Udayavni Special

ರಾಮನಿಗೆ ಅಡ್ಡ ಬಂದ ಗಡ್ಡ


Team Udayavani, Dec 6, 2017, 10:00 PM IST

sathish.jpg

ಸತೀಶ್‌ ನೀನಾಸಂ, ತಮ್ಮ ಸತೀಶ್‌ ಪಿಕ್ಚರ್‌ ಹೌಸ್‌ನಿಂದ “ರಾಮನು ಕಾಡಿಗೆ ಹೋದನು’ ಎಂಬ ಚಿತ್ರವನ್ನು ನಿರ್ಮಿಸುತ್ತಿರುವ ವಿಷಯ ಗೊತ್ತಿರಬಹುದು. ಈಗಾಗಲೇ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ಇನ್ನೇನು ಚಿತ್ರ ಸದ್ಯದಲ್ಲೇ ಶುರುವಾಗಬಹುದು ಎನ್ನುವಷ್ಟರಲ್ಲೇ ಈ ಚಿತ್ರ ನಿಂತಿದೆ ಎಂಬ ಸುದ್ದಿಯೊಂದು ಓಡಾಡುತ್ತಿದೆ. ಹೌದು, ಸತೀಶ್‌ ಅಭಿನಯದ ಮತ್ತು ನಿರ್ಮಾಣದ “ರಾಮನು ಕಾಡಿಗೆ ಹೋದನು’ ಚಿತ್ರವು ನಿಂತಿದೆ ಎಂದು ಪುಕಾರು ಆಗಿದೆ.

ಈ ವಿಷಯವನ್ನು ಸತೀಶ್‌ ಅವರಲ್ಲೇ ನೇರವಾಗಿ ಕೇಳಿದರೆ, ಚಿತ್ರ ನಿಂತಿಲ್ಲ ಮುಂದಕ್ಕೆ ಹೋಗಿದೆ ಎಂಬ ಉತ್ತರ ಅವರಿಂದ ಬರುತ್ತದೆ. “ರಾಮನು ಕಾಡಿಗೆ ಹೋದನು’ ಚಿತ್ರವು ಮುಂದಕ್ಕೆ ಹೋಗಿದೆ. ಬರೀ ಒಂದೆರೆಡು ತಿಂಗಳು ಮುಂದಕ್ಕಲ್ಲ, ಬರೋಬ್ಬರಿ ಆರು ತಿಂಗಳು ಮುಂದಕ್ಕೆ ಹೋಗಿದೆಯಂತೆ. ಅದಕ್ಕೆ ಕಾರಣವೇನೆಂದು ಕೇಳಿದರೆ, ನಗು ಬರಬಹುದು. ಏಕೆಂದರೆ, ಚಿತ್ರಕ್ಕೆ ಅಡ್ಡಗಾಲು ಹಾಕುತ್ತಿರುವುದು ಬೇರೆ ಯಾರೋ ಅಲ್ಲ, ಗಡ್ಡ ಎನ್ನುತ್ತಾರೆ ಸತೀಶ್‌.

“ಹೌದು, “ರಾಮನು ಕಾಡಿಗೆ ಹೋದನು’ ಚಿತ್ರ ಮುಂದಕ್ಕೆ ಹೋಗಿದೆ. ಅದಕ್ಕೆ ಕಾರಣ ಗಡ್ಡ. ಎಲ್ಲಾ ಸರಿ ಹೋಗಿದ್ದರೆ, ಇಷ್ಟರಲ್ಲಿ ಸಿನಿಮಾ ಶುರುವಾಗಬೇಕಿತ್ತು. ಆದರೆ, ಮುಂದೆ ಹೋಗಿದ್ದ “ಅಯೋಗ್ಯ’ ಸಡನ್‌ ಆಗಿ ಶುರುವಾಗಿದೆ. ಆ ಚಿತ್ರಕ್ಕೆ ಗಡ್ಡ ಬೇಕು. “ಅಯೋಗ್ಯ’ ಚಿತ್ರಕ್ಕೆ ಒಂದೇ ಹಂತದ ಚಿತ್ರೀಕರಣ ನಡೆಯಲಿದ್ದು, ಜನವರಿ ಅಥವಾ ಫೆಬ್ರವರಿಯಲ್ಲಿ ತಮಿಳು ಚಿತ್ರದ ಚಿತ್ರೀಕರಣ ನಡೆಯಲಿದೆ. ಆ ಚಿತ್ರಕ್ಕೆ ಏನಿಲ್ಲವೆಂದರೂ ಮೂರು ತಿಂಗಳು ಬೇಕು. ಮಧ್ಯೆ “ರಾಮನು ಕಾಡಿಗೆ ಹೋದನು’ ಚಿತ್ರ ಶುರು ಮಾಡುವ ಹಾಗಿಲ್ಲ.

ಏಕೆಂದರೆ, “ಅಯೋಗ್ಯ’ ಮತ್ತು ತಮಿಳು ಚಿತ್ರಗಳಿಗೆ ಗಡ್ಡ ಬೇಕು. ಈ ಚಿತ್ರಕ್ಕೆ ಬೇಡ. ಈ ಚಿತ್ರಕ್ಕೋಸ್ಕರ ಗಡ್ಡ ಬೋಳಿಸಿದರೆ, ಕಂಟಿನ್ಯುಟಿ ಮಿಸ್‌ ಆಗುತ್ತದೆ. ಹಾಗಾಗಿ ಆ ಎರಡೂ ಚಿತ್ರಗಳ ಚಿತ್ರೀಕರಣ ಮುಗಿದ ನಂತರ “ರಾಮನು ಕಾಡಿಗೆ ಹೋದನು’ ಶುರುವಾಗಲಿದೆ. ಚಿತ್ರ ಸ್ವಲ್ಪ ನಿಧಾನವಾಗಲಿದೆ ಎಂಬುದು ಬಿಟ್ಟರೆ, ಮಿಕ್ಕಂತೆ ಯಾವುದೇ ಸಮಸ್ಯೆ ಇಲ್ಲ. ಇನ್ನು ಆರು ತಿಂಗಳಾದರೂ ಚಿತ್ರ ಶುರುವಾಗಿಯೇ ಆಗುತ್ತದೆ’ ಎನ್ನುತ್ತಾರೆ ಸತೀಶ್‌ ನೀನಾಸಂ.

“ರಾಮನು ಕಾಡಿಗೆ ಹೋದನು’ ಚಿತ್ರವನ್ನು ವಿಕಾಸ್‌ ಪಂಪಾಪತಿ ಮತ್ತು ವಿನಯ್‌ ಪಂಪಾಪತಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಪ್ರೀತಮ್‌ ತೆಗ್ಗಿನಮನೆ ಛಾಯಾಗ್ರಹಣ ಮಾಡಿದರೆ, ಮಿಥುನ್‌ ಮುಕುಂದನ್‌ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಅವರ ಹುಡುಕಾಟ ನಡೆಯುತ್ತಿದೆ. ಸದ್ಯಕ್ಕೆ ಸತೀಶ್‌ ನೀನಾಸಂ ಜೊತೆಗೆ ಅಚ್ಯುತ್‌ ಕುಮಾರ್‌ ನಟಿಸುತ್ತಿದ್ದು, ಮಿಕ್ಕ ಕಲಾವಿದರ ಆಯ್ಕೆ ನಡೆಯುತ್ತಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ಶಿವಮೊಗ್ಗದಲ್ಲಿ ಇಂದು ಮತ್ತೇ 9 ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ

ಶಿವಮೊಗ್ಗದಲ್ಲಿ ಇಂದು ಮತ್ತೆ 9 ಜನರಲ್ಲಿ ಕೋವಿಡ್ ಪಾಸಿಟಿವ್

ರಾಜ್ಯದಲ್ಲಿ ಕೋವಿಡ್ ತ್ರಿಶತಕ: ಇಂದು ಕೋವಿಡ್ -19 ಸೋಂಕಿತರು ಪತ್ತೆ

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೋವಿಡ್ ಸೋಂಕು: ಇಂದು 187 ಕೋವಿಡ್ -19 ಸೋಂಕಿತರು ಪತ್ತೆ

ಲಾಕ್ ಡೌನ್; ಊರು ಸೇರಿದ ನಂತರ ಕದ್ದ ಬೈಕ್ ಮಾಲೀಕನಿಗೆ ಪಾರ್ಸೆಲ್ ಮೂಲಕ ವಾಪಸ್

ಲಾಕ್ ಡೌನ್; ಊರು ಸೇರಿದ ನಂತರ ಕದ್ದ ಬೈಕ್ ಮಾಲೀಕನಿಗೆ ಪಾರ್ಸೆಲ್ ಮೂಲಕ ವಾಪಸ್!

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ: ಉಡುಪಿಯಲ್ಲಿ ಮತ್ತೆ ಸೋಂಕಿತರು

ಉಡುಪಿ: ಇನ್ನೂರರ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ, ಮತ್ತೆ 73 ಸೋಂಕಿತರು ಪತ್ತೆ

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ

ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಅತಹತ್ಯೆ

ಬೆಂಗಳೂರಿನಲ್ಲಿ ವಿಷ ಸೇವಿಸಿ ಸ್ಯಾಂಡಲ್ ವುಡ್ ನಟಿ ಚಂದನ ಆತ್ಮಹತ್ಯೆ

bold-talk-shradda

ಋತುಚಕ್ರದ ಬಗ್ಗೆ ಶ್ರದ್ಧಾ ಶ್ರೀನಾಥ್ ಬೋಲ್ಡ್ ಮಾತು!

magalu-kanaki

ಅಕಾಲಿಕ ಅಂತ್ಯ ಕಾಣುತ್ತಿದೆ “ಮಗಳು ಜಾನಕಿ’ ಧಾರಾವಾಹಿ

hamsa-baraguru

ಹಂಸಲೇಖ- ಬರಗೂರು ಕಾಂಬಿನೇಶನ್‌ನಲ್ಲಿ ಕೋವಿಡ್‌ 19 ಹಾಡು

sangeeta manu

ಮನೋಹರ್ ಲಾಕ್‌ಡೌನ್ ಸಿನಿಮಾ

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಬೆಳಗಾವಿ: ಮಗು ಸೇರಿ 9 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ: ಮಗು ಸೇರಿ 9 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ಶಿವಮೊಗ್ಗದಲ್ಲಿ ಇಂದು ಮತ್ತೇ 9 ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ

ಶಿವಮೊಗ್ಗದಲ್ಲಿ ಇಂದು ಮತ್ತೆ 9 ಜನರಲ್ಲಿ ಕೋವಿಡ್ ಪಾಸಿಟಿವ್

Bitter-Gourd

ಕಹಿ, ಕಹಿ ಹಾಗಲಕಾಯಿ…ಆರೋಗ್ಯಕ್ಕೆ ಹಲವು ಸಿಹಿ ಉಪಯೋಗವಿದೆ!

ರಾಜ್ಯದಲ್ಲಿ ಕೋವಿಡ್ ತ್ರಿಶತಕ: ಇಂದು ಕೋವಿಡ್ -19 ಸೋಂಕಿತರು ಪತ್ತೆ

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೋವಿಡ್ ಸೋಂಕು: ಇಂದು 187 ಕೋವಿಡ್ -19 ಸೋಂಕಿತರು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.