3.60 ಕೋಟಿಗೆ ಕೆಜಿಎಫ್ ಆಡಿಯೋ ಹಕ್ಕು
Team Udayavani, Nov 28, 2018, 11:24 AM IST
ಲಹರಿ ಆಡಿಯೋ ಸಂಸ್ಥೆ ಈಗ ಮತ್ತೊಂದು ಹೊಸ ದಾಖಲೆ ಮಾಡಿದೆ. ಇತ್ತೀಚೆಗಷ್ಟೇ ಯುಟ್ಯೂಬ್ ಅವಾರ್ಡ್ ಪಡೆದಿದ್ದ ಲಹರಿ ಸಂಸ್ಥೆ ಈಗ ಭಾರೀ ಮೊತ್ತಕ್ಕೆ ಕನ್ನಡ ಚಿತ್ರವೋಂದರ ಆಡಿಯೋ ಹಕ್ಕು ಪಡೆಯುವುದರ ಮೂಲಕ ಇತಿಹಾಸ ಬರೆದಿದೆ. ಹೌದು, “ಕೆಜಿಎಫ್’ ಚಿತ್ರದ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆ, 3.60 ಕೋಟಿ ರುಪಾಯಿ ಕೊಟ್ಟು ಹಕ್ಕು ಖರೀದಿಸುವ ಮೂಲಕ ಕನ್ನಡ ಚಿತ್ರರಂಗ ಮಾತ್ರವಲ್ಲ, ಭಾರತ ಚಿತ್ರರಂಗದಲ್ಲೇ ದಾಖಲೆ ಬರೆದಿದೆ.
ಈ ಕುರಿತು “ಉದಯವಾಣಿ’ಗೆ ಸ್ಪಷ್ಟಪಡಿಸಿರುವ ಲಹರಿ ಸಂಸ್ಥೆಯ ಮುಖ್ಯಸ್ಥ ವೇಲು, “1992 ರಲ್ಲಿ 75 ಲಕ್ಷ ರುಪಾಯಿ ಕೊಡುವ ಮೂಲಕ “ದಳಪತಿ’ ಚಿತ್ರದ ಆಡಿಯೋ ಹಕ್ಕನ್ನು ಪಡೆಯುವ ಮೂಲಕ ದಾಖಲೆ ಮಾಡಿತ್ತು. ಆ ಬಳಿಕ “ಬಾಹುಬಲಿ’ ಚಿತ್ರದ ಹಾಡುಗಳನ್ನೂ ಸಹ ಅತೀ ಹೆಚ್ಚು ಮೊತ್ತ ನೀಡುವ ಮೂಲಕ ಖರೀದಿಸಿತ್ತು. ಈಗ ಕನ್ನಡದ ಈ ಚಿತ್ರದ ಹಾಡುಗಳಿಗೆ 3.60 ಕೋಟಿ ರುಪಾಯಿ ಕೊಡುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ.
ಹಿಂದಿ ಭಾಷೆ ಹೊರತುಪಡಿಸಿ, ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಹಾಡುಗಳಿಗೆ ಮಾತ್ರ ಈ ಮೊತ್ತ ನೀಡಿ ಖರೀದಿಸಿರುವುದಾಗಿ ಹೇಳುವ ವೇಲು, ಇಷ್ಟೊಂದು ಮೊತ್ತಕ್ಕೆ ಹಾಡುಗಳ ಹಕ್ಕು ಖರೀದಿಸಲು ಕಾರಣ, ಚಿತ್ರದ ಟೀಸರ್ಗೆ ಸಿಗುತ್ತಿರುವ ಮೆಚ್ಚುಗೆ ಮತ್ತು, ಎಲ್ಲಾ ಭಾಷೆಯಲ್ಲೂ ಕನ್ನಡ ಚಿತ್ರಕ್ಕೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದಾಗಿ ಚಿತ್ರದ ಹಾಡುಗಳನ್ನು ಖರೀದಿಸಲಾಗಿದೆ. ಅಂದಹಾಗೆ, ಮುಂದಿನ ವಾರದಲ್ಲಿ “ಕೆಜಿಎಫ್’ ಹಾಡುಗಳು ಬಿಡುಗಡೆಯಾಗಲಿದೆ ಎಂಬುದು ವೇಲು ಹೇಳಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ