ಜಗ್ಗೇಶ್‌-ವಿಜಯಪ್ರಸಾದ್‌ ಬ್ಯಾಂಗ್‌ ಬ್ಯಾಂಗ್‌:  ಸೆ.30ಕ್ಕೆ ‘ತೋತಾಪುರಿ’ ಭರ್ಜರಿ ಬಿಡುಗಡೆ

Team Udayavani, Aug 12, 2022, 12:50 PM IST

ಜಗ್ಗೇಶ್‌-ವಿಜಯಪ್ರಸಾದ್‌ ಬ್ಯಾಂಗ್‌ ಬ್ಯಾಂಗ್‌:  ಸೆ.30ಕ್ಕೆ ‘ತೋತಾಪುರಿ’ ಭರ್ಜರಿ ಬಿಡುಗಡೆ

ಈ ವರ್ಷ ಚಂದನವನದಲ್ಲಿ ಸ್ಟಾರ್‌ ಸಿನಿಮಾಗಳು ಬಂಗಾರದ ಬೆಳೆ ತೆಗೆಯುವಲ್ಲಿ ಯಶಸ್ವಿಯಾಗಿದ್ದು, ಫ‌ಸಲು ಭರ್ಜರಿಯಾಗಿಯೇ ಇದೆ. ಕರ್ನಾಟಕ ಮಾತ್ರವಲ್ಲದೇ ದೇಶ-ವಿದೇಶದಲ್ಲೂ ಜೋರಾಗಿಯೇ ಸದ್ದು ಮಾಡಿರುವುದು ಸ್ಯಾಂಡಲ್ ವುಡ್‌ ಹೆಚ್ಚುಗಾರಿಕೆ. ಕೆಜಿಎಫ್ 2, ಜೇಮ್ಸ್, 777 ಚಾರ್ಲಿ, ವಿಕ್ರಾಂತ್‌ ರೋಣ ಸೇರಿದಂತೆ ಮೊದಲಾದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮಿಂಚು ಹರಿಸಿವೆ.

ಇದೀಗ ಅದೇ ಸಾಲಿನಲ್ಲಿ “ತೋತಾಪುರಿ’ ಸಹ ಸದ್ದು ಮಾಡಲು ಸಜ್ಜಾಗಿದೆ. ಇವೆಲ್ಲವೂ ಪ್ಯಾನ್‌ ಇಂಡಿಯಾ ಸಿನಿಮಾ ಎಂಬುದು ಒಂದೆಡೆಯಾದರೆ, “ತೋತಾಪುರಿ’ ಭಾಗ 1 ಭಾಗ 2 ರೂಪದಲ್ಲಿ ತೆರೆಕಾಣುತ್ತಿರೋದು ವಿಶೇಷ. ಈ ಚಿತ್ರದಲ್ಲಿ “ನೀರ್‌ ದೋಸೆ’ ಹಿಟ್‌ ಜೋಡಿ ಜಗ್ಗೇಶ್‌ ಹಾಗೂ ವಿಜಯಪ್ರಸಾದ್‌ ಮೋಡಿ ಮಾಡಲಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ‘ತೋತಾಪುರಿ’ಗಾಗಿ ವಿಶ್ವಾದ್ಯಂತ ಕುತೂಹಲದಿಂದ ಎದುರು ನೋಡುತ್ತಿರುವುದು ವಿಶೇಷ ಸಂಗತಿ.

ಸೆಪ್ಟೆಂಬರ್‌ 30ರಂದು ವಿಶ್ವಾದ್ಯಂತ “ತೋತಾಪುರಿ’ ಭಾಗ 1 ತೆರೆಗೆ ಬರಲು ಸಜ್ಜಾಗಿದೆ. ಇಷ್ಟಲ್ಲದೇ ಈ ಸಿನಿಮಾದಲ್ಲಿ ಇನ್ನೂ ಸಾಕಷ್ಟು ಸಂಗತಿಗಳಿವೆ. ತಾರಾಗಣ, ತಾಂತ್ರಿಕತೆ ಹಾಗೂ ವಿವಿಧ ಲೊಕೇಶನ್‌ಗಳ ವೈವಿಧ್ಯತೆ “ತೋತಾಪುರಿ’ಯಲ್ಲಿ ಅಡಕವಾಗಿದೆ. ಈಗಾಗಲೇ ಬೇರೆ ಭಾಷೆಗಳಲ್ಲಿ ನಟಿಸಿ ಗುರುತಿಸಿಕೊಂಡಿರುವ “ಡಾಲಿ’ ಧನಂಜಯ್‌ ಈ ಸಿನಿಮಾದ ಮತ್ತೂಂದು ಆಕರ್ಷಣೆ. ಅಲ್ಲದೇ ತಮಿಳಿನ ಹಲವಾರು ಸಿನಿಮಾಗಳಿಗೆ ಸಂಗೀತ ಸಂಯೋಜಿಸಿರುವ ಅನೂಪ್‌ ಸೀಳಿನ್‌ ಈ ಚಿತ್ರಕ್ಕೂ ಸಂಗೀತ ನೀಡಿರುವುದು ಪ್ಲಸ್‌ ಪಾಯಿಂಟ್‌.

ಇದನ್ನೂ ಓದಿ:ನಿಗದಿತ ದಿನಕ್ಕಿಂತ ಮೊದಲೇ ಆರಂಭವಾಗಲಿದೆ ಕತಾರ್ ಫುಟ್ ಬಾಲ್ ವಿಶ್ವಕಪ್

ಹಾಗೆಯೇ ಈ ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್‌ ನಿರ್ಮಿಸಿರುವ ಗೋವಿಂದಾಯ ನಮಃ, ಶಿವಲಿಂಗ ಸೇರಿದಂತೆ ಅನೇಕ ಸಿನಿಮಾಗಳು ಪರಭಾಷೆಗಳಲ್ಲಿ ರೀಮೇಕ್‌ ಆಗಿರುವುದರಿಂದ ಪಕ್ಕದ ರಾಜ್ಯದಲ್ಲಿ “ತೋತಾಪುರಿ’ ಬಗ್ಗೆ ಅದಾಗಲೇ ಟಾಕ್‌ ಶುರುವಾಗಿದೆ. ಇವೆಲ್ಲಾ ಅಂಶಗಳು ಪ್ಯಾನ್‌ ಮಟ್ಟದ ಸಿನಿಮಾಕ್ಕೆ ಸಾಥ್‌ ನೀಡುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಚಿತ್ರತಂಡದ ಬಲವಾದ ನಂಬಿಕೆ.

ಟಾಪ್ ನ್ಯೂಸ್

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

ಸರ್ವರಿಗೂ ಭೂಮಿ ಕೇರಳ ಗುರಿ: ಸಿಎಂ ಪಿಣರಾಯಿ ವಿಜಯನ್‌

Kasaragod ಸರ್ವರಿಗೂ ಭೂಮಿ ಕೇರಳ ಗುರಿ: ಸಿಎಂ ಪಿಣರಾಯಿ ವಿಜಯನ್‌

Surathkal ವಾಹನದಡಿ ಸಿಲುಕಿದ ವಿದ್ಯಾರ್ಥಿ ಪಾರು

Surathkal ವಾಹನದಡಿ ಸಿಲುಕಿದ ವಿದ್ಯಾರ್ಥಿ ಪಾರು

Brahmavar;ಯುವತಿಗೆ ವಂಚನೆ, ಬೆದರಿಕೆ ಆರೋಪ: ಪ್ರಕರಣ ದಾಖಲು

Brahmavar;ಯುವತಿಗೆ ವಂಚನೆ, ಬೆದರಿಕೆ ಆರೋಪ: ಪ್ರಕರಣ ದಾಖಲು

Kadaba ತಂಡದಿಂದ ಹಲ್ಲೆ: ನಾಲ್ವರ ಬಂಧನ

Kadaba ತಂಡದಿಂದ ಹಲ್ಲೆ: ನಾಲ್ವರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Abhishek Shetty’s Gani BCom Pass 2

Kannada Cinema; ಸೀಕ್ವೆಲ್ ನಲ್ಲಿ ನಮ್ ಗಣಿ

Kannada Cinema; ಬರಲಿದೆ ಮೆಜೆಸ್ಟಿಕ್-2; ಭರತ್ ಗೆ ಜೋಡಿಯಾಗಿ ಸಂಹಿತಾ ವಿನ್ಯಾ

Kannada Cinema; ಬರಲಿದೆ ಮೆಜೆಸ್ಟಿಕ್-2; ಭರತ್ ಗೆ ಜೋಡಿಯಾಗಿ ಸಂಹಿತಾ ವಿನ್ಯಾ

Sandalwood; ರಿಲೀಸ್‌ ಭರಾಟೆಯಲ್ಲಿ ಮಂಕಾಗುತ್ತಿರುವ ಹೊಸಬರು

Sandalwood; ರಿಲೀಸ್‌ ಭರಾಟೆಯಲ್ಲಿ ಮಂಕಾಗುತ್ತಿರುವ ಹೊಸಬರು

cinemas

Sandalwood; ಈ ವಾರ ತೆರೆಗೆ 6 ಸಿನಿಮಾಗಳು

guru deshpande

Sandalwood; ಹೊಸ ಚಿತ್ರದತ್ತ ಗುರು ದೇಶಪಾಂಡೆ; ಹಾಡುಗಳ ಧ್ವನಿಮುದ್ರಣ ಶುರು

MUST WATCH

udayavani youtube

ಸಸಿಹಿತ್ಲು ಕಡಲು ಸೇರಿದ ಸೇರಿದ 88 ಆಲಿವ್‌ ಮರಿಗಳು

udayavani youtube

ಮಧುಮೇಹ ಕಿಡ್ನಿ ಸಮಸ್ಯೆಗೆ ಹೇಗೆ ಕಾರಣವಾಗುತ್ತದೆ ?

udayavani youtube

ಏನಿದು ಮಂಗನ ಕಾಯಿಲೆ?

udayavani youtube

ಅರಬ್ಬರ ನಾಡಿನಲ್ಲಿ ಹಿಂದೂ ದೇವಾಲಯ

udayavani youtube

ಶುಗರ್ ಬೀಟ್ : ನೂತನ ಪ್ರಯೋಗದತ್ತ ನಿಂಗಸಾನಿ ಸಹೋದರರು

ಹೊಸ ಸೇರ್ಪಡೆ

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Mangaluru ವಿ.ವಿ.ಗೆ ಇಡಿ ಅಧಿಕಾರಿಗಳು ಮತ್ತೆ ಭೇಟಿ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

Tiger Attack; ಕೊಡಗಿನ ಹೋದವಾಟದಲ್ಲಿ ಹುಲಿ ದಾಳಿ: 2 ಹಸು ಸಾವು: ಆತಂಕ

bUdupi MGM College ground: “ಬಿಲ್ಡ್‌ ಟೆಕ್‌-2024′ ಕಟ್ಟಡ ಸಾಮಗ್ರಿ ಪ್ರದರ್ಶನಕ್ಕೆ ಚಾಲನೆ

Udupi MGM College ground: “ಬಿಲ್ಡ್‌ ಟೆಕ್‌-2024′ ಕಟ್ಟಡ ಸಾಮಗ್ರಿ ಪ್ರದರ್ಶನಕ್ಕೆ ಚಾಲನೆ

Fishermen’s ಸಂಕಷ್ಟ ನಿಧಿ ಮೊತ್ತ 8 ಲಕ್ಷ ರೂ.ಗೆ ಏರಿಕೆ: ಚೇತನ್‌ ಬೆಂಗ್ರೆ

Fishermen’s ಸಂಕಷ್ಟ ನಿಧಿ ಮೊತ್ತ 8 ಲಕ್ಷ ರೂ.ಗೆ ಏರಿಕೆ: ಚೇತನ್‌ ಬೆಂಗ್ರೆ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

Manipal; ಉದಯವಾಣಿ ಎಂಐಸಿ ನಮ್ಮ ಸಂತೆಗೆ ಇಂದು ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.