ಪ್ರಭುತ್ವಕ್ಕಾಗಿ ಗಡಿನಾಡು ಹೋರಾಟ

ನಿರೀಕ್ಷೆಯ ಕಂಗಳಲ್ಲಿ ಸೂರ್ಯ

Team Udayavani, Jan 19, 2020, 7:01 AM IST

“ಸಂಯುಕ್ತ-2′ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪರಿಚಯವಾಗಿರುವ ಪ್ರಭು ಸೂರ್ಯ ಈಗ ಮತ್ತೂಂದು ಮಾಸ್‌ ಚಿತ್ರ “ಗಡಿನಾಡು’ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಕಾಲೇಜ್‌ ಮುಗಿಸಿ ಬೆಳಗಾವಿಗೆ ಹೋಗುವ ಹುಡುಗನೊಬ್ಬ ಅಲ್ಲಿ ಕರ್ನಾಟಕ-ಮಹರಾಷ್ಟ್ರ ಗಡಿ ಸಮಸ್ಯೆಯ ವಿರುದ್ದ ಹೇಗೆ ಹೋರಾಡುತ್ತಾನೆ ಅನ್ನೋದು ಪ್ರಭು ಸೂರ್ಯ ಅವರ ಪಾತ್ರವಂತೆ.

ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಪ್ರಭು ಸೂರ್ಯ, “ನಿರ್ದೇಶಕ ನಾಗ್‌ ಹುಣಸೋಡ್‌ ನನಗೆ ಮೊದಲಿನಿಂದಲೂ ಸ್ನೇಹಿತರು. ಒಮ್ಮೆ ಅಚಾನಕ್ಕಾಗಿ ಈ ಚಿತ್ರದಲ್ಲಿ ಅಭಿನಯಿಸುವಂತೆ ಆಫ‌ರ್‌ ಕೊಟ್ಟರು. ಚಿತ್ರದ ಕಥೆಗೆ ಒಂದಷ್ಟು ತಯಾರಿ ಬೇಕಾಗಿದ್ದರಿಂದ, ಡ್ಯಾನ್ಸ್‌-ಫೈಟ್ಸ್‌ ಎಲ್ಲವನ್ನೂ ಕಲಿತುಕೊಂಡು ಸಿನಿಮಾ ಒಪ್ಪಿಕೊಂಡೆ. ಇದರಲ್ಲಿ ನನ್ನದು ಪಕ್ಕಾ ಮಾಸ್‌ ಇಮೇಜ್‌ ಇರುವ ಪಾತ್ರ. ಒಬ್ಬ ಲವರ್‌ಬಾಯ್‌ ಆಗಿ, ಮತ್ತೂಬ್ಬ ಆ್ಯಕ್ಷನ್‌ ಹೀರೋ ಆಗಿ ಎರಡು ಶೇಡ್‌ನ‌ಲ್ಲಿ ಕಾಣಿಸಿಕೊಳ್ಳುತ್ತೇನೆ.

ಲವ್‌, ಸೆಂಟಿಮೆಂಟ್‌, ಆ್ಯಕ್ಷನ್‌, ರೊಮ್ಯಾನ್ಸ್‌, ಕಾಮಿಡಿ ಹೀಗೆ ಒಂದು ಕಮರ್ಶಿಯಲ್‌ ಎಂಟರ್‌ಟೈನ್ಮೆಂಟ್‌ ಸಿನಿಮಾದಲ್ಲಿ ಏನೇನು ನಿರೀಕ್ಷಿಸಬಹುದೋ, ಅದೆಲ್ಲವನ್ನೂ ಈ ಚಿತ್ರದಲ್ಲಿ ನೋಡಬಹುದು’ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ. ಈಗಾಗಲೇ ಬಿಡುಗಡೆಯಾಗಿರುವ “ಗಡಿನಾಡು’ ಚಿತ್ರದ ಟ್ರೇಲರ್‌, ಹಾಡುಗಳಿಗೆ ಸೋಶಿಯಲ್‌ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಜ. 24ಕ್ಕೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

ಈ ಬಗ್ಗೆ ಮಾತನಾಡುವ ಪ್ರಭು ಸೂರ್ಯ, “ಈಗಾಗಲೇ ಚಿತ್ರದ ಪ್ರಮೋಶನ್‌ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿದೆ. ಫ‌ಸ್ಟ್‌ಲುಕ್‌, ಟೀಸರ್‌, ಹಾಡುಗಳು, ಟ್ರೇಲರ್‌ ಹೀಗೆ ಎಲ್ಲದಕ್ಕೂ ಸೋಶಿಯಲ್‌ ಮೀಡಿಯಾಗಳಲ್ಲಿ ಒಳ್ಳೆಯ ವೀವ್ಸ್‌ ಸಿಗುತ್ತಿದೆ. ಒಳ್ಳೆಯ ಟೀಮ್‌ನಿಂದಾಗಿ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು’ ಎನ್ನುತ್ತಾರೆ.

ಇನ್ನು ಈಗಾಗಲೇ ಬಿಡುಗಡೆಯಾಗಿರುವ “ಗಡಿನಾಡು’ ಚಿತ್ರದ ಫ‌ಸ್ಟ್‌ಲುಕ್‌, ಟೀಸರ್‌, ಹಾಡುಗಳು, ಟ್ರೇಲರ್‌ಗಳಲ್ಲಿ ಪ್ರಭು ಸೂರ್ಯ ಅವರ ರಗಡ್‌ ಲುಕ್‌ ನೋಡಿದವರು ಅವರಿಗೆ “ಡ್ಯಾಶಿಂಗ್‌ ಸ್ಟಾರ್‌’ ಎಂಬ ಬಿರುದನ್ನು ನೀಡಿ ದ್ದಾರಂತೆ. “ಬಹುಶಃ ಮಾಸ್‌ ಆಡಿಯನ್ಸ್‌ಗೆ ಇಷ್ಟವಾಗುವಂಥ ಕಂಟೆಂಟ್‌ ಸಿನಿಮಾದಲ್ಲಿ ಇರುವ ಕಾರಣದಿಂದ ಮತ್ತು ಅದಕ್ಕೆ ಬೇಕಾದಂತೆ ನಾನು ಕಾಣುತ್ತಿರುವುದರಿಂದಲೋ, ಏನೋ ಅನೇಕರು “ಡ್ಯಾಶಿಂಗ್‌ ಸ್ಟಾರ್‌’ ಅಂಥ ಕರೆಯುತ್ತಾರೆ.

ನನಗೆ ಸಿಕ್ಕ ಪಾತ್ರವನ್ನು ಎಷ್ಟು ಚೆನ್ನಾಗಿ ಮಾಡಬಹುದೋ, ಅಷ್ಟು ಚೆನ್ನಾಗಿ ನನ್ನ ಪ್ರಯತ್ನ ಹಾಕಿ ನಿರ್ವಹಿಸಿದ್ದೇನೆ. ನನ್ನ ಪ್ರಕಾರ ಮಾಸ್‌ ಆಡಿಯನ್ಸ್‌ಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಾರೆ “ಗಡಿನಾಡು’ ಮೂಲಕ ಹೊಸವರ್ಷದ ಆರಂಭದಲ್ಲಿ ಹೊಸ ಜೋಶ್‌ನಲ್ಲಿ ಎಂಟ್ರಿಯಾಗುತ್ತಿರುವ ಪ್ರಭು ಸೂರ್ಯ ಪ್ರೇಕ್ಷಕ ಪ್ರಭುಗಳಿಗೆ ಹೊಸಲುಕ್‌ನಲ್ಲಿ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದರ್ಶನ್‌ ಈಗ "ಗಂಡುಗಲಿ ಮದಕರಿನಾಯಕ' ಸಿನಿಮಾದಲ್ಲಿ ತೊಡಗಿದ್ದಾರೆ. ಅವರ ಅಭಿನಯದ "ಕುರುಕ್ಷೇತ್ರ' ಚಿತ್ರದ ಶತದಿನೋತ್ಸವ ಕೂಡ ಶಿವರಾತ್ರಿ ದಿನ ಅದ್ಧೂರಿಯಾಗಿ ನಡೆದಿದೆ....

  • "ಜೋಗಿ' ಚಿತ್ರದ ನಿರ್ಮಾಪಕ, ಅಶ್ವಿ‌ನಿ ರೆಕಾರ್ಡಿಂಗ್‌ ಕಂಪೆನಿಯ ರೂವಾರಿ ಅಶ್ವಿ‌ನಿ ರಾಮ್‌ ಪ್ರಸಾದ್‌ ಈಗ ತಮ್ಮ ಪುತ್ರನನ್ನು ಚಿತ್ರರಂಗಕ್ಕೆ ಪರಿಚಯಿಸುವ ಸಿದ್ಧತೆ...

  • ಇತ್ತೀಚೆಗಷ್ಟೇ "ರ್‍ಯಾಂಬೋ-2' ಚಿತ್ರದ "ಚುಟು ಚುಟು ಅಂತೈತಿ...' ಅನ್ನೋ ಉತ್ತರ ಕರ್ನಾಟಕ ಶೈಲಿಯ ಜವಾರಿ ಹಾಡು ಯು-ಟ್ಯೂಬ್‌ನಲ್ಲಿ 100 ಮಿಲಿಯನ್‌ ಹಿಟ್ಸ್ ಪಡೆದುಕೊಂಡು...

  • ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್‌ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್‌ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ...

  • ಈ ಬಾರಿ ನಡೆಯಲಿರುವ ಹನ್ನೆರಡನೇ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದ ನಟ ಯಶ್‌ ಅವರು ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಪ್ರತಿ...

ಹೊಸ ಸೇರ್ಪಡೆ