ಕೋವಿಡ್: ಮೂವರು ಪಾಕ್ ಕ್ರಿಕೆಟಿಗರು ಗುಣಮುಖ; ಬುಧವಾರ ಇಂಗ್ಲೆಂಡಿಗೆ ಪಯಣ
Team Udayavani, Jul 7, 2020, 6:02 AM IST
ಲಾಹೋರ್: ಕೋವಿಡ್ ಪಾಸಿಟಿವ್ ಹೊಂದಿದ್ದ ಪಾಕಿಸ್ಥಾನದ ಮೂವರು ಕ್ರಿಕೆಟಿಗರೀಗ ಗುಣಮುಖರಾಗಿದ್ದಾರೆ. ಇವರಲ್ಲಿ ನೆಗೆಟಿವ್ ಫಲಿತಾಂಶ ಕಂಡುಬಂದಿದ್ದು, ಬುಧವಾರ ಇಂಗ್ಲೆಂಡಿಗೆ ಪ್ರಯಾಣಿಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ಪಿಸಿಬಿ ತಿಳಿಸಿದೆ.
ನೆಗೆಟಿವ್ ಫಲಿತಾಂಶ ದಾಖಲಿಸಿದ ಕ್ರಿಕೆಟಿಗರೆಂದರೆ ಹೈದರ್ ಅಲಿ, ಇಮ್ರಾನ್ ಖಾನ್ ಮತ್ತು ಕಾಶಿಫ್ ಭಟ್ಟಿ. ಜತೆಗೆ ಮಸಾಜ್ ಮಾಡುವ ಮಲಂಗ್ ಅಲಿ ಫಲಿತಾಂಶವೂ ನೆಗೆಟಿವ್ ಬಂದಿದ್ದು, ಅವರೂ ಲಂಡನ್ನಿಗೆ ವಿಮಾನ ಏರಲಿದ್ದಾರೆ.ಆದರೆ ವೇಗಿ ಹ್ಯಾರಿಸ್ ರವೂಫ್ ಅವರ ಫಲಿತಾಂಶ ಪುನಃ ಪಾಸಿಟಿವ್ ಬಂದ ಕಾರಣ ಅವರು ಪಾಕಿಸ್ಥಾನದಲ್ಲೇ ಚಿಕಿತ್ಸೆ ಮುಂದುವರಿಸಲಿದ್ದಾರೆ.
ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾದ 10 ಮಂದಿ ಕ್ರಿಕೆಟಿಗರ ಮೊದಲ ಸುತ್ತಿನ ಕೋವಿಡ್ ಫಲಿತಾಂಶ ಪಾಸಿಟಿವ್ ಬಂದಿತ್ತು. ಇವರನ್ನು ಹೊರತುಪಡಿಸಿ ಉಳಿದವರೆಲ್ಲ ಇಂಗ್ಲೆಂಡಿಗೆ ಪಯಣಿಸಿದ್ದರು. ದ್ವಿತೀಯ ಸುತ್ತಿನಲ್ಲಿ 6 ಮಂದಿಯಲ್ಲಿ ನೆಗೆಟಿವ್ ಫಲಿತಾಂಶ ಕಂಡುಬಂದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್