ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ರಚನಾ ಇಂದರ್
Team Udayavani, May 18, 2022, 5:46 PM IST
ನಟಿ ರಚನಾ ಇಂದರ್ ಸದ್ದಿಲ್ಲದೆ “4 ಎನ್ 6′ ಎಂಬ ಸಸ್ಪೆನ್ಸ್, ಕ್ರೈಂ-ಥ್ರಿಲ್ಲರ್ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದು, ಈ ಸಿನಿಮಾದಲ್ಲಿ ಮೊದಲ ಬಾರಿಗೆ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಹೌದು, ಸಂಪೂರ್ಣ ನಾಯಕಿ ಪ್ರಧಾನ ಕಥಾಹಂದರ ಹೊಂದಿರುವ, ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ “4 ಎನ್ 6′ ಚಿತ್ರದಲ್ಲಿ ರಚನಾ ಇಂದರ್, ನಯಿಷಾ ಎಂಬ ಫಾರೆನ್ಸಿಕ್ ಡಿಟೆಕ್ಟಿವ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
“ತುಂಬ ಗಂಭೀರವಾದ ಮತ್ತು ನೋಡುಗರಿಗೆ ಪ್ರತಿಕ್ಷಣ ಕೂಡ ಮುಂದೇನಾಗುತ್ತದೆ ಎಂಬ ಕುತೂಹಲ ಮೂಡಿಸುವಂತೆ, “4 ಎನ್ 6′ ಸಿನಿಮಾದ ಸ್ಕ್ರಿಪ್ಟ್ ಇರುವುದರಿಂದ ಈ ಪಾತ್ರವನ್ನು ಒಪ್ಪಿಕೊಂಡಿದ್ದೇನೆ. ಇಡೀ ಸಿನಿಮಾ ನನ್ನ ಪಾತ್ರ ಮತ್ತು ಇಂಟೆಲಿಜೆನ್ಸ್, ಇನ್ವೆಸ್ಟಿಗೇಷನ್ ಪ್ರೋಸೆಸ್ ಸುತ್ತ ನಡೆಯುತ್ತದೆ. ಮೊದಲ ಬಾರಿಗೆ ಈ ಜಾನರ್ನಲ್ಲಿ ಸಿನಿಮಾ ಮಾಡುತ್ತಿರುವುದು ಒಂದು ವಿಭಿನ್ನ ಅನುಭವ’ ಎನ್ನುವುದು ಚಿತ್ರ ಮತ್ತು ಪಾತ್ರದ ಬಗ್ಗೆ ರಚನಾ ಮಾತು.
ಅಂದಹಾಗೆ, ಇತ್ತೀಚೆಗಷ್ಟೇ “4 ಎನ್ 6′ ಸಿನಿಮಾದ ಮುಹೂರ್ತ ನೆರವೇರಿದ್ದು, ನಟ ರೋರಿಂಗ್ ಸ್ಟಾರ್ ಶ್ರೀಮುರುಳಿ “4 ಎನ್ 6′ ಚಿತ್ರದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈಗಾಗಲೇ ಹಲವು ಶಾರ್ಟ್ಫಿಲಂಗಳನ್ನು ಮಾಡಿ ಗುರುತಿಸಿಕೊಂಡಿರುವ ಯುವ ನಿರ್ದೇಶಕ ದರ್ಶನ್ ಶ್ರೀನಿವಾಸ್ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. “ಪರ್ಪಲ್ ಪ್ಯಾಚ್ ಪಿಕ್ಚರ್’ ಬ್ಯಾನರ್ನಲ್ಲಿ ಕರಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ರಚನಾ ಇಂದರ್ ಜೊತೆಗೆ ಹೊಸ ಪ್ರತಿಭೆಗಳಾದ ನವೀನ್, ಮೇಘನಾ, ಸಂಜಯ್ ನಾಯಕ್, ಸೌರವ್, ಸತ್ಯ, ರೇಣುಕಾ ಮತ್ತಿತರರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಚರಣ್ ತೇಜ್ ಛಾಯಾಗ್ರಹಣ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SS Rajamouli: ಬರಲಿದೆಯಾ ʼRRRʼ ಸೀಕ್ವೆಲ್?: ಜಪಾನ್ನಲ್ಲಿ ಸುಳಿವು ಕೊಟ್ಟ ರಾಜಮೌಳಿ
Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ ಕಂದಕೂರು
ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!