“ಮೆಟಡೋರ್” ಏರಿದ ಕವಿತಾ ಗೌಡ
Team Udayavani, May 18, 2022, 4:50 PM IST
ಈ ವರ್ಷದ ಆರಂಭದಲ್ಲಿ “ಹುಟ್ಟುಹಬ್ಬದ ಶುಭಾಶಯ’ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದ ನಟಿ ಕವಿತಾ ಗೌಡ ಈ ಬಾರಿ “ಮೆಟಡೋರ್’ ಏರಿ ಥಿಯೇಟರ್ಗೆ ಬರಲು ತಯಾರಿ ನಡೆಸಿದ್ದಾರೆ.
ಹೌದು, ಕವಿತಾ ಗೌಡ ಸದ್ಯ”ಮೆಟಡೋರ್’ ಸಿನಿಮಾದಲ್ಲಿ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಸಿನಿಮಾದ “ಗಾಂಧಾರಿ…’ ಎಂಬ ಪ್ರಮೋಷನಲ್ಸಾಂಗ್ನಲ್ಲಿ ಕವಿತಾ ಗೌಡ ಮಿಂಚಿದ್ದು, ಸದ್ಯ ಈ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಸೌಂಡ್ ಮಾಡುತ್ತಿದೆ. ಈ ಹಿಂದೆ 13ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸುದರ್ಶನ್ ಜಿ ಶೇಖರ್ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.
ಐದು ಕಥೆಯನ್ನು ಹೇಳುವ ಹೈಪರ್ ಲಿಂಕ್ ಸಿನಿಮಾವಾಗಿರುವ “ಮೆಟಡೋರ್’ ಚಿತ್ರದಲ್ಲಿ ಕಿರಣ್, ರವಿ ಮೈಸೂರು, ಅರ್ಚನಾ ಮಹೇಶ್, ಮೋಹನ್ ಬಾಬುಮೊದಲಾದವರು ಪ್ರಮುಖ ಪಾತ್ರಗಳಲ್ಲಿಅಭಿನಯಿಸಿದ್ದಾರೆ. ಚಿತ್ರಕ್ಕೆ ತಂಗಾಳಿ ನಾಗರಾಜ್ ಸಂಗೀತವಿದ್ದು, “ಓಂ ಸ್ಟುಡಿಯೋ ಪ್ರೂಡಕ್ಷನ್ ಹೌಸ್’ ಬ್ಯಾನರ್ನಡಿ ಕಿರಣ್ ಕುಮಾರ್ ಹೆಚ್. ನಿರ್ಮಿಸಿರುವ ಈ ಸಿನಿಮಾ ಮೇ 27ರಂದು ತೆರೆಗೆ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ