ತಮಿಳು ಚಿತ್ರದಲ್ಲಿ ವಿಲನ್‌ ಆಗಿ ನಟಿಸೋದಿಲ್ಲ!

ಅಂತೆ-ಕಂತೆ ಸುದ್ದಿಗೆ ಸುದೀಪ್‌ ಸ್ಪಷ್ಟನೆ

Team Udayavani, Dec 30, 2019, 7:04 AM IST

sudeep

“ರಾಂಗ್‌ ನ್ಯೂಸ್‌…’ ಇದು ಸುದೀಪ್‌ ಮಾಡಿರುವ ಟ್ವೀಟ್‌. ಹೌದು, ಸುದೀಪ್‌ “ಆ ಸುದ್ದಿ ಸುಳ್ಳು’ ಅಂತ ಹೇಳ್ಳೋಕೆ ಕಾರಣ, ತಮಿಳು ಚಿತ್ರವೊಂದರಲ್ಲಿ ಸುದೀಪ್‌ ಅವರು ವಿಲನ್‌ ಆಗಿ ನಟಿಸಲಿದ್ದಾರೆ ಎಂದು ಹರಿದಾಡಿದ ಸುದ್ದಿಗೆ. ಅಷ್ಟಕ್ಕೂ ಸುದೀಪ್‌ ಬಗ್ಗೆ ಬಂದ ಸುದ್ದಿ ಏನು ಗೊತ್ತಾ? ಕಾಲಿವುಡ್‌ ನಟ ಸಿಲಂಬರಸನ್‌ ಅಭಿನಯದ “ಮಾನಾಡು’ ಚಿತ್ರದಲ್ಲಿ ಸುದೀಪ್‌ ಅವರು ವಿಲನ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ ಎಂಬ ಸುದ್ದಿ ಜೋರಾಗಿಯೇ ಹರಿದಾಡಿತ್ತು.

ಅಷ್ಟೇ ಅಲ್ಲ, ಆ ಚಿತ್ರದ ನಿರ್ದೇಶಕರು ಈಗಾಗಲೇ ಸುದೀಪ್‌ ಅವರನ್ನು ಭೇಟಿ ಮಾಡಿ, ಕಥೆಯನ್ನು ಹೇಳಿದ್ದು, ಆ ಕಥೆ, ಪಾತ್ರವನ್ನು ಸುದೀಪ್‌ ಕೂಡ ಒಪ್ಪಿದ್ದಾರಂತೆ ಎಂಬ ಮಾತುಗಳು ಹರಿದಾಡಿದ್ದವು. ಬಹುತೇಕರು ಆ ಸುದ್ದಿ ನಿಜ ಇರಬಹುದೇನೋ ಅಂತಂದುಕೊಂಡಿದ್ದರು. ಈ ಸುದ್ದಿ ಸುದೀಪ್‌ ಅವರ ಕಿವಿಗೆ ಬಿದ್ದದ್ದೇ ತಡ, ಅವರು, ತಮ್ಮ ಟ್ವಿಟ್ಟರ್‌ನಲ್ಲಿ “ರಾಂಗ್‌ ನ್ಯೂಸ್‌’ ಅಂತ ಬರೆದುಕೊಂಡಿದ್ದಾರೆ.

ಒಂದು ಗಾಳಿ ಸುದ್ದಿ ಎಷ್ಟು ಜೋರಾಗಿ ಹರಡಿತ್ತೋ, ಅಷ್ಟೇ ವೇಗವಾಗಿಯೂ, ಸುದೀಪ್‌ ಅವರು ಮಾಡಿರುವ ಟ್ವೀಟ್‌ ಕೂಡ ತಲುಪಿದೆ. ‘ಮಾನಾಡು’ ಚಿತ್ರದಲ್ಲಿ ವಿಲನ್‌ ಆಗಿ ನಟಿಸಲು ಒಪ್ಪಿಕೊಂಡಿರುವ ಸುದ್ದಿ ಸುಳ್ಳು ಎಂದು ಹೇಳುವ ಮೂಲಕ ಎಲ್ಲಾ ಅಂತೆ-ಕಂತೆಗಳಿಗೂ ಸುದೀಪ್‌ ತೆರೆ ಎಳೆದಿದ್ದಾರೆ. ಅಂದಹಾಗೆ, ಸುದೀಪ್‌ ಈಗಾಗಲೇ ಪರಭಾಷೆಯ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವುದುಂಟು. ನೆಗೆಟಿವ್‌ ಪಾತ್ರ ಮೂಲಕ ಗಮನಸೆಳೆದಿದ್ದಾರೆ.

ಅವರು “ದಬಾಂಗ್‌ 3′ ಚಿತ್ರದಲ್ಲೂ ಮೊದಲ ಸಲ ಸಲ್ಮಾನ್‌ಖಾನ್‌ ಅವರ ಎದುರು ವಿಲನ್‌ ಆಗಿ ಆರ್ಭಟಿಸಿದ್ದರು. ಅದರ ಬೆನ್ನ ಹಿಂದೆಯೇ, ತಮಿಳು ಚಿತ್ರದಲ್ಲಿ ಸುದೀಪ್‌ ಅವರು ವಿಲನ್‌ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಹರಡಿತ್ತು. ಈ ಗಾಳಿ ಸುದ್ದಿಗೆ ಸುದೀಪ್‌ ಅವರೇ ತೆರೆ ಎಳೆಯುವ ಮೂಲಕ, ತಾವು ನಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಸುದೀಪ್‌ ಅಭಿನಯದ “ಕೋಟಿಗೊಬ್ಬ-3′ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ.

ಈ ನಡುವೆ ಸುದೀಪ್‌ ಅವರು “ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲೂ ಬಿಝಿಯಾಗಿದ್ದಾರೆ. ಇದು ಮುಗಿದ ಬಳಿಕ ಸುದೀಪ್‌ ಅವರು ನಿರ್ದೇಶನಕ್ಕಿಳಿಯಲಿದ್ದಾರೆ ಎಂಬ ಮಾತುಗಳೂ ಇವೆ. ಈ ಮಧ್ಯೆ, ಜಾಕ್‌ಮಂಜು ನಿರ್ಮಾಣದ ಅನೂಪ್‌ ಭಂಡಾರಿ ನಿದೇಶನದ ಚಿತ್ರವೂ ಸೆಟ್ಟೇರಬೇಕಿದೆ. ಮೊದಲು ನಟನೆ ಮಾಡುತ್ತಾರೋ ಅಥವಾ ತಮ್ಮ ನಿರ್ದೇಶನದ ಜೊತೆಯಲ್ಲಿ ನಟಿಸುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.

ಟಾಪ್ ನ್ಯೂಸ್

Price Hike: ಪೆಟ್ರೋಲ್- ಡೀಸೆಲ್ ಮೇಲೆ ಸೆಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ!

Price Hike: ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ!

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

Suresh gopi: ಇಂದಿರಾ ಗಾಂಧಿಯವರನ್ನು ‘ಭಾರತ ಮಾತೆ’ ಎಂದ ಬಿಜೆಪಿ ನಾಯಕ

7

Uttarakhand: ಕಮರಿಗೆ ಉರುಳಿದ ಟಿಟಿ ವಾಹನ; ಕನಿಷ್ಠ 10 ಮಂದಿ ದುರ್ಮರಣ

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

Father’s Day 2024: ಅಪ್ಪನಿಗೆ ಹೂ ನೀಡಿ, ನಗೆ ಬೀರಿ, ತಬ್ಬಿದರೆ ಸಾಕೇ…..?!

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

ಚಿತ್ರದುರ್ಗ ಬಳಿ ಭೀಕರ ಅಪಘಾತ: ಮೃತರು ಬೆಂಗಳೂರು ಮೂಲದವರು, ಗೋವಾಕ್ಕೆ ಹೊರಟಿದ್ದ ಕುಟುಂಬ

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

AIR INDIA-ಪ್ರಸಿದ್ಧ ಕಲಾವಿದ ಏರ್‌ ಇಂಡಿಯಾಕ್ಕೆ ನೀಡಿದ್ದು ಅದ್ಭುತ ಕಲಾಕೃತಿ!

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 8 ಮಂದಿ ನಕ್ಸಲರು ಹತ, ಓರ್ವ ಯೋಧ ಹುತಾತ್ಮ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

ಲಂಡನ್‌ ಶೂಟ್‌,ಡಾನ್‌ ಲುಕ್, ಖ್ಯಾತ ನಟಿ ಎಂಟ್ರಿ.. ʼಟಾಕ್ಸಿಕ್‌ʼ ಲೇಟೆಸ್ಟ್‌ ಅಪ್ಡೇಟ್‌ ಔಟ್

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Renuka Swamy case: ಕನ್ನಡ ಚಿತ್ರರಂಗಕ್ಕೆ ದರ್ಶನ್‌ ದೇವಮಾನವ ಇದ್ದಂತೆ: ನಟಿ ಸಂಜನಾ

Kannada Cinema; ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

Sandalwood: ಭ್ರಮೆ ಬಿಟ್ಟು ಬದುಕಿದರು.. ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ ಡಾ.ರಾಜ್‌

love li kannada movie

Love Li; ತೆರೆಗೆ ಬಂತು ವಸಿಷ್ಠ ನಟನೆಯ ‘ಲವ್ ಲೀ’

kotee movie

Kotee movie: ನೈಜತೆಯೇ ಕೋಟಿಯ ಜೀವಾಳ

MUST WATCH

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

ಹೊಸ ಸೇರ್ಪಡೆ

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ

ಮೂಡುಬಿದಿರೆ: ಆಳ್ವಾಸ್‌ನಲ್ಲಿ ಹಲಸು, ಹಣ್ಣು, ಆಹಾರೋತ್ಸವಗಳ ಸಮೃದ್ಧಿ

Price Hike: ಪೆಟ್ರೋಲ್- ಡೀಸೆಲ್ ಮೇಲೆ ಸೆಸ್ ಹೆಚ್ಚಳ ಮಾಡಿ ರಾಜ್ಯ ಸರ್ಕಾರ!

Price Hike: ಪೆಟ್ರೋಲ್- ಡೀಸೆಲ್ ಬೆಲೆ ಹೆಚ್ಚಳ ಮಾಡಿದ ರಾಜ್ಯ ಸರ್ಕಾರ!

4-udupi

ರಾಮ ನಿರ್ಯಾಣದ ಪ್ರವಚನಗೈಯುತ್ತಲೇ ಮೋಕ್ಷಯಾನ ಕೈಗೊಂಡ ದ್ವೈತ ವೇದಾಂತ ವಿಚಕ್ಷಣ

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

ಬೆಳ್ತಂಗಡಿಯಲ್ಲಿ ಭತ್ತದ ಬೇಸಾಯಕ್ಕೆ ಯಂತ್ರ ಶ್ರೀ ಬೆಂಗಾವಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.