ಕೆನಡಿಯನ್‌ ಪತ್ನಿಯಿಂದ ಪ್ರತ್ಯೇಕಗೊಂಡ ಬಾಲಿವುಡ್‌ ನಟ ಅರುಣೋದಯ ಸಿಂಗ್‌

Team Udayavani, May 11, 2019, 3:52 PM IST

ಹೊಸದಿಲ್ಲಿ : ನಟ ಇರ್ಫಾನ್‌ ಖಾನ್‌ ನಟಿಸಿದ್ದ ಬ್ಲಾಕ್‌ ಮೇಲ್‌ ಚಿತ್ರದಲ್ಲಿ ಕಳೆದ ಬಾರಿ ಕಾಣಿಸಿಕೊಂಡಿದ್ದ ಬಾಲಿವುಡ್‌ ನ‌ಟ ಅರುಣೋದಯ ಸಿಂಗ್‌, ಕೆನಡಿಯನ್‌ ಪತ್ನಿ ಲೀ ಎಲ್ಟನ್‌ ನಿಂದ ತಾನು ಪ್ರತ್ಯೇಕಗೊಂಡಿರುವುದಾಗಿ ಪ್ರಕಟಿಸಿದ್ದಾರೆ. ಇವರು ಪರಸ್ಪರ ಮದುವೆಯಾಗಿ ಮೂರು ವರ್ಷಗಳಾಗಿವೆ.

ಅರುಣೋದಯ ಸಿಂಗ್‌ ಇನ್‌ಸ್ಟಾಗ್ರಾಂ ನಲ್ಲಿ ಹೀಗೆ ಬರೆದಿದ್ದಾರೆ :

‘ಈಚೆಗೆ ಕೆಲ ಕಾಲದಿಂದ ನಾನಿಲ್ಲಿ ಏನೂ ಬರೆದಿಲ್ಲ, ಪೋಸ್ಟ್‌ ಮಾಡಿಯೂ ಇಲ್ಲ; ಅದಕ್ಕೆ ಕಾರಣ ಇದೆ ಮತ್ತು ಅದು ದುಃಖಕರವಾಗಿದೆ. ಈಗ ನನ್ನ ಮದುವೆ ಮುಗಿದು ಹೋಗಿರುವಂತಿದೆ. ನಾವು ಪ್ರೀತಿಯಲ್ಲಿ ನಿಜಕ್ಕೂ ನಿಕಟವಾಗಿದ್ದೆವು. ಆದರೆ ವಾಸ್ತವದಲ್ಲಿ ನಾವು ಬಾಳಲಿಲ್ಲ…’

‘ನಮ್ಮ ಉತ್ತಮ ಪ್ರಯತ್ನ, ಆಪ್ತ ಸಮಾಲೋಚನೆ ಮತ್ತು ಈಗಿನ ಪ್ರಾಯೋಗಿಕ ಪ್ರತ್ಯೇಕತೆಯ ಹೊರತಾಗಿಯೂ ನಮ್ಮೊಳಗಿನ ಭಿನ್ನಮತವನ್ನು ನಿವಾರಿಸಿಕೊಳ್ಳಲು ನಮ್ಮಿಂದಾಗಿಲ್ಲ. ಈ ಹಂತದಲ್ಲಿ ನಮ್ಮ ನಮ್ಮ ಹಾದಿಯಲ್ಲಿ ಹೋಗುವುದೇ ವಿವೇಕಯುತವಾಗಿದೆ ಮತ್ತು ನಾವಿಬ್ಬರೂ ಇದಕ್ಕಿಂತ ಒಳ್ಳೆಯದಕ್ಕೆ ಅರ್ಹರಿದ್ದೇವೆ ಎಂದು ಭಾವಿಸುತ್ತೇವೆ. ಆದುದರಿಂದ ನಾವಿದನ್ನು ಸಹಾನುಭೂತಿ ಮತ್ತು ಘನತೆಯಿಂದ ನಿರ್ಧರಿಸಲು ಪ್ರಯತ್ನಿಸುತ್ತೇವೆ’.

ಮುಂಬಯಿ ಮಿರರ್‌ ಪ್ರಕಟಿಸಿರುವ ವರದಿಯ ಪ್ರಕಾರ ಲೀ ಅವರು ಗೋವಾದಲ್ಲಿ ಗಾರ್ಡನ್‌ ರೆಸ್ಟೋರೆಂಟ್‌ ನಡೆಸುತ್ತಿದ್ದು ಮುಂಬಯಿ – ಗೋವಾ ನಡುವೆ ಓಡಾಡಿಕೊಂಡಿದ್ದಾರೆ. 2016ರಲ್ಲಿ ಇವರಿಬ್ಬರೂ ಖಾಸಗಿ ಸಮಾರಂಭದಲ್ಲಿ ಮದುವೆಯಾಗಿದ್ದರು. ಲೀ ಅವರು ತಮ್ಮ ಹೆಸರನ್ನು ಲೀ ಅನ್ನಾ ಸಿಂಗ್‌ ಎಂದು ಬದಲಿಸಿಕೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ