ಅನಂತನ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಟ್ರೈಲರ್ ವೈರಲ್
Team Udayavani, Apr 8, 2018, 3:16 PM IST
ಮೊಸ್ಟ್ ಹ್ಯಾಂಡ್ಸಮ್ – ಎವರ್ ಗ್ರೀನ್ ನಟ ಅನಂತನಾಗ್ ಮತ್ತು ರಂಗಿತರಂಗ ಬೆಡಗಿ ರಾಧಿಕಾ ಚೇತನ್ ಅಭಿನಯದ ವಿಭಿನ್ನ ಕಥಾಹಂದರ ಹೊಂದಿರುವ “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಟ್ರೈಲರ್ ದೂರದ ದುಬೈಯ ಕರಾಮದಲ್ಲಿರುವ ಇಂಡಿಯನ್ ಸ್ಕೂಲ್ ಶೇಕ್ ರಾಶಿದ್ ಆಡಿಟೋರಿಯಂನಲ್ಲಿ ಕನ್ನಡಿಗರ ಸಮ್ಮುಖದಲ್ಲಿ ಬಿಡುಗಡೆಯಾಗಿದೆ. ಈಗಾಗಲೇ ಚಿತ್ರದ ಪೊಸ್ಟರ್ಗಳು ಮತ್ತು ಅನಂತನಾಗ್ ಅವರ ಲುಕ್ ಕೂಡ ಎಲ್ಲರ ಗಮನ ಸೆಳೆದಿದ್ದವು.
ಇದೀಗ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ತುಂಬಾ ಭರವಸೆ ಮೂಡಿದ್ದು, ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಹೆಸರೇ ತುಂಬಾ ಡಿಫ್ರೆಂಟಾಗಿದೆ, ಇತ್ತೀಚೆಗಿನ ಯುವಕರ ಸಿನಿಮಾಗಳೆಲ್ಲವು ವಿಶಿಷ್ಟವಾದ ಹೆಸರಿನಿಂದಲೇ ಮಿಂಚುತ್ತಿವೆ ಆದರೆ ಇದು ದೊಡ್ಡ ತಾರಾ ಬಳಗವಿರುವ ಚಿತ್ರ. ಮೊಸ್ಟ್ ಹ್ಯಾಂಡ್ಸಮ್ ಹಿರೋ ಅನಂತನಾಗ್ ಮತ್ತು ರಂಗಿತರಂಗ ಚಿತ್ರದ ನಟಿ ರಾಧಿಕಾ ಚೇತನ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಅಲ್ಲದೇ ರಾಧಿಕಾ ಚೇತನ್ ಅವರ ಪಾತ್ರ ತುಂಬಾ ವಿಶಿಷ್ಟವಾಗಿದ್ದು ಟ್ರೈಲರ್ನಲ್ಲಿಯೇ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇನ್ನು ನರೇಂದ್ರ ಬಾಬು ಅವರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಕೂಡ ಬರೆದಿದ್ದಾರೆ. ಪಿ.ಕೆ.ಎಚ್. ದಾಸ್ ಅವರ ಛಾಯಾಗ್ರಹಣ, ರಾಮಚಂದ್ರ ಹಡಪದ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಟ್ರೈಲರ್ನಲ್ಲಿನ ಬ್ಯಾಕ್ಗ್ರೌಂಡ್ ಮ್ಯೂಸಿಕ್ ವಿಶಿಷ್ಠವಾಗಿ ಮೂಡಿಬಂದಿದ್ದು, ಚಿತ್ರದ ಮೇಲೆ ಸಾಕಷ್ಟು ಕುತೂಹಲ ಮೂಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು