ಬಿಗ್ ಬಾಸ್: ಸಲ್ಮಾನ್ ಸಂಭಾವನೆ 16 ಕೋಟಿ?
Team Udayavani, Jul 7, 2020, 6:11 AM IST
ಮುಂಬಯಿ: ಹಿಂದಿ ಭಾಷೆಯಲ್ಲಿ ಪ್ರಸಾರವಾಗಲಿರುವ ‘ಬಿಗ್ಬಾಸ್’ 14ನೇ ಆವೃತ್ತಿ ನಡೆಸಿಕೊಡಲಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಸಂಭಾವನೆ ಎಷ್ಟು?
ಈ ಬಗ್ಗೆ ಹಲವು ಚರ್ಚೆಗಳು, ಗಾಸಿಪ್ಗಳು ಹರಿದಾಡುತ್ತಿವೆ.
ಅಕ್ಟೋಬರ್ನಲ್ಲಿ ಪ್ರಸಾರವಾಗಲಿದೆ ಎಂದು ನಿರೀಕ್ಷಿಸಲಾಗಿರುವ ಕಾರ್ಯಕ್ರಮ ನಡೆಸಿಕೊಡುವ ನಿಟ್ಟಿನಲ್ಲಿ ಸಲ್ಮಾನ್ ಖಾನ್ ಪ್ರತಿ ಎಪಿಸೋಡಿಗೆ 16 ಕೋಟಿ ರೂ. ಸಂಭಾವನೆ ನಿರೀಕ್ಷೆ ಮಾಡುತ್ತಿದ್ದಾರೆಂದು ಹೇಳಲಾಗಿದೆ.
2010ರಿಂದ ಅವರು ಸತತವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ.
ಬಾಲಿವುಡ್ ನಟ ನಾಲ್ಕರಿಂದ ಐದನೇ ಆವೃತ್ತಿವರೆಗೆ ಪ್ರತಿ ಎಪಿಸೋಡ್ಗೆ 2.5 ಕೋಟಿ ರೂ. ಸಂಭಾವನೆ ಪಡೆದುಕೊಂಡಿದ್ದರು.
ಏಳನೇ ಆವೃತ್ತಿ ಅವಧಿಗೆ 5 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದ್ದರು. 9ನೇ ಆವೃತ್ತಿಯ ಕಾರ್ಯಕ್ರಮ ನಿರೂಪಣೆಗೆ ಪ್ರತಿ ಎಪಿಸೋಡ್ಗೆ 7-8 ಕೋಟಿ ರೂ., 12ನೇ ಆವೃತ್ತಿಗೆ 12-14 ಕೋಟಿ ರೂ., 13ನೇ ಆವೃತ್ತಿಗೆ ಎಲ್ಲ ಎಪಿಸೋಡುಗಳಿಗೆ ಸೇರಿ ಅವರಿಗೆ ಸರಿಸುಮಾರು 403 ಕೋಟಿ ರೂ. ಸಂದಾಯವಾಗಿತ್ತು.
ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಆರಂಭಿಕ ಹಂತದ ಚಿತ್ರೀಕರಣ ಇನ್ನಷ್ಟೇ ಶುರುವಾಗಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?