ಹಾಲಿವುಡ್ ಗೆ ಹಾರಲಿದ್ದಾರಾ ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ?
Team Udayavani, May 26, 2021, 4:30 PM IST
ಹೈದರಾಬಾದ್ : ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಇದೀಗ ಪ್ರಭಾಸ್ ಹಾಲಿವುಡ್ ಗೆ ಹಾರಲಿದ್ದಾರಂತೆ. ಪ್ರಭಾಸ್ ‘Mission Impossible 7’ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಪ್ರಭಾಸ್ ಶೀಘ್ರದಲ್ಲೇ ಹಾಲಿವುಡ್ ಚಿತ್ರ ಮಿಷನ್ ಇಂಪಾಸಿಬಲ್ 7 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ. ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿಯಿಂದ ಪ್ರಭಾಸ್ ಅಭಿಮಾನಿಗಳು ಬಹಳ ಸಂತೋಷಗೊಂಡಿದ್ದಾರೆ. ಸೂಪರ್‌ಹಿಟ್ ಫ್ರ್ಯಾಂಚೈಸ್ ‘ಮಿಷನ್ ಇಂಪಾಸಿಬಲ್’ ನ ಎರಡು ಚಿತ್ರಗಳನ್ನು ನಿರ್ದೇಶಿಸಿರುವ ನಿರ್ದೇಶಕ ಕ್ರಿಸ್ಟೋಫರ್ ಮೆಕ್‌ಕ್ವಾರಿ, ಚಿತ್ರದ 7ನೇ ಪಾರ್ಟ್ ಗಾಗಿ ಪ್ರಭಾಸ್ ಅವರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಚಿತ್ರದಲ್ಲಿ ಪ್ರಭಾಸ್ ಅವರಿಗೆ ಪ್ರಮುಖ ಪಾತ್ರ ಸಿಗಲಿದೆ ಎನ್ನಲಾಗಿದೆ.
ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ಸುದ್ದಿಯ ಪ್ರಕಾರ, ಕ್ರಿಸ್ಟೋಫರ್ ಮ್ಯಾಕ್ವಾರಿ ಮತ್ತು ಪ್ರಭಾಸ್ ಇಬ್ಬರೂ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಸುದ್ದಿಯ ಬಗ್ಗೆ ಎರಡೂ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ತಮ್ಮ ಅಮೋಘ ನಟನೆಯ ಕಾರಣದಿಂದ ಇಡೀ ಜಗತ್ತಿನಲ್ಲಿ ಖ್ಯಾತಿ ಪಡೆದಿದ್ದಾರೆ. ತಮ್ಮ ನಟನೆಯಿಂದ ಲಕ್ಷಾಂತರ ಹೃದಯಗಳನ್ನುಗೆದ್ದಿರುವ ಪ್ರಭಾಸ್, ಬಾಹುಬಲಿ ಚಿತ್ರದಿಂದಾಗಿ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
@62ನೇ ಹುಟ್ಟುಹಬ್ಬ: ಸ್ಟಾರ್ ನಟನಾಗುವ ಮುನ್ನ ಲಾಲೆಟ್ಟನ್ ಖ್ಯಾತ ಕುಸ್ತಿಪಟುವಾಗಿದ್ದರು!
ಎಲ್ಲಾ ಪ್ರಾದೇಶಿಕ ಭಾಷೆ ಪೂಜನೀಯ: ಪ್ರಧಾನಿ ಮೋದಿ ಹೇಳಿಕೆಗೆ ಕಿಚ್ಚ ಸುದೀಪ್ ಹೇಳಿದ್ದೇನು?
ಅಭಿಮಾನಿಗಳಿಗೆ ಸಿಹಿ ಸುದ್ದಿ: ಜ್ಯೂ.NTR 31 ಫಸ್ಟ್ ಲುಕ್…ಪ್ರಶಾಂತ್ ನೀಲ್ ಹೊಸ ಚಿತ್ರ
ಹಿಂದಿ ಕಿಚ್ಚಿಗೆ ಅರ್ಜುನ್ ರಾಮ್ಪಾಲ್ ತುಪ್ಪ
ಕೆಜಿಎಫ್ 2 ಚಿತ್ರ 1,200 ಕೋಟಿ ರೂ. ಕ್ಲಬ್ ಗೆ: ಅಮೆಜಾನ್ ಪ್ರೈಮ್ ನಲ್ಲೂ ಸಿನಿಮಾ ವೀಕ್ಷಿಸಿ