ದಿಗ್ಗಜ ಬಾಲಿವುಟ್‌ ನಟ,ನಟಿಯರ ಗುರು ರೋಶನ್‌ ತನೇಜಾ ಇನ್ನಿಲ್ಲ

Team Udayavani, May 11, 2019, 1:18 PM IST

ಮುಂಬಯಿ : ಬಾಲಿವುಡ್‌ನ‌ ಹಲವು ದಿಗ್ಗಜ ನಟ, ನಟಿಯರಿಗೆ ತರಬೇತಿ ನೀಡಿದ್ದ ಆ್ಯಕ್ಟಿಂಗ್‌ ಗುರು ಎಂದು ಖ್ಯಾತರಾಗಿದ್ದ ರೋಶನ್‌ ತನೇಜಾ ಅವರು ಶುಕ್ರವಾರ ರಾತ್ರಿ ನಿಧನಹೊಂದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.

ಸುದೀರ್ಘ‌ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಮ್ಮನ್ನು ಅಗಲಿದ್ದಾರೆ ಎಂದು ಪುತ್ರ ರೋಹಿತ್‌ ತನೇಜಾ ಹೇಳಿದ್ದಾರೆ.

ಪತ್ನಿ ಮಿಥಿಕಾ ಮತ್ತು ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.

ಸಾಂತ್ರಾಕ್ರೂಜ್‌ ಪಶ್ಚಿಮದಲ್ಲಿರುವ ಚಿತಾಗಾರದಲ್ಲಿ ಶನಿವಾರ ಸಂಜೆ ಅವರ ಅಂತಿಮ ಸಂಸ್ಕಾರ ನಡೆಯಲಿದೆ.

1960 ರಿಂದ ನಟನಾ ತರಬೇತಿ ನೀಡುತ್ತಿದ್ದ ತನೇಜಾ , ಮೊದಲು ಪುಣೆಯ ಎಫ್ಟಿಐಐ ನಲ್ಲಿ ಮತ್ತು ಬಳಿಕ ಮುಂಬಯಿಯ ಖಾಸಗಿ ಸಂಸ್ಥೆಯಲ್ಲಿ ತರಬೇತಿ ನೀಡುತ್ತಿದ್ದರು.

ಶಬಾನಾ ಅಜ್ಮಿ, ನಾಸೀರುದ್ದೀನ್‌ ಶಾ, ಜಯಾ ಬಚ್ಚನ್‌, ಅನಿಲ್‌ ಕಪೂರ್‌ , ಶತ್ರಘ್ನ ಸಿನ್ಹಾ ಸೇರಿ ನೂರಾರು ನಟರಿಗೆ ತರಬೇತಿಯನ್ನು ನೀಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ