“ಆ್ಯಕ್ಟ್ 1978’ನಲ್ಲಿ ಯಜ್ಞಾ ಶೆಟ್ಟಿ

Team Udayavani, Nov 6, 2019, 5:00 AM IST

ಕನ್ನಡದಲ್ಲಿ “ಹರಿವು’ ಹಾಗು “ನಾತಿಚರಾಮಿ’ ಸಿನಿಮಾಗಳ ಮೂಲಕ ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಮಂಸೋರೆ, ಈಗ ಸದ್ದಿಲ್ಲದೆಯೇ ಸಿನಿಮಾವೊಂದರ ಚಿತ್ರೀಕರಣ ಮುಗಿಸಿದ್ದಾರೆ. ಆ ಚಿತ್ರಕ್ಕೆ “ಆ್ಯಕ್ಟ್ 1978′ ಎಂದು ಹೆಸರಿಡಲಾಗಿದೆ. ಈ ಚಿತ್ರದಲ್ಲಿ ಯಜ್ಞಾಶೆಟ್ಟಿ ನಾಯಕಿ. ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಆ ಫ‌ಸ್ಟ್‌ಲುಕ್‌ ನೋಡಿದವರಿಗೆ ಒಂದು ಪ್ರಶ್ನೆ ಕಾಡುತ್ತೆ.

ಅದು ಟೆರರಿಸ್ಟ್‌ಗೆ ಸಂಬಂಧಿಸಿದ ಕಥೆ ಇರಬಹುದಾ ಎಂಬುದು ಆ ಪ್ರಶ್ನೆ. ಕಾರಣ, ಚಿತ್ರದ ಫ‌ಸ್ಟ್‌ಲುಕ್‌ನಲ್ಲಿ ಯಜ್ಞಾ ಶೆಟ್ಟಿ ಅವರ ದೇಹಕ್ಕೆ ಬಾಂಬ್‌ ಕಟ್ಟಲಾಗಿದೆ. ಗರ್ಭಿಣಿಯಂತೆ ಕಾಣುವ ಆ ಪೋಸ್ಟರ್‌ ಸದ್ಯದ ಮಟ್ಟಿಗೆ ಕುತೂಹಲ ಕೆರಳಿಸಿರುವುದಂತೂ ನಿಜ. ಈ ಹಿಂದೆ ಮಾಡಿದ ಎರಡೂ ಚಿತ್ರಗಳಲ್ಲಿ ನಿರ್ದೇಶಕ ಮಂಸೋರೆ ಅವರು ಮಾನವೀಯ ಮೌಲ್ಯ ಹಾಗೂ ಸಂಬಂಧಗಳ ಕುರಿತು ಕಥೆ ಹೇಳಿದ್ದರು.

ಆದರೆ, “ಆ್ಯಕ್ಟ್ 1978′ ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಇದೊಂದು ಪಕ್ಕಾ ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ ಎಂಬ ಸೂಚನೆ ನೀಡುತ್ತಿದೆ. ಇದೇ ಮೊದಲ ಸಲ ಮಂಸೋರೆ ಅವರು ಬೇರೆ ರೀತಿಯ ಚಿತ್ರಕ್ಕೆ ಕೈ ಹಾಕಿದ್ದಾರೆ. ಚಿತ್ರದಲ್ಲಿ ಶರಣ್ಯ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ದೇವರಾಜ್‌ ಆರ್‌. ಚಿತ್ರವನ್ನು ನಿರ್ಮಿಸಿದ್ದಾರೆ. ದಯಾನಂದ್‌ ಮತ್ತು ವೀರು ಮಲ್ಲಣ್ಣ ಅವರು ನಿರ್ದೇಶಕರ ಜೊತೆ ಸೇರಿ ಚಿತ್ರಕಥೆ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ