ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

2019ರಲ್ಲಿ ಆಯೋಜಿಸಿದ್ದ ಪಾರ್ಟಿ ಮೇಲೆ ಎನ್‌ಸಿಬಿ ಕಣ್ಣು

Team Udayavani, Sep 19, 2020, 9:40 AM IST

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಮುಂಬೈ: ಬಾಲಿವುಡ್‌ ಡ್ರಗ್‌ ಪ್ರಕರಣವು ಈಗ ನಿರ್ಮಾಪಕ ಕರಣ್‌ ಜೋಹರ್‌ ಕೊರಳಿಗೂ ಉರುಳಾಗುವ ಲಕ್ಷಣಗಳು ಕಾಣಿಸುತ್ತಿದೆ. 2019ರಲ್ಲಿ ಕರಣ್‌ ಆಯೋಜಿ ಸಿದ್ದ “ಡ್ರಗ್‌ ಪಾರ್ಟಿ’ಯೊಂದಕ್ಕೆ ಸಂಬಂಧಿಸಿ ತನಿಖೆ ನಡೆಸುವಂತೆ ದೆಹಲಿ ಮಾಜಿ ಶಾಸಕ ಮಂಜೀಂದರ್‌ ಸಿಂಗ್‌ ಸಿರ್ಸಾ ಅವರು ಮಾದಕದ್ರವ್ಯ ನಿಯಂತ್ರಣ ಬ್ಯೂರೋ(ಎನ್‌ಸಿಬಿ)ಗೆ ದೂರು ನೀಡಿದ್ದಾರೆ. ಹೀಗಾಗಿ ಕರಣ್‌ ಜೋಹರ್‌ ಹಾಗೂ ಬಾಲಿವುಡ್‌ನ‌ ಎ-ಲಿಸ್ಟ್‌ನಲ್ಲಿರುವ ಕೆಲವು ತಾರೆಯರಿಗೆ ಸಂಕಷ್ಟ ಎದುರಾಗಿದೆ.

ಜೋಹರ್‌ ಪಾರ್ಟಿಗೆ ಸಂಬಂಧಿಸಿದ ವಿಡಿಯೋವೊಂದು ಹರಿದಾಡುತ್ತಿದ್ದು, ಅದರ ಸತ್ಯಾಸತ್ಯತೆ ಅರಿಯುವ ಸಲುವಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಅದು ನೈಜ ವಿಡಿಯೋ ಎಂಬುದು ಸಾಬೀತಾದರೆ, ಎನ್‌ಸಿಬಿ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

ನಾಲ್ವರ ಬಂಧನ: ಇದೇ ವೇಳೆ, ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣದಲ್ಲಿ ಡ್ರಗ್‌ ಪಾತ್ರದ ಕುರಿತು ತನಿಖೆ ನಡೆಸುತ್ತಿರುವ ಎನ್‌ಸಿಬಿ, ಮುಂಬೈನಲ್ಲಿ ಶುಕ್ರವಾರ ನಾಲ್ವರನ್ನು ಬಂಧಿಸಿದೆ. ಅವರ ಬಳಿಯಿದ್ದ 928 ಗ್ರಾಂ ಚರಸ್‌, 500 ಗ್ರಾಂ ಗಾಂಜಾ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಮೇಣದಲ್ಲಿ ಜೀವತಳೆದ ನಟ ಸುಶಾಂತ್‌ ಸಿಂಗ್‌
ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಈಗ ಮೇಣದ ಪ್ರತಿಮೆಯಲ್ಲಿ ಜೀವ ತಳೆದಿದ್ದಾರೆ. ಬಂಗಾಳಿ ಅಭಿಮಾನಿ ಕಲಾವಿದನೊಬ್ಬ ಸುಶಾಂತ್‌ರ ಪ್ರತಿರೂಪವನ್ನು ಮೇಣದಿಂದ ನಿರ್ಮಿಸಿ, ಗಮನ ಸೆಳೆದಿದ್ದಾರೆ. ಪ. ಬಂಗಾಳದ ಸುಶಾಂತ ರೇ ಎಂಬ ಕಲಾವಿದ ತಮ್ಮ ವ್ಯಾಕ್ಸ್‌ ಮ್ಯೂಸಿಯಮ್ಮಿನಲ್ಲಿ ಸುಶಾಂತ್‌ ಪ್ರತಿರೂಪವನ್ನು ಅರಳಿಸಿದ್ದಾರೆ. ಅಮಿತಾಭ್‌ ಬಚ್ಚನ್‌, ವಿರಾಟ್‌ ಕೊಹ್ಲಿ, ಜ್ಯೋತಿ ಬಸು, ಪೀಲೆ, ಮದರ್‌ ಥೆರೇಸಾ ಅವರ ಸಾಲಿನಲ್ಲಿ ಸುಶಾಂತ್‌ ಪ್ರತಿಮೆ ತನ್ನದೇ ಆದ ಕಲಾವಿನ್ಯಾಸದೊಂದಿಗೆ ಆಕರ್ಷಿಸುತ್ತಿದೆ. ಸೊಂಟದ ಮೇಲೆ ಕೈ ಇಟ್ಟುಕೊಂಡು, ನಸು ನಗುತ್ತಿರುವ ಭಂಗಿಯಲ್ಲಿ ಸುಶಾಂತ್‌ ಪ್ರತಿಮೆ ಸೆಳೆಯುತ್ತಿದೆ. ಬಾಲಿವುಡ್‌ ನಟನ ಮೇಣದ ಪ್ರತಿಮೆಯ ವಿಡಿಯೊವನ್ನು ಸುಶಾಂತ ರೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ರಾತ್ರೋರಾತ್ರಿ ಈ ವಿಡಿಯೊ ವೈರಲ್‌ ಆಗಿ, ಮ್ಯೂಸಿಯಂನಲ್ಲಿನ ಸುಶಾಂತ್‌ ಸಿಂಗ್‌ ಪ್ರತಿಮೆ ವೀಕ್ಷಣೆಗೆ ಯುವ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ.

ಟಾಪ್ ನ್ಯೂಸ್

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

Kundapura ಕಾರು ಡಿವೈಡರ್‌ ಏರಿ ಪಲ್ಟಿ; ಮೂವರಿಗೆ ಗಾಯ

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು

ಕುಂಬಳೆ: ಚಿನ್ನದ ಸರ ಸೆಳೆದು ಪರಾರಿ; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.