Udayavni Special

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

ಭಾಷೆಗಳ ಗಡಿಗಳನ್ನೂ ಮೀರಿ ಎಲ್ಲ ಭಾಷಿಕರೂ ಈ ಹಾಡು ಕೇಳಿ, ಹಾಡಿಗೆ ಹೆಜ್ಜೆಹಾಕಿ ಸಂಭ್ರಮಿಸುವಂತೆ ಮಾಡಿತ್ತು.

Team Udayavani, Nov 24, 2020, 5:34 PM IST

“ಬುಟ್ಟ ಬೊಮ್ಮ’ ಮತ್ತೆ ಟ್ರೆಂಡಿಂಗ್‌; ಟಾಲಿವುಡ್ ನಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ

ಹೈದರಾಬಾದ್‌: ಹೊಸ ಚಿತ್ರ ಬಿಡುಗಡೆ, ಟೀಸರ್‌, ಹಾಡು, ಪೋಸ್ಟರ್‌ ಬಿಡುಗಡೆ, ನಟ ನಟಿಯರ ಗಾಸಿಪ್‌, ಹೀಗೆ ಒಂದಿಲ್ಲೊಂದು ವಿಷಯಕ್ಕೆ ಸದಾ ಸುದ್ದಿಯಲ್ಲಿರುವಂತ ಕ್ಷೇತ್ರ ಸಿನೆಮಾ ಕ್ಷೇತ್ರ. ಇಲ್ಲಿ ದಿನವೂ ಹೊಸದೊಂದು ವಿಶೇಷ ಇರುತ್ತದೆ. ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳು ನಿರ್ಮಾಣವಾಗುತ್ತವೆ.

ಹೀಗೆ ಸದ್ಯಕ್ಕೆ ಟ್ರೆಂಡಿಂಗ್‌ ಆಗುತ್ತಿರುವುದು ಬುಟ್ಟ ಬೊಮ್ಮ ಹಾಡು. ಇದೇ ವರ್ಷದ ಜನವರಿ ತಿಂಗಳಿನಲ್ಲಿ ಬಿಡುಗಡೆಯಾದ “ಅಲಾ ವೈಕುಂಠಪುರ್ರಮುಲೊ’ ಚಿತ್ರದ ಹಾಡು ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು. ಕೆಲ ಕಾಲ ಸಂಗೀತ ಪ್ರಿಯರಿಗೆ ಇದು ತುಂಬಾ ಇಷ್ಟವಾಗಿತ್ತಲ್ಲದೇ ಭಾಷೆಗಳ ಗಡಿಗಳನ್ನೂ ಮೀರಿ ಎಲ್ಲ ಭಾಷಿಕರೂ ಈ ಹಾಡು ಕೇಳಿ, ಹಾಡಿಗೆ ಹೆಜ್ಜೆಹಾಕಿ ಸಂಭ್ರಮಿಸುವಂತೆ ಮಾಡಿತ್ತು.

ಇತ್ತೀಚೆಗೆ ಸನ್‌ ರೈಸರ್ ಹೈದರಾಬಾದ್‌ ತಂಡದ ಕಪ್ತಾನ, ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಆಟಗಾರ ಡೆವಿಡ್‌ ವಾರ್ನರ್‌ ಪತ್ನಿ ಮತ್ತು ಮಗುವಿನೊಂದಿಗೆ ಈ ಹಾಡಿಗೆ ನೃತ್ಯ ಮಾಡಿದ್ದರು. ನೃತ್ಯದ ವೀಡಿಯೋ ತುಣುಕನ್ನು ಸಾಮಾಜಿಕ ಜಾಲ ತಾಣದಲ್ಲಿ ಹಂಚಿಕೊಂಡು ಅಲ್ಲು ಅರ್ಜುನ್‌ಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿದ್ದರು. ಈ ಮೂಲಕ ವಿದೇಶಿಗರನ್ನೂ ಆಕರ್ಷಿಸಿ ಜಾಗತಿಕವಾಗಿ ಈ ಹಾಡು ಜನಪ್ರಿಯವಾಗಿತ್ತು.

ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದ ಬುಟ್ಟ ಬೊಮ್ಮ ಹಾಡು ಈಗ ಮತ್ತೆ ಟ್ವೀಟರ್‌ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದೆ. ಇದಕ್ಕೆ ಕಾರಣ ಈ ಹಾಡು ಹೊಸ ಮೈಲುಗಲ್ಲೊಂದನ್ನು ಸೃಷ್ಟಿಸಿರುವುದು. ಅದೇನೆಂದರೆ ಯೂಟ್ಯೂಬ್‌ನಲ್ಲಿ 450 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದು ಮತ್ತು 2.99 ಮಿಲಿಯನ್‌ ಗೂ ಹೆಚ್ಚು ಲೈಕ್ಸ್‌ ಈ ಹಾಡು ಪಡೆದುಕೊಂಡಿರುವುದು. ಅಲ್ಲದೇ ಇದುವರೆಗೆ ಇದ್ದ ಎಲ್ಲ ದಾಖಲೆಗಳನ್ನು ಮುರಿದು ಈಗ ಅತೀ ಹೆಚ್ಚು ವೀಕ್ಷಣೆಯಾದ ತೆಲುಗು ಚಿತ್ರದ ಹಾಡು ಎಂಬ ಖ್ಯಾತಿಗೆ ಪಾತ್ರವಾಗಿದೆ.

ಎಸ್‌. ತಮನ್‌ ನಿರ್ದೇಶನದಲ್ಲಿ ಖ್ಯಾತ ಗಾಯಕ ಅರ್ಮಾನ್‌ ಮಲಿಕ್‌ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಗೀತೆ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿವೆ. ಆದರೂ ಯುಟ್ಯೂಬ್‌ನಲ್ಲಿ ಇದಕ್ಕೆ ವೀಕ್ಷಕರ ಕೊರತೆ ಉಂಟಾಗಿಲ್ಲ. ಎಸ್‌. ತಮನ್‌, ಅಲ್ಲು ಅರ್ಜುನ್‌, ಅರ್ಮಾನ್‌ ಮಲಿಕ್‌ ಸೆರಿದಂತೆ ಇತರರು ಟ್ವೀಟ್‌ ಮಾಡುವ ಮೂಲಕ ಹಾಡು ಸೃಷ್ಟಿಸಿರುವ ಹೊಸ ದಾಖಲೆಯ ಖುಷಿಯನ್ನು ಹಂಚಿಕೊಂಡಿದ್ದು, ಟ್ವೀಟರ್‌ನಲ್ಲಿ ಟ್ರೆಂಡಿಂಗ್ ‌ ಆಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

tdy-2

ಮುಂಬೈ : ಬಾಯ್‌ಫ್ರೆಂಡ್‌ ಜತೆ ಪತ್ನಿ ಪರಾರಿ: ಪತಿ ದೂರು

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ಚಿಕ್ಕಬಳ್ಳಾಪುರ : ದ್ವಿತೀಯ ಹಂತದ ಕೋವಿಡ್ ಲಸಿಕೆ ಅಭಿಯಾನ ಆರಂಭ- 2358 ಫಲಾನುಭವಿಗಳಿಗೆ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

ರಸ್ತೆ ನಿರ್ಮಾಣ ವಿಚಾರ : ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಮಧ್ಯೆ ಘರ್ಷಣೆ : ಹಲವರಿಗೆ ಗಾಯ

tdy-1

ರಕ್ಷಣಾ ‌ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ .ಜ.20 ರಂದು ಕಾರವಾರ ನೌಕಾನೆಲೆಗೆ ಭೇಟಿ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಹುದ್ದೆ ನೇಮಕಾತಿಗೆ ವ್ಯಕ್ತಿಯಿಂದ ಹಣ ಸ್ವೀಕರಿಸುತ್ತಿದ್ದ ಮಹಿಳಾ ಅಧಿಕಾರಿ ಎಸಿಬಿ ಬಲೆಗೆ

ಭೀಕರ ರಸ್ತೆ ಅಪಘಾತ ; ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಸಾವು

ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಭೀಕರ ಅಪಘಾತ : ಮೂವರು ಸ್ಥಳದಲ್ಲೇ ಸಾವು

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?

ಮುಂದಿನ ಐಪಿಎಲ್‌ನಲ್ಲಿ ಒಂದು ತಂಡ ಮಾತ್ರ ಹೆಚ್ಚಳ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಿವಮೊಗ್ಗದಲ್ಲಿ ವೀಕೆಂಡ್ ಕಳೆದ ಜಾಕ್ವೇಲಿನ್‌ ಫ‌ರ್ನಾಂಡೀಸ್‌

ಶಿವಮೊಗ್ಗದಲ್ಲಿ ವೀಕೆಂಡ್ ಕಳೆದ ಜಾಕ್ವೇಲಿನ್‌ ಫ‌ರ್ನಾಂಡೀಸ್‌

ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ

ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ!

gulam

ಖ್ಯಾತ ಹಿಂದೂಸ್ತಾನಿ ಗಾಯಕ, ಪದ್ಮವಿಭೂಷಣ ಉಸ್ತಾದ್ ಗುಲಾಂ ಮುಸ್ತಾಫಾಖಾನ್ ವಿಧಿವಶ

00

51ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮೊದಲ ಬಾರಿಗೆ ಕನ್ನಡದ ನಟನಿಗೆ ಉದ್ಘಾಟನಾ ಗೌರವ

SALAR-5

ಸಲಾರ್‌ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ

MUST WATCH

udayavani youtube

KBCಯಲ್ಲಿ 12.5 ಲಕ್ಷ ಗೆದ್ದು ಬಡ ಮಕ್ಕಳ ಆಶಾಕಿರಣವಾದ ರವಿ ಕಟಪಾಡಿ | Udayavani

udayavani youtube

Whatsapp ಅನ್ನು ಓವರ್ ಟೇಕ್ ಮಾಡಿದ ಸಿಗ್ನಲ್!!??

udayavani youtube

ದ.ಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ವಿತರಣೆ ಅಭಿಯಾನಕ್ಕೆ ಕೋಟ ಶ್ರೀನಿವಾಸ ಪೂಜಾರಿ ಚಾಲನೆ

udayavani youtube

ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಅಭಿಯಾನ; ಪ್ರಥಮ ಡೋಸ್ ನೀಡಿ ಚಾಲನೆ

udayavani youtube

ಉಡುಪಿಯಲ್ಲಿ ಕೋರೋನಾ ಲಸಿಕೆ ಪಡೆದ ಮೊದಲ ವ್ಯಕ್ತಿಯ ಮಾತು

ಹೊಸ ಸೇರ್ಪಡೆ

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

ಕಾರ್ಕಳ ಕಜೆ ಅಕ್ಕಿ, ಬಿಳಿ ಬೆಂಡೆ ಬ್ರ್ಯಾಂಡಿಂಗ್‌ ಬಿಡುಗಡೆ

ಕುಂದಾಪುರ ಕೋಡಿ ಸೇತುವೆ ಕಾಮಗಾರಿ ವಾರದಲ್ಲಿ ಆರಂಭ

ಕುಂದಾಪುರ ಕೋಡಿ ಸೇತುವೆ ಕಾಮಗಾರಿ ವಾರದಲ್ಲಿ ಆರಂಭ

ಡ್ರೋನ್‌ ಬಳಕೆ: ಕಮಿಷನರ್‌ ಎಚ್ಚರಿಕೆ

ಡ್ರೋನ್‌ ಬಳಕೆ: ಕಮಿಷನರ್‌ ಎಚ್ಚರಿಕೆ

‌ಕರಾವಳಿಯಲ್ಲಿ ಮತ್ತೆ  ಸ್ಯಾಟಲೈಟ್‌ ಫೋನ್‌ ಕರೆ?

‌ಕರಾವಳಿಯಲ್ಲಿ ಮತ್ತೆ ಸ್ಯಾಟಲೈಟ್‌ ಫೋನ್‌ ಕರೆ?

ಗಾಂಧಿ, ಪೇಜಾವರ ಶ್ರೀಗಳ ಕನಸು ನನಸು: ಬಿಎಸ್‌ವೈ

ಗಾಂಧಿ, ಪೇಜಾವರ ಶ್ರೀಗಳ ಕನಸು ನನಸು: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.