ಒಂದೇ ದಿನ, ಒಂದೇ ಟೈಟಲ್‌ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್‌: ಏನಿದು ʼಜೈಲರ್ʼ ವಿವಾದ

ರಜಿನಿಕಾಂತ್‌ ʼಜೈಲರ್ʼ ಮಲಯಾಳಂ ʼಜೈಲರ್‌ʼ: ಕೋರ್ಟ್‌ ಮೆಟ್ಟಿಲಲ್ಲಿ ವಿವಾದ

Team Udayavani, Jul 27, 2023, 5:15 PM IST

ಒಂದೇ ದಿನ, ಒಂದೇ ಟೈಟಲ್‌ನಲ್ಲಿ ಎರಡು ಪ್ರತ್ಯೇಕ ಸಿನಿಮಾ ರಿಲೀಸ್‌: ಏನಿದು ʼಜೈಲರ್ʼ ವಿವಾದ

ಚೆನ್ನೈ: ಈ ವರ್ಷದ ಬಹುದೊಡ್ಡ ಸಿನಿಮಾಗಳಲ್ಲಿ ಒಂದಾಗಿರುವ ಸೂಪರ್‌ ಸ್ಟಾರ್‌ ರಜಿನಿಕಾಂತ್‌ ಅವರ ʼಜೈಲರ್‌ʼ ಅದ್ಧೂರಿಯಾಗಿ ಆಡಿಯೋ ರಿಲೀಸ್‌ ತಯಾರಿಯಲ್ಲಿ ನಿರತವಾಗಿದೆ. ಸಿನಿಮಾದ ಹಾಡುಗಳು ಈಗಾಗಲೇ ಸೂಪರ್‌ ಹಿಟ್‌ ಆಗಿವೆ.

ಇದುವರೆಗೆ ಪಾಸಿಟಿವ್‌ ಪ್ರಚಾರದಿಂದಲೇ ಸುದ್ದಿಯಾಗಿರುವ ರಜಿನಿಕಾಂತ್‌ ಅವರ ʼಜೈಲರ್‌ʼ ಈಗ ಟೈಟಲ್‌ ವಿವಾದಿಂದ ಸದ್ದು ಮಾಡುತ್ತಿದೆ. ಮಲಯಾಳಂ ನಿರ್ದೇಶಕ ಸಕ್ಕಿರ್ ಮದತಿಲ್ ಅವರ ʼಜೈಲರ್‌ʼ ಸಿನಿಮಾದೊಂದಿಗೆ ತಮಿಳಿನ ʼಜೈಲರ್‌ʼ ಸಿನಿಮಾ ಟೈಟಲ್‌ ವಿಚಾರವಾಗಿ ಚರ್ಚೆಯಾಗುತ್ತಿದೆ.

ವಿಶೇಷವೆಂದರೆ ಎರಡೂ ಸಿನಿಮಾದ ಟೈಟಲ್‌ ಒಂದೇ ಆಗಿರುವುದರೊಂದಿಗೆ ಸಿನಿಮಾಗಳು ಒಂದೇ ದಿನ, ಆಗಸ್ಟ್‌ 10 ರಂದೇ ರಿಲೀಸ್‌ ಆಗಲಿದೆ. ಮಲಯಾಳಂನಲ್ಲಿ ಬರುತ್ತಿರುವ ʼಜೈಲರ್‌ʼ ಸಿನಿಮಾದಲ್ಲಿ ಧ್ಯಾನ್ ಶ್ರೀನಿವಾಸನ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

ಟೈಟಲ್‌ ಬದಲಾವಣೆಗೆ ಮನವಿ ಮಾಡಿದ ಮಲಯಾಳಂ ನಿರ್ದೇಶಕ:

ಈ ಸಿನಿಮಾಕ್ಕಾಗಿ ನಾನು  5 ಕೋಟಿ ರೂ. ಹಾಕಿದ್ದೇನೆ. ಮನೆ ಮತ್ತು ಮಗಳ ಆಭರಣಗಳನ್ನು ಅಡವಿಟ್ಟಿದ್ದೇನೆ. ನನ್ನ ಕಾರನ್ನು ಕೂಡ ಮಾರಾಟ ಮಾಡಿದ್ದೇನೆ. ಇದಲ್ಲದೇ ಸಿನಿಮಾಕ್ಕಾಗಿ ಬ್ಯಾಂಕ್‌ ಹಾಗೂ ಹೊರಗಿನವರಿಂದ ಸಾಲ ಪಡೆದುಕೊಂಡಿದ್ದೇನೆ. ಬಡ್ಡಿದರ ಹೆಚ್ಚಳದಿಂದ ಮುಂದೆ ಲೋನ್‌ ಮರುಪಾವತಿಸಲು ಕಷ್ಟವಾಗಬಹುದು. ನನಗೆ ನನ್ನ ಕಷ್ಟವನ್ನು ರಜಿನಿಕಾಂತ್ ಅವರು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವ ಭರವಸೆಯಿದೆ. ಈ ಸಿನಿಮಾದ ಟೈಟಲ್‌ ಹಾಗೂ ಒಂದೇ ದಿನ ರಿಲೀಸ್‌ ಆಗುವುದರಿಂದ ಈ ಹಿಂದೆ ನನಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿತ್ತು ಎಂದು ನಿರ್ದೇಶಕ ಸಕ್ಕಿರ್ ಮದತಿಲ್‌ ಹೇಳಿ, ಮನವಿ ಮಾಡಿರುವುದಾಗಿ “ಸಿನಿಮಾ ವಿಕಟನ್” ವರದಿ ಮಾಡಿದೆ.

ಟೈಟಲ್‌ ವಿವಾದ:

ರಜಿನಿಕಾಂತ್‌ ಅವರ ʼಜೈಲರ್‌ʼ ಸಿನಿಮಾ ಅನೌನ್ಸ್‌ ಆಗುವ ಮೊದಲೇ , 2021 ರ ಆಗಸ್ಟ್‌ ನಲ್ಲಿ  ಕೇರಳ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್‌ಸಿಸಿ) ನಲ್ಲಿ ‘ಜೈಲರ್’ ಶೀರ್ಷಿಕೆಯನ್ನು ನೋಂದಾಯಿಸಿಕೊಂಡಿರುವುದಾಗಿ ಸಕ್ಕಿರ್‌ ಹೇಳುತ್ತಾರೆ. ಇದಲ್ಲದೇ ಸನ್‌ ಪಿಕ್ಚರ್ಸ್‌ ಅವರಿಗೆ ಇದರ ಬಗ್ಗೆ ವಿನಂತಿ ಮಾಡಿದ್ದೆ. ನಿಮ್ಮ ಸಿನಿಮಾವನ್ನು ಬೇರೆ ಟೈಟಲ್‌ ನಲ್ಲಿ ರಿಲೀಸ್‌ ಮಾಡಿ, ಇದರಿಂದ ಎರಡೂ ಸಿನಿಮಾಕ್ಕೂ ಹಾನಿಯಾಗುವುದಿಲ್ಲ ಎಂದು ನಿರ್ದೇಶಕ ಸಕ್ಕಿರ್‌ ಸನ್‌ ಪಿಕ್ಚರ್ಸ್‌ ಗೆ ಮನವಿ ಮಾಡಿದ್ದರು ಎಂದು ವರದಿ ತಿಳಿಸಿದೆ.

ಕೋರ್ಟ್‌ ಮೆಟ್ಟಿಲಲ್ಲಿ ʼಟೈಟಲ್‌ ವಿವಾದʼ:

ಸಕ್ಕಿರ್‌ ಅವರ ವಿನಂತಿಯನ್ನು ಒಪ್ಪದ ಸನ್‌ ಪಿಕ್ಚರ್ಸ್‌ ʼಜೈಲರ್‌ʼ ಟೈಟಲ್‌ ನ್ನೇ ಮುಂದುವರಿಸಿದ್ದಾರೆ. ಈ ವಿಚಾರವಾಗಿ ಮದ್ರಾಸ್‌ ಕೋರ್ಟ್‌ ಗೆ ಸನ್‌ ಪಿಕ್ಚರ್ಸ್‌ ತಲುಪಿದ್ದು, ಇದಕ್ಕೆ ಪ್ರತಿಯಾಗಿ ಮದತಿಲ್ ಅವರು ಕೂಡ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದರ ವಿಚಾರಣೆ ಆಗಸ್ಟ್ 2ಕ್ಕೆ ವಿಚಾರಣೆಯನ್ನು ನಡೆಯಲಿದೆ.

ಟಾಪ್ ನ್ಯೂಸ್

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

2-udupi

Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

1-siddu-a

Valmiki ನಿಗಮದ ಹಗರಣ; ಇ ಡಿ ನನ್ನನ್ನು ಅಕ್ರಮವಾಗಿ ಸಿಲುಕಿಸಲು ಬಯಸಿದೆ: ಸಿದ್ದರಾಮಯ್ಯ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

Union Budget 2024: ಪ್ರವಾಸಿ ಕೇಂದ್ರವಾಗಿ ನಳಂದ ವಿಶ್ವವಿದ್ಯಾಲಯ ಅಭಿವೃದ್ಧಿ

08

Tollywood: ಪ್ರಭಾಸ್‌ ʼಫೌಜಿʼಗೆ ಪಾಕಿಸ್ತಾನದ ಟಾಪ್‌ ನಟಿ ಎಂಟ್ರಿ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Divorce ಕಠಿಣ ಎನಿಸಿದರೂ ಸಂತೋಷವಾಗಿದ್ದೇನೆ: ಕಿರಣ್‌ ರಾವ್‌

Divorce ಕಠಿಣ ಎನಿಸಿದರೂ ಸಂತೋಷವಾಗಿದ್ದೇನೆ: ಕಿರಣ್‌ ರಾವ್‌

1-nati

Contact lenses ಧರಿಸಿದ ನಟಿಗೆ ಈಗ ಕಣ್ಣೇ ಕಾಣಿಸ್ತಿಲ್ಲ!

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?

ಅರ್ಜುನ್‌ ಜತೆ ಬ್ರೇಕಪ್‌ ಬಳಿಕ 50ರ ಹರೆಯದ ಮಲೈಕಾ ಬಾಳಲ್ಲಿ ʼಮಿಸ್ಟರಿ ಮ್ಯಾನ್‌ʼ ಎಂಟ್ರಿ?

1428

Viral: ಖ್ಯಾತ ನಟಿಯ ಬಾತ್‌ರೂಮ್‌ ವಿಡಿಯೋ ಲೀಕ್.. ನಟಿಯಿಂದಲೇ ವಿಡಿಯೋ ರೆಕಾರ್ಡ್?

B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್‌ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?

B’town: ವಿಚ್ಚೇದನ ಕುರಿತ ಪೋಸ್ಟ್‌ಗೆ ಲೈಕ್‌ ಕೊಟ್ಟ ಅಭಿಷೇಕ್ ಬಚ್ಚನ್; ಸಂಬಂಧದಲ್ಲಿ ಬಿರುಕು?

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-ddsds

Hubli; ಮಾದಕ ವಸ್ತು ಮಾರುತ್ತಿದ್ದ ರಾಜಸ್ಥಾನ ಮೂಲದ ಐವರ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

Hubballi: ದೇವಸ್ಥಾನದ ಧರ್ಮದರ್ಶಿ ಹತ್ಯೆ ಪ್ರಕರಣ: 24 ಗಂಟೆಯೊಳಗೆ ಹಂತಕನ ಬಂಧನ

2-udupi

Udupi:ಪ್ರವಾಸಿ ವಾಹನಗಳಿಗೆ ಜಿಪಿಎಸ್,ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಪ್ರತಿಭಟನೆ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

Union Budget 2024:  ಟಾಪ್‌ 500 ಕಂಪನಿಗಳಲ್ಲಿ 1ಕೋಟಿ ಯುವಕರಿಗೆ Internshipಗೆ ಅವಕಾಶ

1-mng

Mangaluru: ಆಯುಕ್ತರ ವಜಾಕ್ಕೆ ಒತ್ತಾಯಿಸಿ ಪಾಲಿಕೆಗೆ ಮುತ್ತಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.