ಟೀಸರ್ ನಲ್ಲಿ ‘ವಿಷ್ಣುಪ್ರಿಯ’ ಲವ್ ಸ್ಟೋರಿ
Team Udayavani, Apr 10, 2023, 5:12 PM IST
ನವನಟ ಶ್ರೇಯಸ್ ಅಭಿನಯದ “ವಿಷ್ಣುಪ್ರಿಯ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರವನ್ನು ಕೆ.ಮಂಜು ನಿರ್ಮಿಸಿದ್ದು, ವಿ.ಕೆ. ಪ್ರಕಾಶ್ ನಿರ್ದೇಶಿಸಿದ್ದಾರೆ. “ಕಣ್ಸನ್ನೆ ಹುಡುಗಿ’ ಪ್ರಿಯಾ ವಾರಿಯರ್ ಈ ಸಿನಿಮಾದ ನಾಯಕಿ.
ಚಿತ್ರದ ಬಗ್ಗೆ ಮಾತನಾಡುವ ನಿರ್ಮಾಪಕ ಕೆ.ಮಂಜು, “ಪಡ್ಡೆಹುಲಿ ನಂತರ ಒಳ್ಳೆ ಕಥೆಗಾಗಿ ಹುಡುಕುತ್ತಿದೆ. ರೀಮೇಕ್ ಮಾಡಲು ನನ್ನ ಮಗ ಒಪ್ಪಲಿಲ್ಲ. ಒಳ್ಳೆಯ ಕಥೆಯಿದ್ದರೆ ತನ್ನಿ ಅಂತ ಅನೌನ್ಸ್ ಮಾಡಿದೆ. ಆಗ 65 ಕಥೆಗಳು ಬಂದವು. ಅದರಲ್ಲಿ ಧಾರವಾಡದ ಸಿಂಧುಶ್ರೀ ಅವರ ಕಥೆ ತುಂಬಾ ಚೆನ್ನಾಗಿತ್ತು.ಅದರ ಒಂದು ಲೈನ್ ತಗೊಂಡು ಈ ಸ್ಕ್ರಿಪ್ಟ್ ಮಾಡಿದ್ದೇವೆ. ವಿಕೆ ಪ್ರಕಾಶ್, ಗೋಪಿಸುಂದರ್ ಅವರಂಥ ತಂತ್ರಜ್ಞರನ್ನು ಒಪ್ಪಿಸಿದೆ. ನಾಗೇಂದ್ರ ಪ್ರಸಾದ್ ಒಳ್ಳೆ ಸಾಹಿತ್ಯ ಕೊಟ್ಟಿದ್ದಾರೆ.
ಮೊದಲು ಚಿತ್ರೀಕರಿಸಿದ ಕ್ಲೈಮ್ಯಾಕ್ಸ್ ತೃಪ್ತಿಯಾಗಲಿಲ್ಲ. ಹಾಗಾಗಿ ಅದನ್ನು ಮತ್ತೆ ರೀಶೂಟ್ ಮಾಡಿದ್ದೇವೆ. ಜೀವನದಲ್ಲಿ ಪ್ರೀತಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ’ ಎನ್ನುತ್ತಾರೆ.
ನಾಯಕ ಶ್ರೇಯಸ್ಗೆ ಒಂದೊಳ್ಳೆಯ ಸಿನಿಮಾದಲ್ಲಿ ನಟಿಸಿದ ಖುಷಿ ಇದೆ. ಜೊತೆಗೆ ಸಿನಿಮಾ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಬೇಸರವಿದೆ. ಹಾಗಂತ ಜಗಳವಾಡುವಂತಿಲ್ಲ. ಏಕೆಂದರೆ ಸಿನಿಮಾ ನಿರ್ಮಾಣ ಮಾಡಿದ್ದು ಶ್ರೇಯಸ್ ತಂದೆ ಮಂಜು. ಸಿನಿಮಾ ಬಗ್ಗೆ ಮಾತನಾಡುವ ಶ್ರೇಯಸ್, “90ರ ದಶಕದ ಲವ್ ಸ್ಟೋರಿ ಇರುವ ಈ ಚಿತ್ರದಲ್ಲಿ ಫ್ಯಾಮಿಲಿ ವ್ಯಾಲ್ಯೂಸ್ಗೆ ಹೆಚ್ಚಿನ ಮಹತ್ವವಿದೆ. ವಿಷ್ಣು ಒಬ್ಬ ಸಿಂಪಲ್ ಹುಡುಗ. ಪ್ರೀತಿಗಾಗಿ ಏನು ಬೇಕಾದರೂ ಮಾಡಲು ಸಿದ್ಧವಿರುವಂತಹ ಪ್ರೇಮಿ. ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇಂತಹ ಒಳ್ಳೆ ಪ್ರಯತ್ನಗಳು ಗೆದ್ದರೆ ಉಳಿದವರಿಗೆ ಪ್ರೇರಣೆಯಾಗುತ್ತದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?
Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Sandalwood; ಟ್ರೆಂಡ್ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…