ಹೀರೋಗೆ ಪೈರಸಿ ಕಾಟ: ರಿಷಭ್‌ ಶೆಟ್ಟಿ ಆಕ್ರೋಶ!

Team Udayavani, Mar 9, 2021, 11:25 AM IST

rishabh-shetty

ಕಳೆದ ವಾರ ರಿಷಭ್‌ ಶೆಟ್ಟಿ ನಾಯಕನಾಗಿ ನಟಿಸಿ, ನಿರ್ಮಿಸಿರುವ “ಹೀರೋ’ ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. “ಹೀರೋ’ ಚಿತ್ರಕ್ಕೆ ಎಲ್ಲ ಕಡೆಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನುವಾಗಲೇ, ಚಿತ್ರ ಪೈರಸಿ ಕಾಪಿಗಳು ಹರಿದಾಡುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ತಲೆ ನೋವು ತರಿಸಿದೆ.

ಈ ಬಗ್ಗೆ ಮಾತನಾಡಿರುವ ನಾಯಕ ನಟ ಕಂ ನಿರ್ಮಾಪಕ ರಿಷಭ್‌ ಶೆಟ್ಟಿ, “ಕೊರೊನಾ ಸಮಯದಲ್ಲಿ ಎಲ್ಲರೂ ಹೊರಗೆ ಬರೋದಕ್ಕೆ ಹೆದರುತ್ತಿದ್ದಾಗಲೇ, ಜನರನ್ನು ಮನರಂಜಿಸಬೇಕು ಅನ್ನೋ ಕಾರಣಕ್ಕೆ ಸಾಕಷ್ಟು ರಿಸ್ಕ್ ತೆಗೆದುಕೊಂಡು, ಅತಿ ಕಡಿಮೆ ಅವಧಿಯಲ್ಲಿ, ಕೇವಲ 24 ಜನ ಸೇರಿಕೊಂಡು ಈ ಸಿನಿಮಾ ಮಾಡಿದ್ದೇವೆ. ಸಿನಿಮಾ ರಿಲೀಸ್‌ ಆದ ಬಳಿಕ ಎಲ್ಲ ಕಡೆಗಳಿಂದಲೂ ಒಳ್ಳೆಯ ರೆಸ್ಪಾನ್ಸ್‌ ಸಿಗ್ತಿದೆ. ಇದು ಖುಷಿಯ ವಿಷಯವಾದ್ರೂ, ಸಿನಿಮಾ ರಿಲೀಸ್‌ ಆದ ಮೂರೇ ದಿನದಲ್ಲಿ ಪೈರಸಿ ಕಾಪಿಗಳು ಸೋಶಿಯಲ್‌ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಇದು ನಿಜಕ್ಕೂ ನಮಗೆ ಬೇಸರ ತಂದಿದೆ’ ಎನ್ನುತ್ತಾರೆ.

“ಸಿನಿಮಾ ಥಿಯೇಟರ್‌ನಲ್ಲಿ ಇನ್ನೂ ಓಡುತ್ತಿರುವಾಗಲೇ ಪೈರಸಿ ಕಾಪಿಗಳು ಹೊರಬಂದಿವೆ. ಪೈರಸಿ ಕಾಪಿಗಳು ಎಷ್ಟು ಹರಿದಾಡುತ್ತಿವೆಯೆಂದರೆ, ನಾವು ಕಳೆದ ಎರಡು – ಮೂರು ದಿನಗಳಿಂದ ಕೂತು ಲಿಂಕ್‌ಗಳನ್ನು ಹುಡುಕಿ ಡಿಲೀಟ್‌ ಮಾಡಿದಷ್ಟು, ಹರಿದಾಡುತ್ತಿವೆ. ಥಿಯೇಟರ್‌ ಒಳಗೆ ಕ್ಯಾಮೆರಾ ತೆಗೆದುಕೊಂಡು ಹೋಗಿ ಇಡೀ ಸಿನಿಮಾ ಶೂಟ್‌ ಮಾಡಿಕೊಂಡು ಬರುತ್ತಾರೆ ಅಂದ್ರೆ, ಅದರಲ್ಲಿ ಥಿಯೇಟರ್‌ನವರ ಜವಾಬ್ದಾರಿಯೂ ಇದೆ. ಥಿಯೇಟರ್‌ ಒಳಗೆ ಕ್ಯಾಮೆರಾ, ಮೊಬೈಲ್‌ಳನ್ನು ಹೇಗೆ ಅಲೋ ಮಾಡುತ್ತಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎನ್ನುತ್ತಾರೆ ರಿಷಭ್‌ ಶೆಟ್ಟಿ.

“ಯಾರಿಗಾದರೂ, ಸೋಶಿಯಲ್‌ ಮೀಡಿಯಾದಲ್ಲಿ ಅಥವಾ ಬೇರೆ ಎಲ್ಲಾದರೂ, “ಹೀರೋ’ ಸಿನಿಮಾದ ಪೈರಸಿ ಕಾಪಿ ಅಥವಾ ಲಿಂಕ್‌ ಸಿಕ್ಕರೆ ಮನಗೆ ಕಳುಹಿಸಿ. ನಾವು ಅದನ್ನು ತೆಗೆಸುವ ಕೆಲಸ ಮಾಡುತ್ತೇವೆ’ ಎಂದಿರುವ ರಿಷಭ್‌ ಶೆಟ್ಟಿ, “ಆದಷ್ಟು ಪೈರಸಿ ಕಾಪಿ ನೋಡುವ ಬದಲು ಥಿಯೇಟರ್‌ಗೆ ಬಂದು ಸಿನಿಮಾ ನೋಡಿ. ನಮ್ಮ ಪರಿಶ್ರಮಕ್ಕೆ ಆಗ ಬೆಲೆ ಸಿಕ್ಕಂತಾಗುತ್ತದೆ’ ಎಂದು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಕಾರು ತಡೆದಿದ್ದಕ್ಕೆ ಸಸ್ಪೆಂಡ್‌ಗೆ ಪಟ್ಟು!

ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ಬನ್ನಿ, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ ; ಟಿವಿ, ಫ್ರಿಡ್ಜ್ ಗೆಲ್ಲಿ!

ಬನ್ನಿ, ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಿ ; ಟಿವಿ, ಫ್ರಿಡ್ಜ್ ಗೆಲ್ಲಿ!

ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್‌ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ

ಭೂ ಪರಿವರ್ತನೆ ಮಾಡಿಕೊಡಲು ಲಂಚ ಸ್ವೀಕಾರ : ಸರ್ವೇಯರ್‌ಗೆ 2 ವರ್ಷ ಸಜೆ ವಿಧಿಸಿದ ನ್ಯಾಯಾಲಯ

ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿ

ಆನೆಗಳ ಹಾವಳಿ ತಪ್ಪಿಸಲು ಅಧಿಕಾರಿಗಳಿಗೆ ಸೂಚನೆ : ಸಚಿವ ಉಮೇಶ್ ಕತ್ತಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shivaram

ಹಿರಿಯ ಚಿತ್ರ ನಟ ಶಿವರಾಂ ಅರೋಗ್ಯ ಸ್ಥಿತಿ ಗಂಭೀರ ; ಐಸಿಯುನಲ್ಲಿ ಚಿಕಿತ್ಸೆ

Online

ಟೆಕ್ಕಿಗಳ ಪ್ರಯತ್ನಕ್ಕೆ ಆನ್‌ಲೈನ್‌ ಸಪೋರ್ಟ್‌

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

ಘೀಳಿಡಲು ರೆಡಿಯಾದ ಮದಗಜ; 900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆ

ಸಾವು-ಬದುಕಿನ “ಅಘೋರ” ದರ್ಶನ

ಸಾವು-ಬದುಕಿನ “ಅಘೋರ” ದರ್ಶನ

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್‌ ಸಿಂಗ್‌ ಅಮಾನತು

ಕಾರು ತಡೆದಿದ್ದಕ್ಕೆ ಸಸ್ಪೆಂಡ್‌ಗೆ ಪಟ್ಟು!

ತನ್ನ ಕಾರು ತಡೆದರೆಂದು ಪೊಲೀಸರಿಗೆ ಅಮಾನತು ಬೆದರಿಕೆ ಹಾಕಿದ ಬಿಹಾರ ಸಚಿವ !

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಅತ್ಯಾಚಾರ ಆರೋಪಿ ಖುಲಾಸೆ: ಜೈಲಿಂದ ಬಿಡುಗಡೆ ಮಾಡಲು ಆದೇಶ

ಚುನಾವಣೆ ಗೆಲ್ಲಲ್ಲು ಮೂರು ಪಕ್ಷಗಳಿಂದ ವಾಮಮಾರ್ಗ: ವಾಟಾಳ್ ನಾಗರಾಜ್

ಚುನಾವಣೆ ಗೆಲ್ಲಲ್ಲು ಮೂರು ಪಕ್ಷಗಳಿಂದ ವಾಮಮಾರ್ಗ: ವಾಟಾಳ್ ನಾಗರಾಜ್

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

ವಿಜಯಪುರ-ಮಂಗಳೂರು ರೈಲು ಪುನಾರಂಭ : ರೈಲು ಪ್ರಿಯರಲ್ಲಿ ಸಂತಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.