ವಿವಾದಕ್ಕೆ ಕಾರಣವಾಯ್ತು ಸಲ್ಲು ನಿರ್ಮಾಣದ “ಲವ್​ರಾತ್ರಿ’ ಟೈಟಲ್

Team Udayavani, Aug 7, 2018, 3:19 PM IST

ಬಾಲಿವುಡ್​ ನಟ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್ ಪತಿ ಆಯುಷ್ ಶರ್ಮಾ ಅಭಿನಯದ “ಲವ್​ರಾತ್ರಿ’ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಚಿತ್ರದ ನಿರ್ಮಾಪಕ ಕಮ್ ನಟ ಸಲ್ಮಾನ್ ಖಾನ್ “ಪ್ರೀತಿ ಹಾಗೂ ಪ್ರಣಯ’ದ ಕಥೆ ನಿಮಗಾಗಿ.. ಎಂಬ ಹೆಸರಿನಲ್ಲಿ “ಲವ್​ರಾತ್ರಿ’ಯ ಮೊದಲ ಟ್ರೈಲರ್ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್​ನ್ನು 50 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ವೀಕ್ಷಿಸಿದ್ದಾರೆ.

ನವರಾತ್ರಿ ಹಬ್ಬದಲ್ಲಿ ನಡೆಯುವ ಲವ್‍ಸ್ಟೋರಿ ಕಥಾಹಂದರವನ್ನೊಳಗೊಂಡ ಈ ಚಿತ್ರದ ಟೈಟಲ್ ಈಗಾಗಲೇ ವಿವಾದಕ್ಕೆ ಕಾರಣವಾಗಿದೆ. ಚಿತ್ರದ ಟೈಟಲ್ ಮತ್ತು ಕಥೆ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆಯುಂಟು ಮಾಡಿದೆ ಎಂದು ವಿಎಚ್​ಪಿ ಸಂಘಟನೆ ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರದ ಬಿಡುಗಡೆಗೆ ತಡೆಯೊಡ್ಡುವುದಾಗಿ ಬೆದರಿಕೆಯನ್ನು ಹಾಕಿದೆ.

ಇನ್ನು ಚಿತ್ರದಲ್ಲಿ ಆಯುಷ್ ಶರ್ಮಾ ಎದುರಿಗೆ ನಾಯಕಿಯಾಗಿ ವರೀನಾ ಹುಸೇನ್ ಕಾಣಿಸಿಕೊಂಡಿದ್ದು, ಈ ಸಿನಿಮಾದ ಮೂಲಕ ಬಾಲಿವುಡ್‍ಗೆ ಮತ್ತೊಂದು ಯುವ ಜೋಡಿಯ ಆಗಮನವಾಗುತ್ತಿದೆ. ಚಿತ್ರಕ್ಕೆ ಅಭಿರಾಜ್ ಮಿನವಾಲ ಆ್ಯಕ್ಷನ್ ಕಟ್ ಹೇಳಿದ್ದು, ಸಲ್ಮಾನ್‍ ಖಾನ್ ಸಹೋದರರಾದ ಅರ್ಬಾಜ್ ಮತ್ತು ಸೊಹೈಲ್ ಖಾನ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು ಅಕ್ಟೋಬರ್ 5ರಂದು ತೆರೆಗೆ ಬರಲು ಸಜ್ಜಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ