ಹೆಣ್ಣು ಮಗುವಿನ ತಂದೆಯಾದ ಲೂಸ್‌ ಮಾದ ಯೋಗಿ

Team Udayavani, May 25, 2019, 1:21 PM IST

ಬೆಂಗಳೂರು: ದುನಿಯಾ ಚಿತ್ರದ ಲೂಸ್‌ ಮಾದ ಖ್ಯಾತಿಯ ಯೋಗಿ ಅವರು ತಂದೆಯಾದ ಸಂಭ್ರಮದಲ್ಲಿದ್ದಾರೆ. ಯೋಗಿ ಅವರ ಪತ್ನಿ ಸಾಹಿತ್ಯ ಶನಿವಾರ ಬೆಳಗ್ಗೆ ಪದ್ಮನಾಭನಗರದಲ್ಲಿರುವ ಮದರ್‌ವುಡ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದು, ಮಗುವನ್ನು ನೋಡಿ ಯೋಗಿ ಕುಟುಂಬ ಸಂಭ್ರಮಿಸಿದೆ.

ಯೋಗಿ ಬಾಲ್ಯದ ಗೆಳತಿ ಸಾಹಿತ್ಯ ಅವರನ್ನು 2017 ರ ನವೆಂಬರ್‌ 2 ರಂದು ಸಂಭ್ರಮದಲ್ಲಿ ವಿವಾಹವಾಗಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ