“ಲಂಬೋದರ’ನಿಗೆ ಸಾಥ್ ಕೊಟ್ಟ ಪವರ್ ಸ್ಟಾರ್: Watch
Team Udayavani, Nov 16, 2018, 4:05 PM IST
ಲೂಸ್ ಮಾದ ಯೋಗಿ ಅಭಿನಯದ ವಿಶ್ವೇಶ್ವರ್. ಪಿ ಹಾಗೂ ರಾಘವೇಂದ್ರ ಭಟ್ ಅವರು ನಿರ್ಮಿಸುತ್ತಿರುವ “ಲಂಬೋದರ’ ಚಿತ್ರದ ಮೊದಲ ಲಿರಿಕಲ್ ವಿಡಿಯೋ ಹಾಡನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.
“ಲಂಬೋದರ ಲೂಸಾದ’ ಲಿರಿಕಲ್ ಸಾಂಗನ್ನು ಆನಂದ್ ಆಡಿಯೋ ಧ್ವನಿಸುರುಳಿ ಸಂಸ್ಥೆಯು ತನ್ನ ಯೂಟ್ಯೂಬ್ ಚಾನಲ್ನಿಂದ ಬಿಡುಗಡೆ ಮಾಡಿದೆ. ಈ ಹಾಡನ್ನು ಸಂಜಿತ್ ಹೆಗ್ಡೆ ಹಾಡಿದ್ದು, ಕಾರ್ತಿಕ ಶರ್ಮಾ ಸಂಗೀತ ನೀಡಿದ್ದಾರೆ. ಸದ್ಯ ಈ ಗೀತೆಯು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ಹಾಸ್ಯಪ್ರಧಾನ ಚಿತ್ರದಲ್ಲಿ ಯೋಗಿ ಅವರು ಶಾಲಾ ವಿದ್ಯಾರ್ಥಿ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ.
“ಲಂಬೋದರ’ ಶೀರ್ಷಿಕೆಗೆ ಬಸವನಗುಡಿ ಬೆಂಗಳೂರು ಎಂಬ ಅಡಿಬರಹವೂ ಇದೆ. ಹೀಗಾಗಿ ಇದು ಪಕ್ಕಾ ಬೆಂಗಳೂರಿನ ಬಸವನಗುಡಿ ಸುತ್ತಮುತ್ತಲಿನ ಕಥೆ ಎಂಬುದು ಸ್ಪಷ್ಟ. ವೃಷಾಂಕ್ ಮೂವೀ ಮೇಕರ್ಸ್ ಬ್ಯಾನರ್ನಲ್ಲಿ ಚಿತ್ರವನ್ನು ತಯಾರಾಗುತ್ತಿದ್ದು, ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣವಿದೆ. ಹರೀಶ್ ಗಿರಿಗೌಡ ಸಂಕಲನ ಮಾಡಿದ್ದಾರೆ.
ಯೋಗರಾಜ್ ಭಟ್ ಹಾಗೂ ಜಯಂತ ಕಾಯ್ಕಿಣಿ ಗೀತೆಗಳನ್ನು ರಚಿಸಿದ್ದು, ವಿಕ್ರಂ ಮೋರ್ ಸಾಹಸ ನಿರ್ದೇಶನವಿದೆ, ಯೋಗಿಗೆ ಆಕಾಂಕ್ಷ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಧರ್ಮಣ್ಣ, ಅಚ್ಯುತಕುಮಾರ್, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಸಿದ್ದು ಮೂಲಿಮನಿ ಮುಂತಾದವರು ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ