ಮೀ ಟೂ: ಹೌಸ್ಫುಲ್ 4 ಚಿತ್ರದ ನಿರ್ದೇಶಕನ ಪಟ್ಟದಿಂದ ಇಳಿದ ಸಾಜಿದ್
Team Udayavani, Oct 12, 2018, 3:33 PM IST
ಹೊಸದಿಲ್ಲಿ: ಬಾಲಿವುಡ್ ನಲ್ಲಿ ದಿನದಿಂದ ದಿನಕ್ಕೆ ”ಮೀ ಟೂ” ಲೈಂಗಿಕ ಹಗರಣದ ಆಂದೋಲನ ಹೆಚ್ಚುಚ್ಚು ಕಾವನ್ನು ಪಡೆಯುತ್ತಿದೆ. ಈಗಾಗಲೇ ಚಿತ್ರ ನಟರಾದ ಆಲೋಕ್ ನಾಥ್, ನಿರ್ದೇಶಕ ಸುಭಾಷ್ ಘಾಯ್, ಲವ ರಂಜನ್ ಅವರಿಗೆ ಉರುಳಾಗಿ ಪರಿಣಮಿಸಿರುವ ‘ಮೀ ಟೂ’ ಇದೀಗ ಚಿತ್ರ ನಿರ್ದೇಶಕ ಸಾಜಿದ್ ಖಾನ್ ಅವರನ್ನೂ ಸುತ್ತಿಕೊಂಡಿದೆ.
ಇದರ ಪರಿಣಾಮವಾಗಿ ಸಾಜಿದ್ ಖಾನ್ ಅವರು ತಾವು ನಿರ್ದೇಶಿಸುತ್ತಿರುವ “ಹೌಸ್ಫುಲ್ 4” ಎಂಬ ಚಿತ್ರದ ನಿದೇರ್ಶಕನ ಪಟ್ಟದಿಂದ ಕೆಳಗಿಳಿದಿದ್ದಾರೆ. ಹಾಗಿದ್ದರೂ ಸತ್ಯ ಸಂಪೂರ್ಣವಾಗಿ ಹೊರ ಬರುವ ತನಕ ಜನರು ತೀರ್ಪು ಕೊಡಲು ಮುಂದಾಗಬಾರದು ಎಂದು ಅವರು ಟ್ವಿಟರ್ ನಲ್ಲಿ ವಿನಂತಿಸಿದ್ದಾರೆ.
ನಡಿಯಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೇನ್ಮೆಂಟ್ ಬ್ಯಾನರ್ ನಡಿ ನಿರ್ಮಿಸಲಾಗುತ್ತಿರುವ ‘ಹೌಸ್ಫುಲ್ 4’ ಚಿತ್ರದ ಮೊದಲ ಎರಡು ಕಂತನ್ನು ಸಾಜಿದ್ ಖಾನ್ ನಿರ್ದೇಶಿಸಿದ್ದಾರೆ. ಈ ಚಿತ್ರ 2019 ದೀಪಾವಳಿಯ ಹೊತ್ತಿಗೆ ತೆರೆ ಕಾಣುವ ಗುರಿ ಹೊಂದಿದೆ.
ಹೌಸ್ಫುಲ್ 4 ಚಿತ್ರದಲ್ಲಿ ರಿತೇಶ್ ದೇಶ್ಮುಖ್, ಬಾಬ್ಬಿ ದೇವಲ್, ಶರತ್ ಕೇಳ್ಕರ್, ಪೂಜಾ ಹೆಗ್ಡೆ, ಕೃತಿ ಖರಬಂದಾ ಮತ್ತು ಕೃತಿ ಸ್ಯಾನನ್ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್ ಖಾನ್
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
MUST WATCH
ಹೊಸ ಸೇರ್ಪಡೆ
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು