ಒಂದು ಮುತ್ತಿನ ಕಥೆಗೆ ಪ್ರೇಮ್‌ ಸಾಥ್‌

ಒಲವೇ ಮಂದಾರ 2 ಫ‌ಸ್ಟ್‌ಲುಕ್‌ ರಿಲೀಸ್‌

Team Udayavani, Jan 16, 2020, 7:02 AM IST

ಶ್ರೀಕಿ ಅಭಿನಯದ “ಒಲವೇ ಮಂದಾರ’ ಯಶಸ್ವಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಒಂದು ಅಪರೂಪದ ಪ್ರೀತಿಯ ಕಥಾಹಂದರ ಹೊಂದಿದ್ದ ಸಿನಿಮಾದಲ್ಲಿ ಪ್ರೀತಿಯೇ ಹೈಲೈಟ್‌ ಆಗಿತ್ತು. ಅದೇ ಹೆಸರಿನಲ್ಲಿ “ಒಲವೇ ಮಂದಾರ 2′ ಚಿತ್ರ ಸೆಟ್ಟೇರಿದ್ದ ಬಗ್ಗೆಯೂ ಎಲ್ಲರಿಗೂ ಗೊತ್ತು. ಈಗ ಈ ಚಿತ್ರದ ಹೊಸ ಸುದ್ದಿಯೆಂದರೆ, ಸಂಕ್ರಾಂತಿ ಹಬ್ಬದಂದು ಚಿತ್ರದ ಫ‌ಸ್ಟ್‌ಲುಕ್‌ ಪೋಸ್ಟರ್‌ ರಿಲೀಸ್‌ ಆಗಿದೆ. ನಟ “ನೆನಪಿರಲಿ’ ಪ್ರೇಮ್‌ ಫ‌ಸ್ಟ್‌ಲುಕ್‌ ಟೈಟಲ್‌ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ಹಾಗಂತ, “ಒಲವೇ ಮಂದಾರ’ ಚಿತ್ರಕ್ಕೂ “ಒಲವೇ ಮಂದಾರ 2′ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಕಥೆಗೆ ಪೂರಕವಾಗಿದೆ ಎಂಬ ಕಾರಣಕ್ಕೆ ಹೆಸರಿಡಲಾಗಿದೆ. ಚಿತ್ರವನ್ನು, ಎಸ್‌.ಆರ್‌.ಪಾಟೀಲ್‌ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ “ಇದೀಗ ಬಂದ ಸುದ್ದಿ’ ಚಿತ್ರ ನಿರ್ದೇಶಿಸಿದ್ದ ಪಾಟೀಲ್‌ಗೆ ಇದು ಎರಡನೇ ಸಿನಿಮಾ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಅವರದೇ. ಚಿತ್ರವನ್ನು ರಮೇಶ್‌ ಮರಗೋಳ, ಚೇತನ್‌ ರಾಜ್‌, ಟಿ.ಎಂ.ಸತೀಶ್‌ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಸನತ್‌ ಹೀರೋ ಆಗಿ ಕಾಣಿಸಿಕೊಂಡರೆ, ಪ್ರಜ್ಞಾ ಭಟ್‌ ನಾಯಕಿಯಾಗಿ ನಟಿಸಿದ್ದಾರೆ.

ಅನೂಪ್‌ ಸತೀಶ್‌, ಭವ್ಯಾ ಸೇರಿದಂತೆ ಇತರೆ ಹಿರಿಯ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಕಿರಣ್‌ ತೋಟಂಬೈಲ್‌ ಸಂಗೀತವಿದ್ದು, ಐದು ಹಾಡುಗಳಿವೆ. ಈಗಾಗಲೇ ಶೇ.50 ರಷ್ಟು ಚಿತ್ರೀಕರಣಗೊಂಡಿದ್ದು, ಕನಕಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಎರಡನೇ ಹಂತದಲ್ಲಿ ಗುಲ್ಬರ್ಗ ಇತರೆಡೆ ಚಿತ್ರೀಕರಿಸುವ ಯೋಚನೆ ಚಿತ್ರತಂಡಕ್ಕಿದೆ. ತನ್ವೀಕ್‌ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಮಧು ಸಂಕಲನವಿದೆ. ಚಿತ್ರದ ಶೀರ್ಷಿಕೆಗೆ “ಒಂದು ಮುತ್ತಿನ ಕಥೆ’ ಎಂಬ ಅಡಿಬರಹವಿದೆ. ಹಾಗಾಗಿ, ಇದೂ ಕೂಡ ಪಕ್ಕಾ ಪ್ರೀತಿಯ ಕಥಾಹಂದರ ಹೊಂದಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ