ಕನ್ನಡಕ ಮೂಲಕ ಸಲ್ಲು ಸಹೋದರ ಅರ್ಬಾಜ್ ಎಂಟ್ರಿ
Team Udayavani, Feb 4, 2019, 5:47 AM IST
ನಟ ಗಣೇಶ್ ಅವರ “99′ ಚಿತ್ರದ ಫಸ್ಟ್ಲುಕ್ ಮೊನ್ನೆಯಷ್ಟೇ ಬಿಡುಗಡೆಯಾಗಿದೆ. ಭಿನ್ನ ಗೆಟಪ್ನಲ್ಲಿ ಕಾಣಿಸಿಕೊಂಡಿರುವ ಈ ಲುಕ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿರುವಾಗಲೇ ಗಣೇಶ್ ಅವರ ಸಿನಿಮಾ ಕುರಿತು ಮತ್ತೂಂದು ಸುದ್ದಿ ಹೊರಬಿದ್ದಿದೆ. ಅದು ಹೊಸ ಸಿನಿಮಾ ಕುರಿತಾಗಿ. “ವೇರ್ ಇಸ್ ಮೈ ಕನ್ನಡಕ’ ಎಂಬ ಸಿನಿಮಾದಲ್ಲಿ ಗಣೇಶ್ ನಟಿಸಲಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದರೂ ಅದರ ಮುಹೂರ್ತ, ಚಿತ್ರೀಕರಣ ಕುರಿತಂತೆ ಯಾವುದೂ ಪಕ್ಕಾ ಆಗಿರಲಿಲ್ಲ.
ಈಗ ಬಹುತೇಕ ಎಲ್ಲವೂ ಅಂತಿಮವಾಗಿದೆ. ಫೆ.07ರಂದು ಚಿತ್ರದ ಮುಹೂರ್ತ ನಡೆಯಲಿದೆ. ಹಾಗಂತ ಫೆಬ್ರವರಿಯಿಂದಲೇ ಚಿತ್ರೀಕರಣ ಆರಂಭವಾಗುತ್ತದೆ ಎಂದು ನೀವಂದುಕೊಳ್ಳುವಂತಿಲ್ಲ. ಚಿತ್ರೀಕರಣ ಏಪ್ರಿಲ್ನಿಂದ ಆರಂಭವಾಗಲಿದ್ದು, ಸುಮಾರು 35 ದಿನಗಳ ಕಾಲ ಲಂಡನ್ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ರಾಜ್ ಮತ್ತು ದಾಮಿನಿ “ವೇರ್ ಇಸ್ ಮೈ ಕನ್ನಡಕ’ ಚಿತ್ರವನ್ನು ಮಾಡುತ್ತಿದ್ದು, ಚಿತ್ರದ ಕಥೆ ವಿಭಿನ್ನವಾದ್ದರಿಂದ ಗಣೇಶ್ ಖುಷಿಯಿಂದ ಒಪ್ಪಿಕೊಂಡಿದ್ದಾರೆ.
ಈ ಚಿತ್ರದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಪತ್ರಲೇಖಾ ಪೌಲ್ ನಟಿಸುತ್ತಿದ್ದಾರೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಬಾಲಿವುಡ್ ನಟ ಅರ್ಬಾಜ್ ಖಾನ್ ಈ ಚಿತ್ರದ ಮೂಲಕ ಕನ್ನಡಕ್ಕೆ ಬರುತ್ತಿದ್ದಾರೆ. ಈ ಹಿಂದೆ ಅನೇಕ ಬಾರಿ ಅರ್ಬಾಜ್ ಕನ್ನಡದಲ್ಲಿ ನಟಿಸುತ್ತಾರೆಂಬ ಸುದ್ದಿ ಓಡಾಡುತ್ತಲೇ ಇತ್ತು. ಆದರೆ ಯಾವುದೂ ಅಂತಿಮವಾಗಿರಲಿಲ್ಲ. ಈಗ “ವೇರ್ ಇಸ್ ಮೈ ಕನ್ನಡಕ’ ಮೂಲಕ ಕನ್ನಡಕ್ಕೆ ಬರುವುದು ಪಕ್ಕಾ ಆಗಿದೆ.
ಕಥೆ ಹಾಗೂ ಪಾತ್ರ ಇಷ್ಟವಾಗಿ ಅರ್ಬಾಜ್ ಒಪ್ಪಿಕೊಂಡಿದ್ದಾರೆ. ಅಂದಹಾಗೆ, ಇದೊಂದು ಆ್ಯಕ್ಷನ್, ಕಾಮಿಡಿ ಡ್ರಾಮಾ ಆಗಿದ್ದು, ರೆಗ್ಯುಲರ್ ಪ್ಯಾಟರ್ನ್ ಹೊರತಾಗಿ ಈ ಸಿನಿಮಾ ಮಾಡುತ್ತಿದ್ದಾರೆನ್ನಲಾಗಿದೆ. ಸದ್ಯ ಗಣೇಶ್ “ಗಿಮಿಕ್’ ಚಿತ್ರದ ಚಿತ್ರೀಕರಣ ಮುಗಿಸಿದ್ದು, “ಗೀತಾ’ ಹಾಗೂ “99′ ಚಿತ್ರೀಕರಣದಲ್ಲಿ ಬಿಝಿಯಾಗಿದ್ದಾರೆ. ಇನ್ನು, “ವೇರ್ ಇಸ್ ಮೈ ಕನ್ನಡಕ’ ಚಿತ್ರವನ್ನು ಕೂಡಾ ನವೆಂಬರ್ನಲ್ಲಿ ಬಿಡುಗಡೆ ಮಾಡುವ ಉದ್ದೇಶ ಚಿತ್ರತಂಡಕ್ಕಿದೆ. ಹಾಗಾಗಿ, ಈ ವರ್ಷ ಗಣೇಶ್ ಅವರ ನಾಲ್ಕು ಸಿನಿಮಾಗಳು ತೆರೆಕಂಡರೂ ಅಚ್ಚರಿಯಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…