ಯೋಗಿಗೆ ಟೈಟಲ್‌ ಯೋಗ

Team Udayavani, Mar 12, 2018, 11:18 AM IST

ಅಂತೂ ದ್ವಾರಕೀಶ್‌ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರಕ್ಕೆ ಹೆಸರು ಸಿಕ್ಕಿದೆ. ಚಿತ್ರತಂಡವು “ಅಮ್ಮಾ ಐ ಲವ್‌ ಯೂ’ ಎಂಬ ಟೈಟಲ್‌ ಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮನವಿ ಸಲ್ಲಿಸಿತ್ತು. ಈಗ ಮಂಡಳಿಯು ಚಿತ್ರತಂಡಕ್ಕೆ ಆ ಹೆಸರು ನೀಡುವ ಮೂಲಕ ಪ್ರಕರಣಕ್ಕೆ ಇತಿಶ್ರೀ ಹಾಡಿದೆ.

“ಅಮ್ಮಾ ಐ ಲವ್‌ ಯೂ’ ಎಂಬ ಹೆಸರಿನಲ್ಲೇ ಚಿತ್ರದ ಚಿತ್ರೀಕರಣವಾಗಿದ್ದರೂ ಮತ್ತು ಅದೇ ಹೆಸರಿನಲ್ಲಿ ಚಿತ್ರವನ್ನು ಬಿಡುಗಡೆ ಮಾಡಬೇಕೆಂದು ಚಿತ್ರತಂಡದವರು ಹೊರಟಿದ್ದರೂ, ಚಿತ್ರತಂಡದವರಿಗೆ ಟೈಟಲ್‌ ಸಿಕ್ಕಿರಲಿಲ್ಲ. ಇನ್ನೂ ಹೆಸರು ಸಿಗದ ಕಾರಣ, ಪ್ರಚಾರವನ್ನೂ ಮಾಡುವಂತಿರಲಿಲ್ಲ. ಇಷ್ಟಕ್ಕೂ ಯಾಕೆ ಟೈಟಲ್‌ ಸಿಗಲಿಲ್ಲ ಎಂದರೆ ಅದಕ್ಕೆ ಕಾರಣವೂ ಇದೆ.

ಅದೇನೆಂದರೆ, ವಾಣಿಜ್ಯ ಮಂಡಳಿಯಲ್ಲಿ “ಅಮ್ಮ’ ಎಂಬ ಹೆಸರು ಬೇರೆ ನಿರ್ಮಾಪಕರ ಹೆಸರಿನಲ್ಲಿ ದಾಖಲಾಗಿತ್ತು. ಹಾಗಾಗಿ ಸ್ವಲ್ಪ ಗೊಂದಲವಾಗಿ ಚಿತ್ರದ ಹೆಸರು ಸಿಕ್ಕಿರಲಿಲ್ಲ. ಈಗ ಆ ಟೈಟಲ್‌ನ ಅವಧಿ ಮುಗಿದಿರುವುದರಿಂದ, ವಾಣಿಜ್ಯ ಮಂಡಳಿಯು ದ್ವಾರಕೀಶ್‌ ಚಿತ್ರ ಅವರಿಗೆ “ಅಮ್ಮಾ ಐ ಲವ್‌ ಯೂ’ ಹೆಸರನ್ನು ಕೊಟ್ಟಿದೆ.

ಈಗ ಹೆಸರು ಸಿಕ್ಕಿರುವುದರಿಂದ, ಚಿತ್ರದ ಪ್ರಚಾರವನ್ನು ಆದಷ್ಟು ಬೇಗ ಶುರು ಮಾಡಿ, ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ ಯೋಗಿ ದ್ವಾರಕೀಶ್‌. ಅಂದ ಹಾಗೆ, “ಅಮ್ಮಾ ಐ ಲವ್‌ ಯೂ’ ಚಿತ್ರವನ್ನು ಕೆ.ಎಂ. ಚೈತನ್ಯ ನಿರ್ದೇಶಿಸಿದ್ದು, ಚಿರಂಜೀವಿ ಸರ್ಜಾ, ನಿಶ್ವಿ‌ಕಾ ನಾಯ್ಡು, ಸಿತಾರಾ ಮುಂತಾದವರು ನಟಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಾಜಿ ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿ ಪುತ್ರ ನಟ ಕಂ ರಾಜಕಾರಣಿ ನಿಖಿಲ್‌ ಕುಮಾರ್‌ ಇಂದು (ಜ. 22) ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಮೂವತ್ತನೇ ವರ್ಷಕ್ಕೆ...

  • "ಆ ದಿನಗಳು' ಖ್ಯಾತಿಯ ಚೇತನ್‌ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಚಿತ್ರರಂಗದ ಬಹುತೇಕರಿಗೆ ಗೊತ್ತಿದೆ. ಆದರೆ, ಯಾವಾಗ ಎಂಬುದು ಗೊತ್ತಿರಲಿಲ್ಲ. ಅವರ ಮದುವೆ...

  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪ್ರಜ್ವಲ್‌ ದೇವರಾಜ್‌ ಅಭಿನಯದ "ಜಂಟಲ್‌ಮನ್‌' ಚಿತ್ರ ಜನವರಿ 31 ರಂದು ತೆರೆಕಾಣಬೇಕಿತ್ತು. ಆದರೆ, ಈಗ ಕಾರಣಾಂತರಗಳಿಂದ ಚಿತ್ರದ...

  • ಮೈಸೂರಿನ ಹೂಟಗಳ್ಳಿ ಹೊರವಲಯದ "ಒಡನಾಡಿ ಕೇಂದ್ರ'ದಲ್ಲಿ ಇತ್ತೀಚೆಗೆ ರಘು ಎಸ್‌.ಪಿ. ನಿರ್ದೇಶನವಿರುವ "ಗಿಫ್ಟ್ಬಾಕ್ಸ್‌' ಚಿತ್ರದ ಲಿರಿಕಲ್‌ ವೀಡಿಯೋ ಹಾಡನ್ನು ಅಲ್ಲಿನ...

  • ನಟ ಕಿಚ್ಚ ಸುದೀಪ್‌ ಅಭಿನಯಕ್ಕೆ ಈಗ ಮತ್ತೊಂದು ಪ್ರತಿಷ್ಠಿತ ಅಂತರಾಷ್ಟ್ರೀಯ ಪ್ರಶಸ್ತಿ ಒಲಿದು ಬಂದಿದೆ. 2020ನೇ ಸಾಲಿನ "ದಾದಾ ಸಾಹೇಬ್‌ ಫಾಲ್ಕೆ ಇಂಟರ್‌ ನ್ಯಾಷನಲ್‌...

ಹೊಸ ಸೇರ್ಪಡೆ