Sandalwood: ಮಾರ್ಚ್ 7ಕ್ಕೆ ವಿಜಯ ರಾಘವೇಂದ್ರ ಜೋಗ್ 101
Team Udayavani, Feb 27, 2024, 6:01 PM IST
ವಿಜಯ್ ರಾಘವೇಂದ್ರ ಅಭಿನಯಯದ, ವಿಜಯ್ ಕನ್ನಡಿಗ ನಿರ್ದೇಶನದ “ಜೋಗ್ 101′ ಚಿತ್ರ ಮಾರ್ಚ್ 07 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದಲ್ಲಿ ತೇಜಸ್ವಿನಿ ಶೇಖರ್, ತಿಲಕ್, ಕಡ್ಡಿಪುಡಿ ಚಂದ್ರು, ರಾಜೇಶ್ ನಟರಂಗ, ಗೋವಿಂದೇ ಗೌಡ, ನಿರಂಜನ್ ದೇಶಪಾಂಡೆ ಸೇರಿದಂತೆ ಅನೇಕರು ನಟಿಸಿದ್ದಾರೆ.
ಈ ಚಿತ್ರಕ್ಕೆ ಅವಿನಾಶ್ ಸಂಗೀತ, ಸುನೀತ್ ಹಲಗೇರಿ ಛಾಯಾಗ್ರಹಣವಿದೆ. ವಿಶ್ವವಿಖ್ಯಾತ ಜೋಗ್ ಜಲಪಾತದ ಸುತ್ತಮುತ್ತಲಿನ ಕಾಡುಗಳಲ್ಲಿ, ಮಲೆನಾಡ ಸೊಬಗಿನ ಜೊತೆ ಒಂದು ಸಂಗೀತಮಯವಾದ ಥ್ರಿಲ್ಲರ್ ಅನುಭವವನ್ನು ಜೋಗ್ 101 ಚಿತ್ರ ಕಟ್ಟಿಕೊಡುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.