ಬಾಲಿವುಡ್‍ಗೆ ಕನ್ನಡದ ಬಾದ್‍ ಷಾ | ಸಲ್ಲು ಭಾಯ್‍ಗೆ ಕಿಚ್ಚ ಸುದೀಪ್ ಆ್ಯಕ್ಷನ್ ಕಟ್  

Team Udayavani, Oct 12, 2021, 4:17 PM IST

dfgdsgr

ಬೆಂಗಳೂರು : ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಗೆ ಬಾಲಿವುಡ್ ಹೊಸದಲ್ಲ. ಈಗಾಗಲೇ ಅವರು ಸಾಕಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಮತ್ತೊಮ್ಮೆ ಹಿಂದಿ ಚಿತ್ರರಂಗದ ಅಂಗಳಕ್ಕೆ ಕಾಲಿಡಲಿದ್ದಾರೆ. ಹಾಗಂತಾ ಹೀರೋ ಅಥವಾ ವಿಲನ್ ಆಗಿ ಅಲ್ಲ…

ಹೌದು, ಆಡು ಮುಟ್ಟದ ಸೊಪ್ಪಿಲ್ಲ..ಕಿಚ್ಚ ಕಾಲಿಡದ ಚಿತ್ರರಂಗವಿಲ್ಲ ಎನ್ನುವುದು ಸುದೀಪ್ ಅಭಿಮಾನಿಗಳ ಮಾತು. ತಮ್ಮ ಅಭಿನಯದ ಮೂಲಕ ಸ್ಯಾಂಡಲ್ವುಡ್ ನಿಂದ ಹಾಲಿವುಡ್ ವರೆಗೂ ಹೆಸರು ಮಾಡಿರುವ ಸುದೀಪ ಇದೀಗ ಮತ್ತೊಂದು ಬಾರಿ ಬಾಲಿವುಡ್‍ಗೆ ಹಾರಲು ಸಜ್ಜಾಗಿದ್ದಾರೆ. ಹಾಗಂತಾ ಈ ಬಾರಿ ಅಭಿನಯಕ್ಕಾಗಿ ಹಿಂದಿ ಚಿತ್ರರಂಗದತ್ತ ಮುಖ ಮಾಡುತ್ತಿಲ್ಲ. ಬದಲಾಗಿ ನಿರ್ದೇಶಕರ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಲಿದ್ದಾರೆ.

ಮೈ ಆಟೋಗ್ರಾಫ್‌’ ಚಿತ್ರದ ಮುಖಾಂತರ ಚಂದನವನದಲ್ಲಿ ನಟನೆಯ ಜೊತೆ ನಿರ್ದೇಶನಕ್ಕೂ ಸೈ ಎಂದು ಗುರುತಿಸಿಕೊಂಡವರು ನಟ ಕಿಚ್ಚ ಸುದೀಪ್‌. ಇದಾದ ಬಳಿಕ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದ ‘ಜಸ್ಟ್‌ ಮಾತ್‌ ಮಾತಲ್ಲಿ’, ‘ನಂ.73 ಶಾಂತಿನಿವಾಸ’ ಹೀಗೆ ಹಲವು ಚಿತ್ರಗಳೂ ಹಿಟ್‌ ಆಗಿದ್ದವು. ಇದೀಗ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ ನಿರ್ದೇಶನ ಮಾಡಲು ಸುದೀಪ್‌ ಸಜ್ಜಾಗಿದ್ದಾರೆ. ಶೀಘ್ರದಲ್ಲೇ ಅವರನ್ನು ಭೇಟಿಯಾಗಿ ಕಥೆ ಹೇಳಲೂ ತಯಾರಿ ನಡೆಸಿದ್ದಾರೆ.

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಸುದೀಪ್‌, ‘ಈಗಾಗಲೇ ಒಂದು ಸ್ಕ್ರಿಪ್ಟ್‌ ಸಿದ್ಧಪಡಿಸಿದ್ದೇನೆ. ಅದು ಬಹಳ ಸೂಕ್ಷ್ಮವಾಗಿದೆ. ಇಡೀ ದಕ್ಷಿಣ ಭಾರತಕ್ಕೆ ಈ ಸಿನಿಮಾ ಮಾಡಬೇಕು ಎನ್ನುವ ಆಸೆ ನನ್ನದು. ಈ ಕುರಿತು ಸಲ್ಮಾನ್‌ ಖಾನ್‌ ಅವರ ಜೊತೆ ಮಾತನಾಡಿ, ‘ನಿಮಗೊಂದು ಕಥೆ ಬರೆದಿದ್ದೇನೆ ಅದನ್ನು ಹೇಳಬೇಕು’ ಎಂದು ಕೇಳಿಕೊಂಡಿದ್ದೆ. ಸೆಪ್ಟೆಂಬರ್‌ ಕೊನೆಯ ವಾರದಲ್ಲಿ ಅವರನ್ನು ಭೇಟಿಯಾಗಬೇಕಿತ್ತು, ಆದರೆ ಅದು ಸಾಧ್ಯವಾಗಲಿಲ್ಲ. ಆ ಪಾತ್ರ ಅಲ್ಲಿ ಅವರು ಮಾಡಿದರೇ ಚೆಂದ, ಇಲ್ಲಿ ನಾನು ಮಾಡಿದರೇ ಚಂದ. ಆಸೆ ಇಟ್ಟುಕೊಂಡು ನಾನೇ ಅಲ್ಲಿ ಮಾಡಬೇಕು ಎಂದರೆ ತಪ್ಪಾಗುತ್ತದೆ. ಇದು ಸಿನಿಮಾದ ಅಗತ್ಯತೆ.

ಸಿನಿಮಾನೇ ಬೇರೆ ಗೆಳೆತನವೇ ಬೇರೆ. ಅವರು ಒಪ್ಪಿಕೊಳ್ಳಬೇಕು. ಅವರ ಬಳಿಗೆ ಹೋಗಿ ಚರ್ಚಿಸಿದ ಬಳಿಕವಷ್ಟೇ ಮುಂದಿನದ್ದನ್ನು ಹೇಳಲು ಸಾಧ್ಯ. ಕಥೆಯನ್ನು ಅವರಿಗೆ ಹೇಳುವುದಕ್ಕೆ ನಾನು ಕಾತುರದಿಂದಿದ್ದೇನೆ. ಒಪ್ಪುವುದು ಬಿಡುವುದು ಅವರಿಗೆ ಬಿಟ್ಟಿದ್ದು, ನಾನು ಈ ಕಥೆ ಬರೆದಿದ್ದು ನನಗಾಗಿ. ಆದರೆ ಈ ಕುರಿತು ಜ್ಯಾಕ್‌ ಮಂಜು ಅವರ ಜೊತೆ ಚರ್ಚಿಸಿದಾಗ ಅವರೂ ಸಲ್ಮಾನ್‌ ಖಾನ್‌ ಅವರು ಈ ಪಾತ್ರಕ್ಕೆ ಸೂಕ್ತ ಎಂದರು. ನಿರ್ದೇಶಕನಾಗಿ ನಾನು ನನ್ನ ಕಥೆಗೆ ನ್ಯಾಯ ಒದಗಿಸಬೇಕು, ಅಲ್ಲವೇ’ ಎಂದಿದ್ದಾರೆ.

ಟಾಪ್ ನ್ಯೂಸ್

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದೂ ಜಾಮೀನು ಸಿಕ್ಕಿಲ್ಲ…ಆರ್ಯನ್ ಖಾನ್ ಅರ್ಜಿ ವಿಚಾರಣೆ ಅ.27ಕ್ಕೆ ಮುಂದೂಡಿದ ಹೈಕೋರ್ಟ್

ಇಂದೂ ಜಾಮೀನು ಸಿಕ್ಕಿಲ್ಲ…ಆರ್ಯನ್ ಖಾನ್ ಅರ್ಜಿ ವಿಚಾರಣೆ ಅ.27ಕ್ಕೆ ಮುಂದೂಡಿದ ಹೈಕೋರ್ಟ್

27award

ಆಸ್ಕರ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದೆ ತಮಿಳಿನ “ಕೂಳಾಂಗಲ್” ಸಿನಿಮಾ

kangana

“ನಾಲ್ಕನೇ” ರಾಷ್ಟ್ರೀಯ ಪ್ರಶಸ್ತಿ ಬಾಚಿಕೊಂಡ ನಟಿ ಕಂಗನಾ

1-33

ಮಾವನಿಗೆ ದಾದಾ ಸಾಹೇಬ್ ಫಾಲ್ಕೆ, ಅಳಿಯನಿಗೆ ಅತ್ಯುತ್ತಮ ನಟ ಪ್ರಶಸ್ತಿ

1-rt

ದಾದಾ ಸಾಹೇಬ್‌ ಫಾಲ್ಕೆ ಜೊತೆ ಸೂಪರ್‌ ಸ್ಟಾರ್‌ ರಜನಿಕಾಂತ್‌ಗೆ ಡಬಲ್ ಸಂಭ್ರಮ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಬಂಧನ

ಲಾಡ್ಜ್ ಗೆ ಕರೆದೊಯ್ದು ಆತ್ಯಾಚಾರ: ಆರೋಪಿಸಿ ಬಂಧನ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.