ್ಲಿ ಮಂಡ್ಯ ರಮೇಶ್, ಪವನ್ ಸೇರಿದಂತೆ ಅನೇಕರು ನಟಿಸಿದ್ದಾರೆ.42 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ