“ಆರ್ಯನ್ ಖಾನ್ ಒಳ್ಳೆಯ ಹುಡುಗ” : ಸುಸೇನ್ ಖಾನ್
Team Udayavani, Oct 5, 2021, 1:30 PM IST
ಮುಂಬೈ : ಡ್ರಗ್ಸ್ ಸೇವನೆ ಆರೋಪದಲ್ಲಿ ಬಂಧಿತರಾಗಿರುವ ಆರ್ಯನ್ ಖಾನ್ ಒಳ್ಳೆಯ ಹುಡುಗ. ಇಂತಹ ಸಂಕಷ್ಟ ಸಮಯದಲ್ಲಿ ನಾನು ಶಾರೂಖ್ ಖಾನ್ ಹಾಗೂ ಗೌರಿ ಖಾನ್ ಜೊತೆಯಾಗಿ ನಿಲ್ಲುತ್ತೇನೆ ಎಂದು ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಹೇಳಿದ್ದಾರೆ.
ಸುಸೇನ್ ಖಾನ್, ಆರ್ಯನ್ ಖಾನ್ ಬಂಧನದ ವಿಚಾರವಾಗಿ ತಮ್ಮ ಅಭಿಪ್ರಾಯವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಡ್ರಗ್ ಕೇಸ್ನ ವಿಚಾರದಲ್ಲಿ ಬಾಲಿವುಡ್ ನ್ನು ಟಾರ್ಗೆಟ್ ಮಾಡಲಾಗ್ತಿದೆ ಎಂದು ಸುಸೇನ್ ಹೇಳಿದ್ದಾರೆ.
ಪತ್ರಕರ್ತೆ ಶೋಭಾ ಡೇರ ವರದಿಗೆ ಇನ್ಸ್ಟಾಗ್ರಾಂನಲ್ಲಿ ಪ್ರತಿಕ್ರಿಯಿಸಿರುವ ಅವರು, ನನ್ನ ಪ್ರಕಾರ ಇದು ಆರ್ಯನ್ ಖಾನ್ ಬಗ್ಗೆ ಅಲ್ಲ. ದುರಾದೃಷ್ಟವಶಾತ್ ಆತ ತಪ್ಪಾದ ಸಮಯದಲ್ಲಿ, ತಪ್ಪಾದ ಸ್ಥಳದಲ್ಲಿ ಇದ್ದನು. ಈ ಪರಿಸ್ಥಿತಿಯನ್ನು ನಾವು ಒಂದು ಉದಾಹರಣೆ ಎಂಬಂತೆ ನೋಡಬಹುದಾಗಿದೆ. ಡ್ರಗ್ ಪ್ರಕರಣದಲ್ಲಿ ಬಾಲಿವುಡ್ ನ್ನು ಬಲಿಪಶು ಮಾಡಲಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಇದೊಂದು ದುಃಖಕರ ಹಾಗೂ ಅನ್ಯಾಯದ ಸಂಗತಿಯಾಗಿದೆ. ಏಕೆಂದರೆ ಆರ್ಯನ್ ಒಳ್ಳೆಯ ಹುಡುಗ. ನಾನು ಶಾರೂಕ್ ಹಾಗೂ ಗೌರಿ ಖಾನ್ ಪರವಾಗಿದ್ದೇನೆ ಎಂದು ಬರೆದಿದ್ದಾರೆ.
ಈ ಮೊದಲು ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡ ಇದೇ ಮಾತು ಹೇಳಿದ್ದರು. ಆರ್ಯನ್ ಖಾನ್ ಚಿಕ್ಕ ಹುಡುಗ, ಆತನನ್ನು ಉಸಿರಾಡೋಕೆ ಬಿಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದರು. ಎನ್‍ಸಿಬಿಯಂತಹ ದಾಳಿ ನಡೆದ ಸಂದರ್ಭದಲ್ಲಿ ಅಲ್ಲಿದ್ದ ಎಲ್ಲರನ್ನೂ ಅಧಿಕಾರಿಗಳು ವಶಕ್ಕೆ ಪಡೆಯುತ್ತಾರೆ. ನಂತರ ವಿಚಾರಣೆ ನಡೆಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂದಿದ್ದರು.
ಆರ್ಯನ್ ಖಾನ್ ಬಂಧನವಾಗುತ್ತಿದ್ದಂತೆ ಬಾಲಿವುಡ್ ಮತ್ತೋರ್ವ ನಟ ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಮನೆಗೆ ತೆರಳಿ ಮಾತುಕತೆ ನಡೆಸಿದರು. ಇವರಷ್ಟೇ ಅಲ್ಲದೆ ಪೂಜಾ ಭಟ್, ಹನ್ಸಲ್ ಮೆಹ್ತಾ ಸೇರಿದಂತೆ ವಿವಿಧ ತಾರೆಯರು ಶಾರೂಖ್ ಖಾನ್ ಹಾಗೂ ಗೌರಿ ಖಾನ್ಗೆ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಇನ್ನು ಡ್ರಗ್ ಪ್ರಕರಣದಲ್ಲಿ ಭಾನುವಾರ ಆರ್ಯನ್ ಖಾನ್ ರನ್ನು ಬಂಧಿಸಿರುವ ಎನ್ಸಿಬಿ ಅಕ್ಟೋಬರ್ 7ರವರೆಗೆ ವಶಕ್ಕೆ ಪಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹಿಂದಿ ಕಿಚ್ಚಿಗೆ ಅರ್ಜುನ್ ರಾಮ್ಪಾಲ್ ತುಪ್ಪ
ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ