ಹೃತಿಕ್ – ಸೈಫ್ ʼವಿಕ್ರಂ ವೇದʼ ಟೀಸರ್ ಬಿಡುಗಡೆ: ಇದು ಗ್ಯಾಂಗ್ ಸ್ಟರ್ ಹೇಳಿದ ಕಥೆ!
ಹಿಂದಿಯಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ವಿಕ್ರಂ ಹಾಗೂ ವೇದನಾಗಿ ಕಾಣಿಸಿಕೊಂಡಿದ್ದಾರೆ.
Team Udayavani, Aug 24, 2022, 12:55 PM IST
ಮುಂಬಯಿ: ಬಾಲಿವುಡ್ ಬಹು ನಿರೀಕ್ಷಿತ ಆ್ಯಕ್ಷನ್ ಥ್ರಿಲ್ಲರ್ ʼವಿಕ್ರಂ ವೇದʼ ಚಿತ್ರದ ಟೀಸರ್ ಬುಧವಾರ (ಆ.24 ರಂದು) ರಿಲೀಸ್ ಆಗಿದೆ. 2017 ರಲ್ಲಿ ತೆರೆಗೆ ಬಂದ ತಮಿಳಿನ ʼವಿಕ್ರಂ ವೇದʼ ಚಿತ್ರದ ರಿಮೇಕ್ ಚಿತ್ರಕ್ಕೆ ಹಿಂದಿಯಲ್ಲೂ ಅದೇ ಟೈಟಲ್ ಇಡಲಾಗಿದೆ. ಮಾಧವನ್ ಹಾಗೂ ವಿಜಯ್ ಸೇತುಪತಿ ಕಾಲಿವುಡ್ ನಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು.
ಹಿಂದಿಯಲ್ಲಿ ಹೃತಿಕ್ ರೋಷನ್ ಹಾಗೂ ಸೈಫ್ ಅಲಿ ಖಾನ್ ವಿಕ್ರಂ ಹಾಗೂ ವೇದನಾಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಪೊಲೀಸ್ ಹಾಗೂ ಗ್ಯಾಂಗ್ ಸ್ಟರ್ ನಡುವಿನ ಕಥೆ. ಚಿತ್ರದ ಪೋಸ್ಟರ್ ನಿಂದ ಗಮನ ಸೆಳೆದಿದ್ದ ನಟರು ಟೀಸರ್ ನಲ್ಲಿ ಅಬ್ಬರಿಸಿದ್ದಾರೆ.
ಟೀಸರ್ ನ ಆರಂಭದಲ್ಲಿ ಪೊಲೀಸ್ ( ಸೈಫ್ ಅಲಿ ಖಾನ್) ಹಾಗೂ ಗ್ಯಾಂಗ್ ಸ್ಟರ್ ( ಹೃತಿಕ್ ರೋಷನ್) ಮುಖಾಮುಖಿಯಾಗಿ ಕೂತು ಗ್ಯಾಂಗ್ ಸ್ಟರ್ ಕಥೆ ಹೇಳುವ ದೃಶ್ಯವಿದೆ. ರಫ್ & ಟಫ್ ಲುಕ್ ನಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡರೆ, ರಗಡ್ ಅವತಾರದಲ್ಲಿ ಹೃತಿಕ್ ಕಾಣಿಸಿಕೊಂಡಿದ್ದಾರೆ. ಭರಪೂರ ಸಾಹಸಮಯ ದೃಶ್ಯಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ. ರಾಧಿಕಾ ಆಪ್ಟೆ ಅವರೊಂದಿಗಿನ ಪ್ರಣಯದ ಕಥೆಯ ಎಳೆಯನ್ನೂ ಇಲ್ಲಿ ತೋರಿಸಲಾಗಿದೆ.
ಚಿತ್ರಕ್ಕೆ ಪುಷ್ಕರ್ ಹಾಗೂ ಗಾಯತ್ರಿ ಅವರ ನಿರ್ದೇಶನವಿದೆ. ಸಿನಿಮಾದಲ್ಲಿ ಯೋಗಿತಾ ಬಿಹಾನಿ, ರೋಹಿತ್ ಸರಫ್, ಶರೀಬ್ ಹಶ್ಮಿ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ. ಇದೇ ಸೆಪ್ಟೆಂಬರ್ 30 ರಂದು ಚಿತ್ರ ತೆರೆಗೆ ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್