ಕಡಲೆಕಾಯಿ ಪರಿಷೆಯಲ್ಲಿ “ಸಲಗ’ ಕ್ಲೈಮ್ಯಾಕ್ಸ್‌

ಸಾವಿರಾರು ಜನರ ಮಧ್ಯೆ ಚಿತ್ರೀಕರಣ

Team Udayavani, Dec 8, 2019, 6:03 AM IST

ಸಿನಿಮಾದವರು ನೈಜತೆ ಬಯಸೋದು ಜಾಸ್ತಿ. ಆದರೆ, ನೈಜತೆಯಲ್ಲಿ ಚಿತ್ರೀಕರಣ ಮಾಡೋದು ಮಾತ್ರ ಕಷ್ಟದ ಕೆಲಸ. ಅದರಲ್ಲೂ ಜಾತ್ರೆ, ಸಮಾರಂಭಗಳ ನಡುವೆ ಚಿತ್ರೀಕರಣ ಮಾಡೋದೆಂದರೆ ಅದು ಸುಲಭದ ಕೆಲಸವಲ್ಲ. ಅದರಲ್ಲೂ ಸ್ಟಾರ್‌ ನಟರನ್ನು ಇಟ್ಟುಕೊಂಡು ಔಟ್‌ಡೋರ್‌ನಲ್ಲಿ ಚಿತ್ರೀಕರಣ ರಿಸ್ಕ್ನ ಕೆಲಸ. ಆದರೆ, “ಸಲಗ’ ಚಿತ್ರತಂಡ ಮಾತ್ರ ಆ ತರಹದ ಒಂದು ಸವಾಲನ್ನು ಯಶಸ್ವಿಯಾಗಿ ಜಯಿಸಿದೆ.

ಹೌದು, “ದುನಿಯಾ’ ವಿಜಯ್‌ ನಿರ್ದೇಶನದ “ಸಲಗ’ ಚಿತ್ರದ ಕ್ಲೈಮ್ಯಾಕ್ಸ್‌ ಚಿತ್ರೀಕರಣ ಇತ್ತೀಚೆಗೆ ಬಸವನಗುಡಿಯ ಕಡಲೆಕಾಯಿ ಪರಿಷೆಯಲ್ಲಿ ನಡೆದಿದೆ. 50 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದ ಪರಿಷೆಯಲ್ಲಿ ದುನಿಯಾ ವಿಜಯ್‌ ಹಾಗೂ ತಂಡ “ಸಲಗ’ದ ಕ್ಲೈಮ್ಯಾಕ್ಸ್‌ನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದೆ. ಪರಿಷೆ ಮುಗಿದರೂ ಮತ್ತೇ ಮೂರು ದಿನಗಳ ಕಾಲ ಆ ವಾತಾವರಣವನ್ನು ರೀಕ್ರಿಯೇಟ್‌ ಮಾಡಿ, ಚಿತ್ರೀಕರಣ ಮಾಡಲಿದೆ ಚಿತ್ರತಂಡ. ಈ ಮೂಲಕ “ಸಲಗ’ ಕ್ಲೈಮ್ಯಾಕ್ಸ್‌ಗೆ ನೈಜತೆಯ ಸ್ಪರ್ಶ ನೀಡಿದೆ.

ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಫೈಟ್‌ ಹಾಗೂ ಹಾಡುಗಳ ಚಿತ್ರೀಕರಣ ಬಾಕಿ ಇದೆ. ಚಿತ್ರದ ಫೈಟ್‌ವೊಂದನ್ನು ಕಲಾಸಿಪಾಳ್ಯದಲ್ಲಿ ಚಿತ್ರೀಕರಿಸುವ ಯೋಜನೆಯೂ ಚಿತ್ರತಂಡಕ್ಕಿದೆ. ಚಿತ್ರದ ಇಂಟ್ರೋಡಕ್ಷನ್‌ ಹಾಡು ಬಾಕಿ ಇದ್ದು, ಅದನ್ನೂ ಅದ್ಧೂರಿಯಾಗಿ ಚಿತ್ರೀಕರಿಸಲು ಮುಂದಾಗಿದೆ. ಕೆ.ಪಿ.ಶ್ರೀಕಾಂತ್‌ ನಿರ್ಮಾಣದ ಈ ಚಿತ್ರವನ್ನು “ದುನಿಯಾ’ ವಿಜಯ್‌ ನಿರ್ದೇಶಿಸುತ್ತಿದ್ದಾರೆ. ಇದು ಅವರ ನಿರ್ದೇಶನದ ಚೊಚ್ಚಲ ಚಿತ್ರ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಶಿಕ್ಷಣದಲ್ಲಿ ಇಂದು ಹಲವಾರು ಹೊಸತನಗಳು ಬಂದಿವೆ. ಕಲಿಯುವ, ಕಲಿಸುವ ಜವಾಬ್ದಾರಿಗಳು ಹೆಚ್ಚುತ್ತಾ ಹೋಗುತ್ತವೆ. ಕೆಲವೊಂದು ಕಡೆ ಶಿಕ್ಷಣ ಪದ್ಧತಿಗಳು ವಿದ್ಯಾರ್ಥಿಗಳಿಗೆ...

  • ಮಾನಸಿಕವಾಗಿ ಕುಗ್ಗಿರುವ ಹೆಣ್ಣುಮಕ್ಕಳನ್ನು ಖೆಡ್ಡಾಗೆ ಬೀಳಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುತ್ತಿರುವ ತೋಳಗಳೇನೂ ಕಡಿಮೆ ಇಲ್ಲ. ತಾನೊಬ್ಬ...

  • ಸಿಟಿಗಳಲ್ಲಿರುವ ಹುಡುಗೀರು, ಈಗಷ್ಟೇ ಮೂವತ್ತಾಯ್ತು. ಎರಡು ವರ್ಷ ಬಿಟ್ಟು ಮದುವೆ ಆದರಾಯ್ತು. ಈಗ್ಲೆ ಏನವಸರ ಅನ್ನುತ್ತಾರೆ. ಆದರೆ, ಹಳ್ಳಿಯಲ್ಲಿರುವ ಹೆಣ್ಣುಮಕ್ಕಳಿಗೆ,...

  • ತೂಕ ಇಳಿಸಲೇಬೇಕು ಅಂತಾದಾಗ, ಅವರಿವರು ಮಾತನಾಡುವ "ಸ್ಲಿಮ್‌ ಸೂತ್ರ'ಗಳನ್ನು ಕಿವಿಗೊಟ್ಟು ಕೇಳ್ಳೋಕೆ ಆರಂಭಿಸಿದೆ. ಒಬ್ಬಳು ಜಿಮ್‌ಗೆ ಹೋಗು ಅಂದ್ರೆ, ಇನ್ನೊಬ್ಬಳು...

  • ಅದು ಮಳೆಗಾಲದ ಒಂದು ದಿನ ಸಂಜೆ. ಯಾವುದೋ ಕೆಲಸ ನಿಮಿತ್ತ ಸಿಲ್ಕ್ಬೋರ್ಡ್‌ ದಾಟಿ ಆಚೆ ಹೋಗಿದ್ದೆ. ಸಿಲ್ಕ್ಬೋರ್ಡ್‌ಗೆ ಪರ್ಯಾಯ ಪದ ಟ್ರಾಫಿಕ್‌ ಅಂತ, ಬೆಂಗಳೂರಿನವರಿಗಷ್ಟೇ...