ಸೆಂಟಿಮೆಂಟ್‌ “ದೇವಕಿ’

ಪ್ರಿಯಾಂಕಾ ಉಪೇಂದ್ರ ಚಿತ್ರ ತೆರೆಗೆ ಸಿದ್ಧ

Team Udayavani, May 12, 2019, 3:00 AM IST

devaki

ಪ್ರಿಯಾಂಕ ಉಪೇಂದ್ರ “ಹೌರಾ ಬ್ರಿಡ್ಜ್’ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಗೊತ್ತಿತ್ತು. ನಂತರದ ದಿನಗಳಲ್ಲಿ ಆ ಚಿತ್ರದ ಹೆಸರನ್ನು ಬದಲಿಸಿ, “ದೇವಕಿ’ ಎಂದು ನಾಮಕರಣ ಮಾಡಿದ್ದೂ ಗೊತ್ತು. ಈಗ ಹೊಸ ಸುದ್ದಿಯೆಂದರೆ, ಚಿತ್ರದ ಚಿತ್ರೀಕರಣ ಮುಗಿಸಿರುವ ನಿರ್ದೇಶಕ ಲೋಹಿತ್‌, ಸದ್ಯಕ್ಕೆ ಬಿಡುಗಡೆಯ ತಯಾರಿಯಲ್ಲಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಜೂನ್‌ನಲ್ಲಿ “ದೇವಕಿ’ ಪ್ರೇಕ್ಷಕರ ಮುಂದೆ ಬರಲಿದ್ದಾಳೆ. ಈ ಚಿತ್ರದ ವಿಶೇಷವೆಂದರೆ, ಸಕ್ಸಸ್‌ಫ‌ುಲ್‌ ಟೀಮ್‌ ಪುನಃ ಜೊತೆಗೂಡಿ ಸಿನಿಮಾ ಮಾಡುತ್ತಿರುವುದು.

“ಮಮ್ಮಿ ಸೇವ್‌ ಮಿ’ ಚಿತ್ರ ಯಶಸ್ಸು ಪಡೆದಿತ್ತು. ಅದೇ ಜೋಶ್‌ನಲ್ಲಿ ನಿರ್ದೇಶಕ ಲೋಹಿತ್‌, ಪ್ರಿಯಾಂಕ ಉಪೇಂದ್ರ ಅವರ ಜೊತೆ ಅದೇ ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ. ಇನ್ನೂ ಒಂದು ವಿಶೇಷವೆಂದರೆ ಉಪೇಂದ್ರ ಪುತ್ರಿ ಐಶ್ವರ್ಯಾ ಅವರು ಇಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಆ ಸಿನಿಮಾ ಕುರಿತು ನಿರ್ದೇಶಕ ಲೋಹಿತ್‌ ವಿವರಿಸಿದ್ದಾರೆ.

ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಜೂನ್‌ನಲ್ಲಿ ಪ್ರೇಕ್ಷಕರ ಮುಂದೆ ಬರಲು ಅಣಿಯಾಗುತ್ತಿದೆ. ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಮೊದಲನೆಯದಾಗಿ ಪ್ರಿಯಾಂಕ ಉಪೇಂದ್ರ ಅವರ ಮಗಳು ಐಶ್ವರ್ಯಾ ಈ ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಪ್ರಿಯಾಂಕ ಅವರ ಮಗಳಾಗಿಯೇ ಕಾಣಿಸಿಕೊಂಡಿರುವುದು ವಿಶೇಷ. ಇನ್ನು, ಇಡೀ ಚಿತ್ರ ಪ್ರಿಯಾಂಕ ಅವರ ತವರೂರಾದ ಕೊಲ್ಕತ್ತಾದಲ್ಲೇ ಚಿತ್ರೀಕರಣವಾಗಿದೆ.

ಇದರೊಂದಿಗೆ ಹೊಸ ಸುದ್ದಿಯೆಂದರೆ, ಮಹಿಳಾ ಪ್ರಧಾನ ಚಿತ್ರವೊಂದನ್ನು ಬಿಡುಗಡೆ ಮೊದಲೇ ವಿತರಣೆಯ ಹಕ್ಕು ಪಡೆದಿದ್ದಾರೆ ಕಾರ್ತಿಕ್‌ಗೌಡ. ಇನ್ನು, ಈ ಚಿತ್ರ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದೆ. ಈಗಾಗಲೇ ಕನ್ನಡದಲ್ಲಿ ಬಿಡುಗಡೆಯಾದ ಟೀಸರ್‌ಗೆ ಸಖತ್‌ ಮೆಚ್ಚುಗೆಯೂ ಸಿಕ್ಕಿದೆ. ಇದು ಸಹಜವಾಗಿಯೇ ಚಿತ್ರತಂಡಕ್ಕೆ ಸಂತಸ ಹೆಚ್ಚಿಸಿದೆ.

ದೂರದ ಕೊಲ್ಕತ್ತಾದಲ್ಲಿ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ. ಸುಮಾರು 32 ದಿನಗಳ ಕಾಲ ಬಹುತೇಕ ಕೊಲ್ಕತ್ತಾದಲ್ಲೇ ಚಿತ್ರೀಕರಣವಾಗಿದೆ. ಸುರಿಯುವ ಮಳೆಯ ನಡುವೆಯೇ “ದೇವಕಿ’ ಚಿತ್ರೀಕರಣ ನಡೆಸಿದ್ದನ್ನು ಮೆಲುಕು ಹಾಕುತ್ತದೆ ಚಿತ್ರತಂಡ. ನಾರ್ತ್‌ ಕೊಲ್ಕತ್ತಾ ಎಂದೇ ಕರೆಯುವ ಜಾಗದಲ್ಲಿ ಬಹುತೇಕ ಚಿತ್ರೀಕರಣ ಮಾಡಿರುವುದು ಈ ಚಿತ್ರದ ಮತ್ತೂಂದು ವಿಶೇಷ. ಅದರಲ್ಲೂ ಸೌತ್‌ ಪಾರ್ಕ್‌ ಸಿಮೆಟ್ರಿ ಎಂಬ ಸ್ಥಳದಲ್ಲಿ ಚಿತ್ರೀಕರಣ ಮಾಡಿರುವುದು ಚಿತ್ರದ ಹೆಚ್ಚುಗಾರಿಕೆ.

ಅದರ ವಿಶೇಷವೆಂದರೆ, ಇದುವರೆಗೆ ಅಲ್ಲಿ ಎರಡು ಸಿನಿಮಾಗಳು ಮಾತ್ರ ಚಿತ್ರೀಕರಣಗೊಂಡಿವೆ. ಅದು ಬಿಟ್ಟರೆ, ಸೌತ್‌ ಇಂಡಿಯಾದಲ್ಲಿ ಅದರಲ್ಲೂ ಕನ್ನಡದ “ದೇವಕಿ’ ಚಿತ್ರ ಮೊದಲನೆಯದು ಎಂಬುದು ಹೆಗ್ಗಳಿಕೆ. ಸೌತ್‌ ಪಾರ್ಕ್‌ ಸಿಮೆಟ್ರಿ ನೂರು ವರ್ಷದಷ್ಟು ಹಳೆಯದು. 1970 ರಲ್ಲೇ ಅದನ್ನು ಮುಚ್ಚಲಾಗಿತ್ತು. ಆಗ ಬ್ರಿಟಿಷರ ಆಳ್ವಿಕೆ ಇದ್ದಾಗ, ದೊಡ್ಡ ದೊಡ್ಡ ವ್ಯಕ್ತಿಗಳನ್ನು ಆ ಸ್ಥಳದಲ್ಲಿ ಸಮಾಧಿ ಮಾಡಲಾಗುತ್ತಿತ್ತು. ಕಳೆದ 45 ವರ್ಷಗಳಿಂದಲೂ ಆ ಪಾರ್ಕ್‌ ಮುಚ್ಚಿದೆ.

ಆ ಸ್ಥಳದಲ್ಲಿ ಸತ್ಯಜಿತ್‌ ರೇ ಅವರ ಪುತ್ರನ ಸಿನಿಮಾ, ಅಮಿತಾಬಚ್ಚನ್‌ ಅವರ ಒಂದು ಚಿತ್ರಕ್ಕೆ ಚಿತ್ರೀಕರಣ ಮಾಡಲು ಅವಕಾಶ ಕೊಟ್ಟಿದ್ದು ಬಿಟ್ಟರೆ, ಬೇರೆ ಯಾವ ಸಿನಿಮಾಗೂ ಅವಕಾಶ ಕೊಟ್ಟಿರಲಿಲ್ಲವಂತೆ. ಈಗ ಸೌತ್‌ ಇಂಡಿಯಾದಲ್ಲಿ ಕನ್ನಡದ “ದೇವಕಿ’ ಮೊದಲ ಚಿತ್ರ ಅಲ್ಲಿ ಚಿತ್ರೀಕರಣ ನಡೆದಿದೆ ಎಂಬುದು ನಿರ್ದೇಶಕ ಲೋಹಿತ್‌ ಮಾತು. ಎಲ್ಲಾ ಸರಿ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅವರ ಪಾತ್ರವೇನು?

ಅದಕ್ಕೆ ಉತ್ತರಿಸುವ ನಿರ್ದೇಶಕರು, ಎನ್‌ಜಿಓ ಪಾತ್ರ ನಿರ್ವಹಿಸುತ್ತಿದ್ದು, ಕೆಲ ಸ್ಟುಡೆಂಟ್ಸ್‌ಗೆ ಪಾಠ ಹೇಳಿಕೊಡುವ ಮೇಡಮ್‌ ಆಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಹೈಲೈಟ್‌ ಅಂದರೆ, ಮಳೆಯ ಎಫೆಕ್ಟ್‌ನಲ್ಲಿ ಸುಮಾರು 300 ಕ್ಕೂ ಹೆಚ್ಚು ಜೂನಿಯರ್ ಇಟ್ಟುಕೊಂಡು ಚಿತ್ರೀಕರಿಸಲಾಗಿದೆ. ರಾಮ್‌ಗೊàಪಾಲ್‌ ವರ್ಮ ಅವರ ಚಿತ್ರವೊಂದರಲ್ಲಿ ಕಸಬ್‌ ಪಾತ್ರ ನಿರ್ವಹಿಸಿದ್ದ ನಟ ಸಂಜೀವ್‌ ಜೆಸ್ವಾಲ್‌ ಅವರು ಪ್ರಿಯಾಂಕ ಉಪೇಂದ್ರ ಅವರ ಕಾಂಬಿನೇಷನ್‌ನಲ್ಲಿ ನಟಿಸುತ್ತಿರುವುದು ಇನ್ನೊಂದು ವಿಶೇಷ.

ಬಿಡುಗಡೆಗೆ ಸಿದ್ಧ: ಸದ್ಯಕ್ಕೆ “ದೇವಕಿ’ ಚಿತ್ರಕ್ಕೆ ಡಿಐ ಕೆಲಸ ನಡೆಸುತ್ತಿದೆ. ಕೊಲ್ಕತ್ತಾದಲ್ಲೇ ಚಿತ್ರೀಕರಣಗೊಂಡಿರುವುದರಿಂದ ಅಲ್ಲೇ ತಾಂತ್ರಿಕ ಕೆಲಸಗಳು ನಡೆಯುತ್ತಿವೆ. ಇನ್ನು, ಸೆನ್ಸಾರ್‌ಗೆ ಇಷ್ಟರಲ್ಲೇ ಕಳುಹಿಸುವ ಯೋಚನೆ ನಿರ್ದೇಶಕರಿಗಿದೆ. “ದೇವಕಿ’ ಕೃಷ್ಣನ ತಾಯಿ ಹೆಸರು. ಕಥೆ ಮತ್ತು ಪಾತ್ರಕ್ಕೆ ಸರಿಯಾಗಿ ಹೊಂದಾಣಿಕೆಯಾಗುತ್ತೆ ಎಂಬ ಕಾರಣಕ್ಕೆ “ದೇವಕಿ’ ಎಂದು ನಾಮಕರಣ ಮಾಡಲಾಗಿದೆ. ನಾಯಕಿಯದು ಇಲ್ಲಿ ಸಾಕಷ್ಟು ಸಮಸ್ಯೆ ಎದುರಿಸುವ ಪಾತ್ರ.

ತನ್ನ ಮಗಳನ್ನು ಕಳೆದುಕೊಂಡ ತಾಯಿ ಹೇಗೆಲ್ಲಾ ಅವಳನ್ನು ಹುಡುಕಾಡುತ್ತಾಳೆ ಎಂಬುದು ಕಥೆ. ಇಲ್ಲಿ ಎಮೋಷನ್‌ ಥ್ರಿಲ್ಲರ್‌ ಕಂಟೆಂಟ್‌ ಇದೆ. ನೋಡುಗರಿಗೆ ಅದು ಮಕ್ಕಳ ಕಳ್ಳರ ಕೃತ್ಯ ಇರಬಹುದಾ ಎಂದೆನಿಸಿದರೂ, ಅಲ್ಲೊಂದು ತಿರುವು ಇದೆ. ಅದೇ ಸಿನಿಮಾದ ಹೈಲೈಟ್‌. ಅಮ್ಮ ತನ್ನ ಮಗಳನ್ನು ಹುಡುಕುವುದೇ ಚಿತ್ರದ ಮುಖ್ಯ ಕಥೆ. ಇಲ್ಲಿ ಸಂಬಂಧಗಳ ಮೌಲ್ಯವನ್ನು ತೋರಿಸಲಾಗಿದೆ. ಫ್ಯಾಮಿಲಿ ಎಮೋಷನ್ಸ್‌ ಮೇಲೆಯೇ ಚಿತ್ರ ಸಾಗುತ್ತದೆ.

ಚಿತ್ರದಲ್ಲಿ ಕಿಶೋರ್‌ ಅವರು ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅವರಿಲ್ಲಿ ಕೊಲ್ಕತ್ತಾ ಕಾಪ್‌ ಆಗಿ ಕಾಣಿಸಿಕೊಂಡಿದ್ದಾರೆ. “ಮೊದಲು ಅವರನ್ನು ಅಪ್ರೋಚ್‌ ಮಾಡಿದಾಗ ಡೇಟ್‌ ಇಲ್ಲ, ಮಾಡಲು ಆಗಲ್ಲ ಅಂದಿದ್ದರು. ಕೊನೆಗೆ ಒಂದು ತಿಂಗಳ ಕಾಲ ಅವರನ್ನು ಹಿಂಬಾಲಿಸಿ, ಭೇಟಿ ಮಾಡಿ,ಒಮ್ಮೆ ಕಥೆ ಕೇಳಿ, ಇಷ್ಟವಾದರೆ ಮಾತ್ರ ಮಾಡಿ ಅಂತ ಹೇಳಿದಾಗ, ಕಥೆ ಕೇಳಿ, ಡೇಟ್‌ ಕೊಟ್ಟರು. ಅಷ್ಟೇ ಅಲ್ಲ, ತಮಿಳು ಚಿತ್ರಕ್ಕಾಗಿ ಅವರು ಗಡ್ಡ ಬಿಟ್ಟಿದ್ದರು. ಈ ಚಿತ್ರಕ್ಕೆ ಶೇವ್‌ ಮಾಡಿಸಿ ಆ ಪಾತ್ರ ಮಾಡಿದ್ದಾರೆ. ಉಳಿದಂತೆ ಚಿತ್ರದಲಿ ಶೇ.40 ರಷ್ಟು ಮಂದಿ ಬೆಂಗಾಲಿ ರಂಗಭೂಮಿ ಕಲಾವಿದರಿದ್ದಾರೆ.

ಚಿತ್ರದಲ್ಲಿ ವೇಣು ಕ್ಯಾಮೆರಾ ಹಿಡಿದರೆ, ನೊಬಿನ್‌ ಪಾಲ್‌ ಸಂಗೀತ ನೀಡಿದ್ದಾರೆ. ರವಿಚಂದ್ರ ಅವರ ಸಂಕಲನವಿದೆ. ಕೊಲ್ಕತ್ತಾದಲ್ಲೇ ಸೌಂಡ್‌ ಎಫೆಕ್ಟ್ ನಡೆಯುತ್ತಿದೆ. ರವಿವರ್ಮ ಅವರಿಲ್ಲಿ ಕೊಲ್ಕತ್ತಾ ಸಿಟಿ ಮಧ್ಯೆಯೇ ಒಂದು ಭರ್ಜರಿ ಚೇಸ್‌ ಸೀನ್‌ ಕಂಪೋಸ್‌ ಮಾಡಿದ್ದಾರೆ. ಚಿತ್ರದ ಚಿತ್ರೀಕರಣ ಕೊಲ್ಕತ್ತಾದಲ್ಲೇ ನಡೆದಿರುವುದರಿಂದ ಬೆಂಗಾಲಿ, ಇಂಗ್ಲೀಷ್‌, ಹಿಂದಿ ಭಾಷೆಯೂ ಕೇಳಲು ಸಿಗುತ್ತೆ.

ನಾವು ನಮ್ಮೂರು ಬಿಟ್ಟು, ಬೇರೆ ರಾಜ್ಯಕ್ಕೆ ಹೋದಾಗ, ಅಲ್ಲಿ ಕೇಳುವ ಮಾತುಗಳಂತೆಯೇ ಇಲ್ಲೂ ಕೇಳುತ್ತೆ. ಇನ್ನು ಸಿನಿಮಾಟಿಕ್‌ ಶಾಟ್‌ ಬಳಕೆ ಮಾಡಿಲ್ಲ. ಕಣ್ಣ ಮುಂದೆ ನಡೆಯುವ ಸಂಗತಿಗಳಂತೆಯೇ ಚಿತ್ರೀಕರಿಸಲಾಗಿದೆ’ ಎನ್ನುವುದು ಲೋಹಿತ್‌ ಮಾತು. ರವೀಶ್‌ ಮತ್ತು ಅಕ್ಷಯ್‌ ನಿರ್ಮಾಣ ಮಾಡಿದ್ದು, ಅವರಿಗೆ ಇದು ಮೊದಲ ಚಿತ್ರ. ಚಿತ್ರಕ್ಕೆ ಗುರುಪ್ರಸಾದ್‌ ಅವರು ಸಂಭಾಷಣೆ ಬರೆದಿದ್ದಾರೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.