ಅರಿವು ಮೂಡಿಸಲು ‘ಕಾಶ್ಮೀರ್ ಫೈಲ್ಸ್’ ಸಹಾಯ ಮಾಡಿದೆ: ಅನುಪಮ್ ಖೇರ್ ಭಾವುಕ

ಕಾಶ್ಮೀರಿ ಹಿಂದೂವಾಗಿ ನಾನು ಈ ದುರಂತ ಘಟನೆಗಳೊಂದಿಗೆ ಬದುಕಿದ್ದೇನೆ....

Team Udayavani, Nov 23, 2022, 6:31 PM IST

1-wwqwwqe

ಪಣಜಿ: 1990 ರ ದಶಕದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯಗಳ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ಅರಿವು ಮೂಡಿಸಲು ‘ಕಾಶ್ಮೀರ್ ಫೈಲ್ಸ್’ ಸಹಾಯ ಮಾಡಿದೆ ಎಂದು ಚಿತ್ರದ ನಾಯಕ ನಟ ಅನುಪಮ್ ಖೇರ್ ಹೇಳಿದ್ದಾರೆ.

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 53ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಇಫಿ ಟೇಬಲ್ ಟಾಕ್ಸ್ ನಲ್ಲಿ ಅವರು ಭಾಗವಹಿಸಿ ಮಾತನಾಡುತ್ತಾ, ಕಾಶ್ಮೀರ್ ಫೈಲ್ಸ್ ನೈಜ ಘಟನೆಗಳನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರಕ್ಕಾಗಿ ಜಗತ್ತಿನಾದ್ಯಂತ ಸುಮಾರು 500 ಜನರನ್ನು ಸಂದರ್ಶಿಸಿದ್ದಾರೆ. ಜನವರಿ 19, 1990 ರ ರಾತ್ರಿ, ಹೆಚ್ಚುತ್ತಿರುವ ಹಿಂಸಾಚಾರದಿಂದಾಗಿ ಕಾಶ್ಮೀರ ಕಣಿವೆಯಲ್ಲಿ 5 ಲಕ್ಷ ಕಾಶ್ಮೀರಿ ಪಂಡಿತರು ತಮ್ಮ ಮನೆಗಳನ್ನು ಮತ್ತು ಅವರ ನೆನಪುಗಳನ್ನು ಬಿಟ್ಟು ಹೋಗಬೇಕಾಯಿತು. ಒಬ್ಬ ಕಾಶ್ಮೀರಿ ಹಿಂದೂವಾಗಿ, ನಾನು ಈ ದುರಂತ ಘಟನೆಗಳೊಂದಿಗೆ ಬದುಕಿದ್ದೇನೆ. ಆದರೆ ಅಂತಹ ಘಟನೆ ನಡೆದಿರುವುದನ್ನು ಯಾರೂ ಒಪ್ಪಿಕೊಳ್ಳಲಿಲ್ಲ. ಜಗತ್ತು ಈ ದುರಂತವನ್ನು ಮರೆಮಾಡಲು ಪ್ರಯತ್ನಿಸುತ್ತಿದೆ. ಆದರೆ ಕಾಶ್ಮೀರ ಫೈಲ್ಸ್ ಈ ದುರಂತವನ್ನು ತೆರೆಯ ಮೇಲೆ ತೋರಿಸುವ ಮೂಲಕ ಅವರ ನೋವನ್ನು ವಾಸಿಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದರು.

ಕಾಶ್ಮೀರಿ ಪಂಡಿತರ ದುರಂತವನ್ನು ಮೆಲುಕು ಹಾಕಿದ ಅನುಪಮ್ ಖೇರ್, ಕಾಶ್ಮೀರ್ ಫೈಲ್ಸ್ ಅವರಿಗೆ ಕೇವಲ ಚಲನಚಿತ್ರವಲ್ಲ, ಆದರೆ ಅವರು ತೆರೆಯ ಮೇಲೆ ಚಿತ್ರಿಸಿದ ಭಾವನೆ. ‘ನಾನು ಅವರ ಮನೆಗಳಿಂದ ಹೊರಹಾಕಲ್ಪಟ್ಟ ಜನರನ್ನು ಪ್ರತಿನಿಧಿಸುತ್ತಿರುವಾಗ, ಅವುಗಳನ್ನು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ವ್ಯಕ್ತಪಡಿಸುವುದು ನನ್ನ ದೊಡ್ಡ ಜವಾಬ್ದಾರಿಯಾಗಿತ್ತು. ಈ ಚಿತ್ರದಲ್ಲಿ ನೀವು ನೋಡುತ್ತಿರುವ ನನ್ನ ಕಣ್ಣೀರು, ನನ್ನ ನೋವು ಎಲ್ಲವೂ ನಿಜ ಎಂದು ಭಾವುಕರಾದರು.

ಏತನ್ಮಧ್ಯೆ, ಕೋವಿಡ್ ಸಾಂಕ್ರಾಮಿಕ ಮತ್ತು ನಂತರದ ಲಾಕ್‍ಡೌನ್ ಜನರು ಚಲನಚಿತ್ರಗಳನ್ನು ನೋಡುವ ವಿಧಾನದ ಮೇಲೆ ಪರಿಣಾಮ ಬೀರಿದೆ. ಈ ಅಂಶಕ್ಕೆ ಹೆಚ್ಚಿನ ಒತ್ತು ನೀಡುತ್ತಾ, ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ಲಾಟ್‍ಫಾರ್ಮ್‍ಗಳು ಪ್ರೇಕ್ಷಕರನ್ನು ಜಾಗತಿಕ ಚಲನಚಿತ್ರಗಳು ಮತ್ತು ಬಹುಭಾಷಾ ಚಲನಚಿತ್ರಗಳನ್ನು ವೀಕ್ಷಿಸಲು ವೇದಿಕೆ ಕಲ್ಪಿಸಿದೆ ಎಂದರು.

ಪ್ರೇಕ್ಷಕರು ನೈಜ ಚಿತ್ರಗಳನ್ನು ಇಷ್ಟಪಡಲಾರಂಭಿಸಿದರು. ರಿಯಾಲಿಟಿ ಅಂಶವಿರುವ ಸಿನಿಮಾಗಳು ಪ್ರೇಕ್ಷಕರ ಮನಸೂರೆಗೊಳ್ಳುವುದು ಖಂಡಿತ. ಕಾಶ್ಮೀರ ಫೈಲ್ಸ್ ನಂತಹ ಚಿತ್ರಗಳ ಯಶಸ್ಸು ಇದರ ಸೂಚನೆಯಾಗಿದೆ. ಯಾವುದೇ ಹಾಡುಗಳು ಮತ್ತು ಹಾಸ್ಯಗಳಿಲ್ಲದ ಈ ಚಿತ್ರ ಇನ್ನೂ ಉತ್ತಮವಾಗಿ ಸಾಗುತ್ತಿದೆ. ಇದು ಸಿನಿಮಾದ ಗೆಲುವು ಎಂದು ಅನುಪಮ್ ಖೇರ್ ಪ್ರೇಕ್ಷಕರಿಗೆ ಧನ್ಯವಾದ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕಾಶ್ಮೀರ ಫೈಲ್ಸ್ ಚಿತ್ರ ತಂಡದ ಪ್ರಮುಖರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Afghanistan have Beaten Australia in T20 World cup Super 8 match

T20 World Cup: ಆಸೀಸ್ ಗೆ ಸೋಲುಣಿಸಿದ ಅಫ್ಘಾನ್; ರೋಚಕ ಘಟ್ಟದತ್ತ ಸೂಪರ್ 8

T20 World Cup; ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್

T20 World Cup; ಎರಡು ಪಂದ್ಯದಲ್ಲಿ ಎರಡು ಹ್ಯಾಟ್ರಿಕ್: ವಿಶ್ವದಾಖಲೆ ಬರೆದ ಪ್ಯಾಟ್ ಕಮಿನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bollywood: ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರ.. ವರನ ತಂದೆ ಹೇಳಿದ್ದೇನು?

Bollywood: ಮದುವೆ ಬಳಿಕ ಸೋನಾಕ್ಷಿ ಇಸ್ಲಾಂಗೆ ಮತಾಂತರ.. ವರನ ತಂದೆ ಹೇಳಿದ್ದೇನು?

Bollywood Actress Salary: Deepika Padukone tops

Bollywood ನಟಿಯರ ಸಂಭಾವನೆ: ದೀಪಿಕಾ ಪಡುಕೋಣೆಗೆ ಮೊದಲ ಸ್ಥಾನ

alka yagnik

Alka Yagnik; ಪ್ರಸಿದ್ದ ಗಾಯಕಿ ಅಲ್ಕಾ ಯಾಗ್ನಿಕ್ ಗೆ ಶ್ರವಣ ದೋಷ; ಹಠಾತ್ ಆಗಿ ಆಗಿದ್ದೇನು?

1-sdsddsa

Allu Arjun ‘ಪುಷ್ಪ 2 ದಿ ರೂಲ್’ ಬಿಡುಗಡೆ ದಿನಾಂಕ ಘೋಷಿಸಿದ ಚಿತ್ರ ತಂಡ

5

Bollywood: ʼಚಂದು ಚಾಂಪಿಯನ್‌ʼಗೆ ಪಾಸಿಟಿವ್‌ ರೆಸ್ಪಾನ್ಸ್:‌ ಮೊದಲ ದಿನ ಗಳಿಸಿದ್ದೆಷ್ಟು?

MUST WATCH

udayavani youtube

ಹುಣಸೂರು ತಾಲೂಕಿನ ಸಮಗ್ರ ಅಭಿವೃದ್ದಿಗೆ ಬದ್ದ: ಸಂಸದ ಯದುವೀರ್‌ ಒಡೆಯರ್

udayavani youtube

ಈಕೆ ಭಾರತದ ಮೊದಲ ಸರಣಿ ಕೊಲೆಗಾರ್ತಿ | ಸೈನೈಡ್ ಮಲ್ಲಿಕಾ

udayavani youtube

ಮುಳ್ಳಯ್ಯನಗಿರಿ,ದತ್ತಪೀಠ, ಸೀತಾಳಯ್ಯನಗಿರಿಯಲ್ಲಿ ಜನಜಾತ್ರೆ; ಖಾಕಿ ಹೈ ಅಲರ್ಟ್

udayavani youtube

ಕಡುಬು ಸೇವೆಗೆ ಒಲಿಯುವ ಮುಂಡ್ರಪಾಡಿ ಈಶ

udayavani youtube

ಅಣ್ಣಾವ್ರ ಅಪರೂಪದ ವಿಡಿಯೋ | ಯೋಗ ದಿನ | ಡಾ. ರಾಜ್ ಕುಮಾರ್

ಹೊಸ ಸೇರ್ಪಡೆ

Kaithota

Bengaluru: ಬುದ್ಧಿಮಾಂದ್ಯರಿಗೆ ಇಕೋ ಥೆರಪಿ, ಕೈತೋಟ ತರಬೇತಿ

Elephant In Zambia Pulls US Tourist Out Of Safari Vehicle

Zambia: ಸಫಾರಿ ವಾಹನದಿಂದ ಮಹಿಳೆಯನ್ನು ಹೊರಗೆಳೆದು ಹತ್ಯೆ ಮಾಡಿದ ಆನೆ!

3-koratagere

Koratagere: ಅಮರ ಪ್ರೀತಿಗೆ ಯುವತಿ ಸಾವು; ಶವ ಪತ್ತೆ

2-aranthodu

Aranthodu: ತಡರಾತ್ರಿ ಭೀಕರ ಕಾರು ಅಪಘಾತ

ibbani tabbida ileyali movie song

Ibbani Tabbida Ileyali; ಬಿಡುಗಡೆಯಾಯಿತು ‘ಓ ಅನಾಹಿತ…..’ ಹಾಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.