ಸುದೀಪ್ ಈಗ ಬಾದ್ಷಾ
Team Udayavani, Nov 18, 2018, 11:29 AM IST
ಅಭಿಮಾನಿಗಳ ಒತ್ತಾಯದ ಮೇರೆಗೆ “ಪೈಲ್ವಾನ್’ ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ದೇಶಕ ಕೃಷ್ಣ ಕೆಲ ದಿನಗಳ ಹಿಂದಷ್ಟೇ ಹೇಳಿದ್ದರು. ಸಹಜವಾಗಿಯೇ ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳು ಖುಷಿಯಾಗುವಂತಹ ಪೋಸ್ಟರ್ ಜೊತೆಗೆ ಸುದ್ದಿಯೊಂದನ್ನು ನೀಡಿದ್ದಾರೆ.
ಹೌದು, ಸುದೀಪ್ ಕುಸ್ತಿ ಅಖಾಡದಲ್ಲಿರುವ ಪೋಸ್ಟರ್ವೊಂದನ್ನು ಬಿಟ್ಟಿರುವ “ಪೈಲ್ವಾನ್’ ತಂಡ ಅದರ ಜೊತೆಗೆ ಸುದೀಪ್ ಅವರಿಗೆ ಹೊಸ ಬಿರುದನ್ನು ನೀಡಿದೆ. ಅದು “ಬಾದ್ಷಾ’. ಹಾಗಾಗಿ, ಇನ್ನು ಮುಂದೆ ಅಭಿಮಾನಿಗಳು “ಬಾದ್ಷಾ ಕಿಚ್ಚ ಸುದೀಪ’ ಎಂದು ಪ್ರೀತಿಯಿಂದ ಕರೆಯಬಹುದು.
“ಪೈಲ್ವಾನ್’ ಚಿತ್ರದ ಚಿತ್ರೀಕರಣ ಜೋರಾಗಿ ನಡೆಯುತ್ತಿದ್ದು, ಕುಸ್ತಿಗಾಗಿ ಅಖಾಡಕ್ಕಾಗಿ ವಿಶೇಷವಾದ ಸೆಟ್ ಹಾಕಿಸಲಾಗಿದೆ. ಸುದೀಪ್ ಕೂಡಾ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ನಡೆಸಿದ್ದು, ಕುಸ್ತಿ ಅಖಾಡದಲ್ಲಿ ಫಿಟ್ ಆಗಿ ಕಾಣಿಸಿಕೊಳ್ಳಲು ಏನೆಲ್ಲಾ ಕಸರತ್ತು ನಡೆಸಬೇಕೋ ಅವೆಲ್ಲವನ್ನು ಮಾಡುತ್ತಿದ್ದಾರೆ. ಅಂದಹಾಗೆ, ಚಿತ್ರವನ್ನು ಕೇವಲ ಕನ್ನಡವಷ್ಟೇ ಅಲ್ಲದೇ, ಇತರ ಭಾಷೆಗಳಲ್ಲೂ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ