Udayavni Special

ಕೆ. ಮಂಜು ಮಗ ಈಗಪಡ್ಡೆ ಹುಲಿ; ಗುರು ದೇಶಪಾಂಡೆ ನಿರ್ದೇಶನ

Team Udayavani, Jan 18, 2018, 3:16 PM IST

Paddehuli—Shreyas-3.jpg

ನಿರ್ಮಾಪಕ ಕೆ. ಮಂಜು ತಮ್ಮ ಮಗ ಶ್ರೇಯಸ್‌ನನ್ನು ಹೀರೋ ಮಾಡುತ್ತಾರೆ, ಆ ಚಿತ್ರವನ್ನು ಇಮ್ರಾನ್‌ ಸರ್ದಾರಿಯಾ ನಿರ್ದೇಶಿಸುತ್ತಿದ್ದಾರೆ ಎಂಬಂತಹ ಸುದ್ದಿಗಳು ಕೇಳಿ ಬರುತ್ತಲೇ ಇದ್ದವು. ಈಗ ಅದು ಪಕ್ಕಾ ಆಗಿದೆ. ಶ್ರೇಯಸ್‌ ಹೀರೋ ಆಗಿ ಚಿತ್ರರಂಗಕ್ಕೆ ಬರಲು ತಯಾರಾಗಿದ್ದು, “ಪಡ್ಡೆ ಹುಲಿ’ ಎಂಬ ಚಿತ್ರದ ಮೂಲಕ ಹೀರೋ ಆಗುತ್ತಿದ್ದಾರೆ. ಗುರು ದೇಶಪಾಂಡೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಫೆಬ್ರವರಿ 9ರಂದು ಕೆ. ಮಂಜು ಹುಟ್ಟುಹಬ್ಬದ ಅಂಗವಾಗಿ ಪ್ರಾರಂಭವಾಗಲಿದೆ.

“ಪಡ್ಡೆ ಹುಲಿ’ ಚಿತ್ರವು ಇವತ್ತಿನ ಟ್ರೆಂಡ್‌ಗೆ ಇರುವ ಒಂದು ಕಾಲೇಜ್‌ ಲವ್‌ ಸ್ಟೋರಿ ಚಿತ್ರವಾಗಿರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರು ದೇಶಪಾಂಡೆ. “ಇಲ್ಲೊಂದು ಯೂಥ್‌ ಸ್ಟೋರಿ ಇರಲಿದ್ದು, ಈಗಿನ ಕಾಲದ “ಪ್ರೇಮ ಲೋಕ’ ಎನ್ನಬಹುದು. ಶ್ರೇಯಸ್‌ ಎದುರು ಹೊಸ ನಾಯಕಿಯನ್ನು ಪರಿಚಯಿಸುತ್ತಿದ್ದೇವೆ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದ್ದು, ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಅವರ ಸಂಗೀತ ಮತ್ತು ಕೆ.ಎಸ್‌. ಚಂದ್ರಶೇಖರ್‌ ಅವರ ಛಾಯಾಗ್ರಹಣ ಇರಲಿದೆ’ ಎನ್ನುತ್ತಾರೆ ಗುರು ದೇಶಪಾಂಡೆ.

ಇದಕ್ಕೂ ಮುನ್ನ ಶ್ರೇಯಸ್‌ ಮೊದಲ ಚಿತ್ರವನ್ನು ಇಮ್ರಾನ್‌ ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಅವರ ಚಿತ್ರದ ಬಜೆಟ್‌ ಹೆಚ್ಚಾಗಿರುವುದರಿಂದ ಆ ಚಿತ್ರವನ್ನು ಸದ್ಯಕ್ಕೆ ಪಕ್ಕಕ್ಕೆ ಇಡಲಾಗಿದೆ. “ಇಮ್ರಾನ್‌ ಚಿತ್ರದ ಬಜೆಟ್‌ ಸ್ವಲ್ಪ ಜಾಸ್ತಿಯಾಗಲಿದೆ. ಒಬ್ಬ ಹೊಸ ಹುಡುಗನ ಚಿತ್ರಕ್ಕೆ ಅಷ್ಟು ದೊಡ್ಡ ಬಜೆಟ್‌ ಕಷ್ಟ. ಈ ಮಧ್ಯೆ ಇನ್ನೂ ಒಂದೊಳ್ಳೆಯ ಕಥೆ ಸಿಕ್ಕಿದೆ. ಕಳೆದ ಐದಾರು ತಿಂಗಳಿಂದ ಕೂತು ವರ್ಕ್‌ ಮಾಡಿದ್ದೇವೆ’ ಎನ್ನುತ್ತಾರೆ ಮಂಜು.

ಇನ್ನು ಈ ಚಿತ್ರದ ನಿರ್ಮಾಪಕರು ಯಾರು ಎಂಬದು ಇನ್ನೂ ಪಕ್ಕಾ ಆಗಿಲ್ಲ. ಶ್ರೇಯಸ್‌ನನ್ನು ತಮ್ಮ ಬ್ಯಾನರ್‌ನ ಮೂಲಕ ಹೀರೋ ಮಾಡಬೇಕು ಎಂಬುದು ಮಂಜು ಆಸೆಯಾದರೂ, ಹೀರೋ ಮಾಡುವುದಕ್ಕೆ “ಕಾಲೇಜ್‌ ಕುಮಾರ’ ನಿರ್ಮಾಪಕ ಪದ್ಮನಾಭ ಗೌಡ ಹಾಗೂ “ಉಪ್ಪು ಹುಳಿ ಖಾರ’ ನಿರ್ಮಾಪಕ ರಮೇಶ್‌ ರೆಡ್ಡಿ ಸಹ ಮುಂದೆ ಬಂದಿದ್ದಾರಂತೆ. ಹಾಗಾಗಿ ಈ ಮೂವರಲ್ಲಿ ಒಬ್ಬರು ಚಿತ್ರವನ್ನು ನಿರ್ಮಿಸುವ ಸಾಧ್ಯತೆ ಇದೆ.

 “ಪದ್ಮನಾಭ್‌ ಮತ್ತು ರಮೇಶ್‌ ಇಬ್ಬರೂ ನನಗಿಂಥ ದೊಡ್ಡದಾಗಿ ಪರಿಚಯ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಚಿತ್ರಕ್ಕೆ ಹೊಸ ನಾಯಕಿಯ ಹುಡುಕಾಟ ನಡೆದಿದ್ದು, ಚಿತ್ರೀಕರಣವು ಬೆಂಗಳೂರು, ಚಿತ್ರದುರ್ಗ ಮುಂತಾದ ಕಡೆ ನಡೆಯಲಿದೆ.

ಟಾಪ್ ನ್ಯೂಸ್

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಅಲೆಕ್ಸಾ ಬಾಯ್‌ ಫ್ರೆಂಡ್‌ ಝಿಗಿ : ಅಲೆಕ್ಸಾ ಮತ್ತು ಝಿಗಿ ನಡುವೆ ಆಯ್ಕೆ ಹೇಗೆ?

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷ

ಸವಾಲಿನ ಮಧ್ಯೆಯೂ ಮುಗಿದ ಯಶಸ್ವಿ 2ನೇ ವರ್ಷಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೊಸಬೆಳಕು ಮೂಡುತಿದೆ.. ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌

ಹೊಸಬೆಳಕು ಮೂಡುತಿದೆ.. ಸ್ಟಾರ್‌ ಸಿನಿಮಾಗಳ ರಿಲೀಸ್‌ ಡೇಟ್‌ ಅನೌನ್ಸ್‌

erwwew

‘ಝೂ: ಕೇರ್ ಆಫ್ ‘ಡಿ’ ಬಾಸ್’ : ಇದು ದರ್ಶನ್ ಅಭಿಮಾನಿಯ ಅಭಿಮಾನದ ಕಥೆ

tdrgdfr

ಮತ್ತೊಮ್ಮೆ ತ್ರಿಮೂರ್ತಿಗಳ ಸಮಾಗಮ..ಜೋರಾಗಿದೆ ಹೊಸ ಸಿನಿಮಾ ಸಿದ್ಧತೆ  

fgertr

‘ನಮ್ ಮಾಣಿ ಮದ್ವೆ ಪ್ರಸಂಗ’ ಹೇಳಲು’ ಬರುತ್ತಿದ್ದಾರೆ ಬಾಲಿವುಡ್ ನಟಿ ಲೋಪಮುದ್ರ

dfdsf

ತಮಿಳುನಾಡಿನ ಶನಿದೇವರ ದರ್ಶನ ಪಡೆದ ನಟ ದರ್ಶನ್  

MUST WATCH

udayavani youtube

ಹೀಗೆ ಮಾಡಿದರೆ ಪರಿಸರಕ್ಕೆ ಅನುಕೂಲ, DIAPER ತ್ಯಾಜ್ಯ !

udayavani youtube

ಕಾರು ಅಪಘಾತ: ಬಿಗ್ ಬಾಸ್ ಮಾಜಿ ಸ್ಪರ್ಧಿ ಯಶಿಕಾ ಗಂಭೀರ ಗಾಯ

udayavani youtube

ವಿಶ್ವ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಬಂಗಾರ ಗೆದ್ದ ಭಾರತದ ಪ್ರಿಯಾ ಮಲಿಕ್

udayavani youtube

ಒಂದೇ ದಿನದಲ್ಲಿ ತುಂಗಭದ್ರಾ ಜಲಾಶಯಕ್ಕೆ ಬಂತು 12 ಟಿಎಂಸಿ ನೀರು

udayavani youtube

ಮೂಳೂರು: ಮೂರು ಮನೆಗಳಲ್ಲಿ ದರೋಡೆ : ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳವು

ಹೊಸ ಸೇರ್ಪಡೆ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಕಾದು ನೋಡೋಣ : ವರಿಷ್ಠರ ಮೇಲೆ ಭಾರ ಹಾಕಿರುವ ಸಿಎಂ ಬಿಎಸ್‌ವೈ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಆ.1ರಿಂದ ಎನ್‌ಎಸಿಎಚ್‌ ವಾರದ ಎಲ್ಲ ದಿನ ಕಾರ್ಯಾಚರಣೆ

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಸಮರ ವೀರರ ಸ್ಮರಣೆಯಲ್ಲಿ… : ಇಂದು “ಕಾರ್ಗಿಲ್‌ ವಿಜಯ ದಿವಸ’

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

ಭಾರತಕ್ಕೆ ನಾಳೆ ಅಮೆರಿಕದ ವಿದೇಶಾಂಗ ಸಚಿವ ಆ್ಯಂಟನಿ ಬ್ಲಿಂಕೆನ್‌ ಆಗಮನ

kavita

ಮತಕ್ಕಾಗಿ ಲಂಚ: ಟಿಆರ್‌ಎಸ್‌ ಸಂಸದೆಗೆ 6 ತಿಂಗಳು ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.