“ಸಲಗ’ನಿಗಾಗಿ ಮತ್ತೆ ಕಡಲೆಕಾಯಿ ಪರಿಷೆ


Team Udayavani, Dec 26, 2019, 7:02 AM IST

salaga

ಪ್ರತಿವರ್ಷದಂತೆ ಈ ವರ್ಷ ಕೂಡ ಇತ್ತೀಚೆಗಷ್ಟೆ ಬಸವನ ಗುಡಿಯಲ್ಲಿ ಕಡಲೆ ಕಾಯಿ ಪರಿಷೆ ಜೋರಾಗಿ ನಡೆದಿದ್ದು ನಿಮಗೆ ನೆನಪಿರಬಹುದು. ಜನ ತಮ್ಮ ಮನೆಮಂದಿಯ ಜೊತೆಗೆ ಹೋಗಿ ಕಡಲೆ ಕಾಯಿ ಪರಿಷೆಯನ್ನು ಎಂಜಾಯ್‌ ಕೂಡ ಮಾಡಿದ್ದರು. ಈಗ ಅದೇ ಜಾಗದಲ್ಲಿ ಮತ್ತೆ ಕಡಲೆ ಕಾಯಿ ಪರಿಷೆ ಶುರುವಾಗಿದೆ. ಹೌದು, ಇಲ್ಲಿಯವರೆಗೆ ಕಡಲೆಕಾಯಿ ಪರಿಷೆ ಬಸವನಗುಡಿಯ ಬಸವನಿಗಾಗಿ ನಡೆಯುತ್ತಿದ್ದರೆ, ಈ ಬಾರಿ “ಸಲಗ’ನಿಗಾಗಿ ನಡೆಯುತ್ತಿದೆ.

ಅದು ಚಿತ್ರೀಕರಣದ ಸಲುವಾಗಿ. ದುನಿಯಾ ವಿಜಯ್‌ ಇದೇ ಮೊದಲ ಬಾರಿಗೆ ನಿರ್ದೇಶಕರಾಗಿರುವ ಜೊತೆಗೆ ನಾಯಕರಾಗಿಯೂ ನಟಿಸುತ್ತಿರುವ “ಸಲಗ’ ಚಿತ್ರದ ಕ್ಲೈಮಾಕ್ಸ್‌ ದೃಶ್ಯಗಳನ್ನು ಇತ್ತೀಚೆಗೆ ನಡೆದ ಕಡಲೆಕಾಯಿ ಪರಿಷೆಯಲ್ಲಿ ನೈಜವಾಗಿ ಸೆರೆಹಿಡಿಯಲಾಗಿತ್ತು. ಆದರೆ ಕ್ಲೈಮ್ಯಾಕ್ಸ್‌ನ ಕೆಲ ಭಾಗದ ಶೂಟಿಂಗ್‌ನಲ್ಲಿ ಅತಿಯಾದ ಜನಜಂಗುಳಿಯಿದ್ದ ಕಾರಣ ಕೆಲ ದೃಶ್ಯಗಳನ್ನು ಚಿತ್ರೀಕರಿಸಲು ಸಾಧ್ಯವಾಗಿರಲಿಲ್ಲ.

ಹಾಗಾಗಿ ಈಗ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಆವರಣದಲ್ಲಿ ಮತ್ತೂಮ್ಮೆ ಕಡಲೆ ಕಾಯಿ ಪರಿಷೆ ಸೆಟ್‌ ನಿರ್ಮಿಸಿರುವ ಚಿತ್ರತಂಡ, ಬಿಟ್ಟು ಹೋಗಿರುವ ಕ್ಲೈಮ್ಯಾಕ್ಸ್‌ ದೃಶ್ಯಗಳನ್ನು ಚಿತ್ರೀಕರಿಸುವ ಕೆಲಸದಲ್ಲಿ ನಿರತವಾಗಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್‌, “ಚಿತ್ರದ ಕ್ಲೈಮ್ಯಾಕ್ಸ್‌ ಆದಷ್ಟು ರಿಯಾಲಿಸ್ಟಿಕ್‌ ಆಗಿ ಮೂಡಿಬರಬೇಕು ಎಂಬ ಕಾರಣಕ್ಕೆ ಬಸವನಗುಡಿಯ ಪ್ರಸಿದ್ದ ಕಡಲೆ ಕಾಯಿ ಪರಿಷೆಯಲ್ಲಿ ಕ್ಲೈಮ್ಯಾಕ್ಸ್‌ ಬಾಗವನ್ನು ಶೂಟಿಂಗ್‌ ಮಾಡಲು ನಿರ್ಧರಿಸಿದ್ದೆವು.

ಅದರಂತೆ ಬಹುತೇಕ ದೃಶ್ಯಗಳನ್ನು ಅಲ್ಲಿಯೇ ಚಿತ್ರೀಕರಿಸಿದ್ದೆವು. ಆದರೆ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಕೆಲ ಆ್ಯಕ್ಷನ್‌ ದೃಶ್ಯಗಳನ್ನು ಕಡಲೆ ಕಾಯಿ ಪರಿಷೆಯಲ್ಲಿ ಜನಜಂಗುಳಿ ಜಾಸ್ತಿಯಿದ್ದ ಕಾರಣ ಶೂಟಿಂಗ್‌ ಮಾಡಲು ಆಗಿರಲಿಲ್ಲ. ಅದಕ್ಕಾಗಿ ಆಗ ಬಿಟ್ಟು ಹೋಗಿದ್ದ ಕೆಲ ದೃಶ್ಯಗಳನ್ನು ಅದೇ ಲೊಕೇಶನ್‌ನಲ್ಲಿ ಕಡಲೆ ಕಾಯಿ ಪರಿಷೆಯನ್ನು ರೀ-ಕ್ರಿಯೆಟ್‌ ಮಾಡಿ ಚಿತ್ರೀಕರಿಸುತ್ತಿದ್ದೇವೆ. ಕಳೆದ ಮೂರು ದಿನಗಳಿಂದ ಈ ಚಿತ್ರೀಕರಣ ನಡೆಯುತ್ತಿದ್ದು, ಕ್ಲೈಮ್ಯಾಕ್ಸ್‌ ಚಿತ್ರೀಕರಣ ಇಲ್ಲಿಗೆ ಮುಗಿಯುತ್ತದೆ.

ಇನ್ನು ಈ ಮೊದಲು ಕಡಲೆ ಕಾಯಿ ಪರಿಷೆಗೆ ದೀಪಾಲಂಕಾರ ಮಾಡಿದ್ದವರೇ, ಈ ಸೆಟ್ಗೂ ಅಲಂಕಾರ ಮಾಡಿದ್ದಾರೆ. 60ಕ್ಕೂ ಹೆಚ್ಚು ಅಂಗಡಿಗಳನ್ನು ಮತ್ತೆ ಹಾಕಲಾಗಿದೆ’ ಎಂದು ಮಾಹಿತಿ ಕೊಡುತ್ತಾರೆ. “ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್‌ ಅವರಿಗೆ ಸಂಜನಾ ಆನಂದ್‌ ನಾಯಕಿಯಾಗಿ ಅಭಿನಯಿಸುತ್ತಿದ್ದು, ಡಾಲಿ ಧನಂಜಯ್‌ ಇನ್ನೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ ಭರದಿಂದ ಚಿತ್ರೀಕರಣದಲ್ಲಿರುವ “ಸಲಗ’ ಹೊಸವರ್ಷದಲ್ಲಿ ತೆರೆಗೆ ಬರಲಿದೆ.

ಟಾಪ್ ನ್ಯೂಸ್

g parameshwara and mb patil angry on senior leaders

ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ

2-vijayapura

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಮತ್ತೆ ಭಯದಲ್ಲಿ ಜನ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

tdy-40

ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ

nalin-kumar

ಫೆ.11ರಂದು ಪುತ್ತೂರಿಗೆ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ, ಸಹಕಾರಿ ಸಮಾವೇಶ ಯಶಸ್ಸಿಗೆ ಸಂಸದ ನಳಿನ್‌ ಸೂಚನೆ

TDY-26

ಟ್ರಾಫಿಕ್‌ ದಂಡ ಪಾವತಿಗೆ ಭರ್ಜರಿ ರಿಯಾಯಿತಿ

ನಾಸಾ ಎಲೆಕ್ಟ್ರಿಕ್‌ ವಿಮಾನ ಎಕ್ಸ್‌-57 ಶೀಘ್ರ ಹಾರಾಟ ಆರಂಭ

ನಾಸಾ ಎಲೆಕ್ಟ್ರಿಕ್‌ ವಿಮಾನ ಎಕ್ಸ್‌-57 ಶೀಘ್ರ ಹಾರಾಟ ಆರಂಭಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

400 ಕೋಟಿಗೂ ಅಧಿಕ ಗಳಿಕೆ ಕಂಡ ʼಕಾಂತಾರʼ ಆಸ್ಕರ್‌ ರೇಸ್‌ ಹೋಗದಿರಲು ಈ ಅಂಶವೇ ಕಾರಣವೆಂದ ನಿರ್ಮಾಪಕ

400 ಕೋಟಿಗೂ ಅಧಿಕ ಗಳಿಕೆ ಕಂಡ ʼಕಾಂತಾರʼ ಆಸ್ಕರ್ ರೇಸ್ ನಿಂದ ಹೊರಬೀಳಲು ಈ ಅಂಶವೇ ಕಾರಣವೆಂದ ನಿರ್ಮಾಪಕ

palar

ನೈಜ ಘಟನೆ ಆಧಾರಿತ ‘ಪಾಲಾರ್’ ಫೆ.24ಕ್ಕೆ ತೆರೆಗೆ

sid sriram sung for mancha movie

ಕನ್ನಡದ ಮತ್ತೊಂದು ಗೀತೆಗೆ ಧ್ವನಿಯಾದ ಸಿದ್ ಶ್ರೀರಾಮ್

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

‘ನಟ ಭಯಂಕರ’ನಿಗೆ ತಲೆಬಿಸಿ ತಂದ ರಾಸಲೀಲೆ ಸಿಡಿ..!

ಆಟೋ, ಕ್ಯಾಬ್ ಚಾಲಕರಿಂದ ‘ರೂಪಾಯಿ’ ಚಿತ್ರದ ಟ್ರೇಲರ್ ರಿಲೀಸ್

ಆಟೋ, ಕ್ಯಾಬ್ ಚಾಲಕರಿಂದ ‘ರೂಪಾಯಿ’ ಚಿತ್ರದ ಟ್ರೇಲರ್ ರಿಲೀಸ್

MUST WATCH

udayavani youtube

ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?

udayavani youtube

ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ

udayavani youtube

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ‌ ಕೂಗು

udayavani youtube

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

udayavani youtube

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

ಹೊಸ ಸೇರ್ಪಡೆ

g parameshwara and mb patil angry on senior leaders

ಎಂ.ಬಿ.ಪಾ- ಪರಂ ಗರಂ: ಕಾಂಗ್ರೆಸ್ ಪ್ರಚಾರ ಸಮಿತಿ – ಪ್ರಣಾಳಿಕೆ ಸಮಿತಿಯಲ್ಲಿ ಅತೃಪ್ತಿಯ ಹೊಗೆ

2-vijayapura

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ: ಮತ್ತೆ ಭಯದಲ್ಲಿ ಜನ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

ಗರಿಷ್ಠ ರಾಜಸ್ವ ಸಂಗ್ರಹವಿದ್ದರೂ ತೀವ್ರ ಸಿಬಂದಿ ಕೊರತೆ: ಇದು ಮಂಗಳೂರು ಆರ್‌ಟಿಒ ವ್ಯಥೆ

tdy-40

ಜನಪ್ರಿಯತೆಗೆ ಚಿತ್ತ, ಸಂಪನ್ಮೂಲ ಎತ್ತ

nalin-kumar

ಫೆ.11ರಂದು ಪುತ್ತೂರಿಗೆ ಕೇಂದ್ರ ಸಚಿವ ಅಮಿತ್‌ ಶಾ ಭೇಟಿ, ಸಹಕಾರಿ ಸಮಾವೇಶ ಯಶಸ್ಸಿಗೆ ಸಂಸದ ನಳಿನ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.