BBH17: ಹಿಂದಿ ಬಿಗ್ ಬಾಸ್ ಟ್ರೋಫಿ ಗೆದ್ದ ಮುನಾವರ್ ಫಾರೂಕಿ
Team Udayavani, Jan 29, 2024, 1:15 AM IST
ಮುಂಬಯಿ: ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ಸೀಸನ್ 17 ರ ಫಿನಾಲೆ ಅದ್ಧೂರಿಯಾಗಿ ನೆರವೇರಿದೆ.
ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ದಂಪತಿಗಳು ಸಹಿತ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ನೂರು ದಿನಗಳ ಹೋರಾಟ, ಕಿರುಚಾಟ ಹಾಗೂ ಕೆಲವರ ತಾಳ್ಮೆಯ ಆಟದಿಂದ ಕಾರ್ಯಕ್ರಮ ಗಮನ ಸೆಳೆದಿತ್ತು.
ಫಿನಾಲೆಯಲ್ಲಿ ಅಂತಿಮವಾಗಿ ಐದು ಮಂದಿ ಇದ್ದರು. ಮುನಾವರ್ ಫಾರೂಕಿ, ಅಂಕಿತಾ ಲೋಖಂಡೆ, ಮನ್ನಾರಾ ಚೋಪ್ರಾ, ಅಭಿಷೇಕ್ ಕುಮಾರ್ ಮತ್ತು ಅರುಣ್ ಮಾಶೆಟ್ಟಾ ಫೈನಲಿಸ್ಟ್ ಆಗಿದ್ದರು. ಇವರಲ್ಲಿ ಒಬ್ಬೊಬ್ಬರು ಎಲಿಮಿನೇಟ್ ಆಗಿ, ಅಂತಿಮವಾಗಿ ಇಬ್ಬರು ಉಳಿದಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಬೆಂಬಲವನ್ನು ಪಡೆದಿರುವ ಮುನಾವರ್ ಫಾರೂಕಿ ಹಾಗೂ ವೀಕ್ಷಕರ ಮನಗೆದ್ದ ಅಭಿಷೇಕ್ ಕುಮಾರ್ ಅಂತಿಮವಾಗಿ ಟಾಪ್ 2 ನಲ್ಲಿ ಕಾಣಿಸಿಕೊಂಡಿದ್ದರು.
ಇದರಲ್ಲಿ ಬಿಗ್ ಬಾಸ್ ಟ್ರೋಫಿಯನ್ನು ಮುನಾವರ್ ಫಾರೂಕಿ ಅವರು ಮುಡಿಗೇರಿಸಿಕೊಂಡಿದ್ದಾರೆ. ಅಭಿಷೇಕ್ ರನ್ನರ್ ಅಪ್ ಆಗಿದ್ದಾರೆ.
ತನ್ನ ವ್ಯಕ್ತಿತ್ವ ಹಾಗೂ ಹಾಸ್ಯ ಪ್ರಜ್ಞೆಯಿಂದ ಗಮನ ಸೆಳೆದಿರುವ ಮುನಾವರ್ ಫಾರೂಕಿ ಬಿಗ್ ಬಾಸ್ ಗೆದ್ದಿದ್ದು, 50 ಲಕ್ಷ ನಗದನ್ನು ಪಡೆದುಕೊಂಡಿದ್ದಾರೆ. ಇದರೊಂದಿಗೆ ಕಾರನ್ನು ಪಡೆದುಕೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಮುನಾವರ್ ಫಾರೂಕಿಯ ಮಾಜಿ ಗೆಳತಿ ಆಯೇಷಾ ಖಾನ್ ಬಂದಿದ್ದರು. ಈ ವೇಳೆ ಮುನಾವರ್ ಭಾವುಕರಾಗಿದ್ದರು. ಈ ಸಮಯದಲ್ಲಿ ಮುನಾವರ್ ಅವರ ತಾಳ್ಮೆ ಹಾಗೂ ಸಹನೆ ವೀಕ್ಷಕರ ಮನಗೆದ್ದಿತ್ತು.
ವೃತ್ತಿಯಲ್ಲಿ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿರುವ ಮುನಾವರ್, ಗಾಯಕ ಕೂಡ ಹೌದು. ಅವರು ಹಾಸ್ಯದಿಂದಲೇ ಜೈಲು ಸೇರಿ ಬಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ