ನಿಟ್ಟೆ 2ನೇ ವರ್ಷದ ಸಿನಿಮೋತ್ಸವ ಸಂಪನ್ನ; ಗಮನ ಸೆಳೆದ ವೈಚಾರಿಕ ಸಂವಾದ


Team Udayavani, Apr 21, 2018, 5:57 PM IST

Nitte2-600.jpg

ಮಂಗಳೂರು : ನಾಲ್ಕು ದಿನಗಳ ನಿಟ್ಟೆ ಅಂತಾರಾಷ್ಟೀಯ ಚಿತ್ರೋತ್ಸವದ ಎರಡನೇ ಆವೃತ್ತಿ ಎ.19ರಂದು ಸಂಪನ್ನಗೊಂಡಿತು. ಚಿತ್ರೋತ್ಸವ ತಾಣದಲ್ಲಿನ ಮೂರು ಬೆಳ್ಳಿ ಪರದೆಗಳಲ್ಲಿ ನಾಲ್ಕು ದಿನಗಳ ಕಾಲ ಸುಮಾರು 60 ಪ್ರಶಸ್ತಿ ವಿಜೇತ ಮತ್ತು ವಿಮರ್ಶಕರಿಂದ ಪ್ರಶಂಸಿಸಿತವಾದ ಚಿತ್ರಗಳು ಪ್ರದರ್ಶನಗೊಂಡವು. 

ಸುಮಾರು 30 ಚಿತ್ರ ನಿರ್ಮಾಪಕ, ನಿರ್ದೇಶಕರನ್ನು ಚಿತ್ರೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವೈಚಾರಿಕ ಸಂವಾದದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿತ್ತು. 

ಚಿತ್ರೋತ್ಸವದ ಮೂರನೇ ದಿನ ನಡೆದ ಸಂವಾದದಲ್ಲಿ  ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ವಿಮರ್ಶಕ ಮನು ಚಕ್ರವರ್ತಿ ಅವರು ಚಿತ್ರ ನಿರ್ದೇಶಕ ರಮೇಶ್‌ ಶರ್ಮಾ ಅವರೊಡನೆ ಮಾತುಕತೆ ನಡೆಸಿದರು. ಶರ್ಮಾ ಅವರ ಎರಡು ಚಿತ್ರಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಿದ್ದವು. ಅವೆಂದರೆ 2006ರ ಎಮೀ ನಾಮಾಂಕಿತ ಸಾಕ್ಷ್ಯ ಚಿತ್ರ “ದಿ ಜರ್ನಲಿಸ್ಟ್‌’ ಮತ್ತು “ದಿ ಜೆಹಾದ್‌’ ಮತ್ತು 1986ರಲ್ಲಿ ತೆರೆ ಕಂಡಿದ್ದ ಕಥಾ ಚಿತ್ರ ನ್ಯೂ ಡೆಲ್ಲಿ ಟೈಮ್ಸ್‌. 

ನ್ಯೂಡೆಲ್ಲಿ ಟೈಮ್ಸ್‌ ಚಿತ್ರ ನಿರ್ಮಾಣದ ಹಿಂದಿನ ರಾಜಕೀಯ ಮತ್ತು ಇತಿಹಾಸದ ಬಗ್ಗೆ ಒಂದಿಷ್ಟು ಹೇಳುವಂತೆ ಮನು ಅವರು ಶರ್ಮಾ ಅವರನ್ನು ಕೇಳಿಕೊಂಡರು. ಈ ಚಿತ್ರವನ್ನು ಅನುಸರಿಸಿ ಈಗಿನ ಸನ್ನಿವೇಶದಲ್ಲಿ ಇನ್ನೊಂದು ಚಿತ್ರವನ್ನು ನಿರ್ಮಿಸುವ ಮನಸ್ಸು ಮಾಡುವಿರಾ ಎಂದು ಮನು ಪ್ರಶ್ನಿಸಿದರು.

“ಇಂದಿನ ರಾಜಕೀಯ, ಸಾಮಾಜಿಕ ಸನ್ನಿವೇಶದಲ್ಲಿ ನಾನು ನ್ಯೂಡೆಲ್ಲಿ ಟೈಮ್ಸ್‌ನ ಮುಂದುವರಿದ ಭಾಗವಾಗಿ ಇನ್ನೊಂದು ಚಿತ್ರವನ್ನು ಮಾಡಲು ಬಯಸುವುದಿಲ್ಲ. ಮೇಲಾಗಿ ಇಂದು ಸಮಾಜದಲ್ಲಿ ಅಸಹಿಷ್ಣುತೆ ಹಿಂದೆಂದಿಗಿಂತಲೂ ಹೆಚ್ಚಿದೆ. ಸೆನ್ಸರ್‌ ಪ್ರತಿಕ್ರಿಯೆ ತುಂಬ ಜಟಿಲವಾಗಿದೆ. ಕಥಾ ಚಿತ್ರಗಳಿಗಿಂತ ಅದೇ ವಸ್ತು ಒಳಗೊಂಡ ಸಾಕ್ಷ್ಯ ಚಿತ್ರ ಮಾಡುವತ್ತ ನನ್ನ ಒಲವು ಹರಿದಿದೆ’ ಎಂದು ಶರ್ಮಾ ಉತ್ತರಿಸಿದರು. 

ಈ ಸಂವಾದದಲ್ಲಿ ಮಾಧ್ಯಮ, ರಾಜಕೀಯ ಮತ್ತು ಸಮಾಜದ ನಡುವಿನ ಕೊಂಡಿಯನ್ನು ಅರಸುವ ಪ್ರಯತ್ನ ಮಾಡಲಾಯಿತು. ಅಂತೆಯೇ ಮಾಧ್ಯಮ ಮಾಲಕತ್ವ ಮತ್ತು ತತ್‌ಪರಿಣಾಮವಾಗಿ ಪತ್ರಕರ್ತರು ರಾಜಿಗೆ ಒಳಪಡುವ, ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವ ಸವಾಲುಗಳನ್ನು ಎದುರಿಸಬೇಕಾಗಿರುವ ಸನ್ನಿವೇಶವನ್ನೂ ಚರ್ಚಿಸಲಾಯಿತು.

ನಾಲ್ಕನೇ ದಿನದ ಸಂವಾದವು ಸನಲ್‌ ಕುಮಾರ್‌ ಶಶಿಧರನ್‌ (ಎಸ್‌ ದುರ್ಗಾ, ಒಳಿವುಡಿವಸತೇ ಕಲಿ), ಸುನೀಲ್‌ ರಾಘವೇಂದ್ರ (ಪುಟ ತಿರುಗಿಸಿ ನೋಡಿ) ಮತ್ತು ಸಚಿನ್‌ ಕುಂಡಾಲ್ಕರ್‌ (ಗುಲಾಬ್‌ಜಾಮ್‌) ಅವರೊಳಗೆ ಚರ್ಚೆಯನ್ನು ಕಂಡಿತು. ವಿಭಿನ್ನ ರಾಜ್ಯಗಳಿಗೆ ಸೇರಿರುವ ಈ ಚಿತ್ರ ನಿರ್ದೇಶಕರು ವಿಭಿನ್ನ ಚಿತ್ರಗಳನ್ನು ಮಾಡಿದವರಾಗಿದ್ದು ಅಸ್ಮಿತೆಯ ರಾಜಕಾರಣ ಮತ್ತು ಪ್ರಾತಿನಿಧಿಕತೆಯ ಬಗ್ಗೆ ಸಂವಾದ ನಡೆಸಿದರು. 

ರಾಘವೇಂದ್ರ ಅವರು ಮಾತನಾಡಿ, “ನಾನು ಚಿತ್ರ ನಿರ್ಮಾಣದಲ್ಲಿ ಸಹಾಯಕನಾಗಿ ತೊಡಗಿಕೊಂಡಿದ್ದಾಗ ಸಿನೇಮಾ ಎನ್ನುವುದು ತಾರಾಗಣದ ಬುನಾದಿಯ ಮೇಲೆ ನಿರ್ಮಿಸಲಾಗುವ ಶಿಲ್ಪ ಎಂಬುದನ್ನು ಕಂಡುಕೊಂಡೆ. ಲೈಟಿಂಗ್‌ ಟೀಮ್‌ನವರಿಗೆ, ಸಹಾಯಕ ನಿರ್ದೇಶಕರಿಗೆ, ಮತ್ತು ನಿರ್ದೇಶಕರು ಹಾಗೂ ನಟರಿಗೆ ಪ್ರತ್ಯೇಕ ಬಗೆಯ ಊಟೋಪಚಾರ ಇರುವುದನ್ನು ಕೂಡ ಕಂಡುಕೊಂಡೆ’ ಎಂದು ಹೇಳಿದರು. 

ವಿವಾದಕ್ಕೆ ಗುರಿಯಾದ ಮತ್ತು ಸೆನ್ಸರ್‌ ಮಂಡಳಿಯಲ್ಲಿ ಸಿಲುಕಿಕೊಂಡು ಎಸ್‌ ದುರ್ಗಾ ಚಿತ್ರದ ನಿರ್ದೇಶಕ ಶಶಿಧರನ್‌ ಮಾತನಾಡಿ, “ಪ್ರಜಾಸತ್ತೆಯಲ್ಲಿ ಸಮಾನ ಅಧಿಕಾರಿಗಳ ವಿತರಣೆಗೆ ಅವಕಾಶವಿರುತ್ತದೆ. ಆದರೆ ನಮ್ಮ ಸಮಾಜದಲ್ಲಿಂದು ಪ್ರಜಾಸತ್ತೆ ಎನ್ನುವುದು ಕೇವಲ ಕಾಗದದ ಮೇಲೆ ಉಳಿದಿದೆ’ ಎಂದು ಹೇಳಿದರು. 

ಟಾಪ್ ನ್ಯೂಸ್

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

ಬಿಜೆಪಿ-ಜೆಡಿಎಸ್‌ ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

BJP-JDS ಮೈತ್ರಿ ಮುಂದುವರಿಯುತ್ತದಾ?: ತೇಜಸ್ವಿನಿ ಗೌಡ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

BCCI

T20 World Cup: ಇಂದು ಭಾರತ ತಂಡ ಪ್ರಕಟ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸಾವು

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

PM ಮೋದಿ ಸ್ಟೇಟ್ಸ್‌ ಮ್ಯಾನ್‌ ಅಲ್ಲ, ಸೇಲ್ಸ್‌ಮ್ಯಾನ್‌: ಬಿ.ಕೆ ಹರಿಪ್ರಸಾದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.