ಕುದುರೆ ಹೆಜ್ಜೆ ನೋಡಿ ʼUIʼ ಡೇಟ್ ಗೆಸ್ ಮಾಡಿ: ಮತ್ತೆ ತಲೆಗೆ ಹುಳು ಬಿಟ್ಟ ಉಪ್ಪಿ
Team Udayavani, Jan 1, 2024, 5:18 PM IST
ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನಕ್ಕೆ ಕಂಬ್ಯಾಕ್ ಮಾಡುತ್ತಿರುವ ʼಯುಐʼ ಸಿನಿಮಾ ಸಟ್ಟೇರಿದ ದಿನದಿಂದ ಸದ್ದು ಮಾಡುತ್ತಿದೆ. ನಾನಾ ಹಬ್ಬ ಹಾಗೂ ವಿಶೇಷ ದಿನದ ಸಂದರ್ಭದಲ್ಲಿ ಕ್ರಿಯೇಟಿವ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಸಿನಿಮಾದ ಬಗೆಗಿನ ಹೈಪ್ ಹೆಚ್ಚಿಸುತ್ತಲೇ ಬಂದಿದೆ.
ವಿಭಿನ್ನ ರೀತಿಯಲ್ಲಿ ಸಿನಿಮಾವನ್ನು ಶೂಟಿಂಗ್ ಹಂತದಲ್ಲೇ ಪ್ರಚಾರ ಮಾಡುತ್ತಿರುವ ʼಯುಐʼ, ಟೀಸರ್ ಮೂಲಕ ಒಂದು ಹೊಸ ದಾಖಲೆಯನ್ನೇ ಬರೆದಿತ್ತು. ಸ್ಕ್ರೀನ್ ಮೇಲೆ ಬರೀ ಕತ್ತಲೆಯನ್ನು ತೋರಿಸಿ ಟೀಸರ್ ಬಿಟ್ಟಿತ್ತು.
ಟೀಸರ್ ನಲ್ಲಿ ಯಾವ ದೃಶ್ಯವೂ ಇಲ್ಲ. ಬರೀ ಕತ್ತಲೆಯನ್ನು ತೋರಿಸಿದ್ದಾರೆ. ಹಿನ್ನೆಲೆಯಲ್ಲಿ ಮಾಸ್ ವಾಯ್ಸ್ ಇದೆ ಅಷ್ಟೇ. ಇದು ʼಎಐʼ ವರ್ಲ್ಡ್ ಅಲ್ಲ, ಯʼಯುಐʼ ವರ್ಲ್ಡ್.. ಈ ಟೀಸರ್ ನಿಮ್ಮ ಕಲ್ಪನೆಗೆ ಬಿಟ್ಟದ್ದೆಂದು ಟೀಸರ್ ನಲ್ಲಿ ಕೊನೆಯದಾಗಿ ತೋರಿಸಲಾಗಿತ್ತು.
ಹೊಸ ವರ್ಷದ ವೇಳೆಗೆ ಉಪೇಂದ್ರ ಅವರು ʼಯುಐʼ ಸಿನಿಮಾದ ಬಿಗ್ಗೆ ಬಿಗ್ ಅಪ್ಡೇಟ್ ವೊಂದನ್ನು ನೀಡುವುದಾಗಿ ಹೇಳಿದ್ದರು. ಅದರಂತೆ ಬಿಗ್ ಅಪ್ಡೇಟ್ ವೊಂದನ್ನು ನೀಡಿದ್ದಾರೆ. ಆದರೆ ಅಪ್ಡೇಟ್ ನೀಡುವ ಮೊದಲು ಮತ್ತೆ ತಲೆಗೆ ಹುಳು ಬಿಟ್ಟಿದ್ದಾರೆ.
ಕುದುರೆಯೊಂದು ಓಡುತ್ತಿರುವ ದೃಶ್ಯವನ್ನು ತೋರಿಸಿ, ದಿನಾಂಕವನ್ನು ಗೆಸ್ ಮಾಡಿ ಎಂದು ಹೇಳಿದ್ದಾರೆ. ತಿಂಗಳು ಹಾಗೂ ವರ್ಷವನ್ನು ಹಾಕಿ ದಿನಾಂಕವನ್ನು ಗೆಸ್ ಮಾಡಿ ಮೇಲ್ ಮಾಡಿ ಎಂದಿದ್ದಾರೆ. ಕೆಲವರು ಸಂಕ್ರಾತಿಗೆ ಟೀಸರ್ ಬರುತ್ತೆ ಎನ್ನುವ ಕಮೆಂಟ್ ಮಾಡುತ್ತಿದ್ದು ಇನ್ನು ಕೆಲವರು, ಬೇರೆ ಬೇರೆ ದಿನಾಂಕವನ್ನು ಗೆಸ್ ಮಾಡಿದ್ದಾರೆ.
ಕುದರೆಯ ಹೆಜ್ಜೆಯನ್ನು ಲೆಕ್ಕಹಾಕಿ ದಿನಾಂಕವನ್ನು ಕಮೆಂಟ್ ಮಾಡುತ್ತಿದ್ದಾರೆ.
ಲಹರಿ ಫಿಲಂಸ್ ಮತ್ತು ವೀನಸ್ ಎಂಟರ್ ಟೈನರ್ಸ್ ಜಂಟಿ ನಿರ್ಮಾಣದಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಲಹರಿ ಫಿಲಂಸ್ ಮನೋಹರನ್ ಹಾಗೂ ಕೆ.ಪಿ ಶ್ರೀಕಾಂತ್ ಚಿತ್ರದ ನಿರ್ಮಿಸುತ್ತಿದ್ದಾರೆ. ಅಜನೀಶ್ ಲೋಕನಾಥ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
🔮 Unveiling the magic! The #UITheMovie teaser is set to enchant your screens.#UppiDirects @nimmaupendra #GManoharan @Laharifilm @enterrtainers @kp_sreekanth #naveenmanoharan @AJANEESHB @shivakumarart @Reeshmananaiah @LahariMusic pic.twitter.com/Sc2PpHWB7v
— Upendra (@nimmaupendra) January 1, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…